newsfirstkannada.com

ಪ್ರೇಮ ವಿವಾಹ.. ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ 2 ಕುಟುಂಬಸ್ಥರು, ಮೂವರು ಸಾವು, ಓರ್ವ ಗಂಭೀರ

Share :

Published February 29, 2024 at 6:15am

Update February 29, 2024 at 6:17am

    ಹುಡುಗ, ಹುಡುಗಿ ಬೇರೆ ಬೇರೆ ಜಾತಿಗೆ ಸೇರಿದ್ದಕ್ಕೆ ಗಲಾಟೆ ನಡೆದಿದೆ

    ಗಲಾಟೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಕುಟುಂಬಸ್ಥರು

    ಪೋಷಕರ ತೀವ್ರ ವಿರೋಧದ ನಡುವೆಯೂ ಮದುವೆಯಾಗಿದ್ದ ಹುಡುಗಿ

ಮುಜಾಫರ್‌ನಗರ: ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಮಾರಕಾಸ್ತ್ರಗಳಿಂದ ಹೊಡೆದಾಡಿದ್ದರಿಂದ ಮೂವರು ಯುವಕರು ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆಯು ಉತ್ತರ ಪ್ರದೇಶದ ಮುಜಾಫರ್‌ನಗರದ ಫುಲಾತ್ ಗ್ರಾಮದಲ್ಲಿ ನಡೆದಿದೆ.

ಫುಲಾತ್ ಗ್ರಾಮದ ಅಂಕಿತ್ (25), ರೋಹಿತ್ (29) ಹಾಗೂ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಹರಿಮೋಹನ್ (48), ರಾಹುಲ್ (27) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿರೋಧದ ನಡುವೆ ಹರಿಮೋಹನ್ ಅವರ ಮಗಳನ್ನು ಅಂಕಿತ್ ಮದುವೆಯಾಗಿದ್ದನು. ಹುಡುಗ, ಹುಡುಗಿ ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಹುಡುಗಿಯ ಕಡೆಯವರಿಗೆ ಈ ಮದುವೆ ಇಷ್ಟ ಇರಲಿಲ್ಲ. ಹೀಗಾಗಿ ಎರಡು ಕುಟುಂಬಗಳ ನಡುವೆ ಗಲಾಟೆ, ಹಿಂಸಾಚಾರ ನಡೆದಿದೆ. ಈ ವೇಳೆ ಗಲಾಟೆಯಲ್ಲಿ ಮಾರಕಾಸ್ತ್ರಗಳನ್ನ ಬಳಕೆ ಮಾಡಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ.

ರಾಜು, ಮೋನು ಮತ್ತು ಗೋವರ್ಧನ್ ಎನ್ನುವ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಗಲಾಟೆ ಮತ್ತೆ ಆಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಎಸ್‌ಪಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮ ವಿವಾಹ.. ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ 2 ಕುಟುಂಬಸ್ಥರು, ಮೂವರು ಸಾವು, ಓರ್ವ ಗಂಭೀರ

https://newsfirstlive.com/wp-content/uploads/2024/01/lovers-6.jpg

Load More