newsfirstkannada.com

ಗಾಂಧಿ ಪರಿವಾರದ ಅತ್ಯಾಪ್ತ ಅಮೇಥಿ ಲೋಕಸಭಾ ಕ್ಷೇತ್ರ.. ಅದರ ಚುನಾವಣಾ ರಾಜಕೀಯದ ಚರಿತ್ರೆ ಹೇಗಿದೆ..?

Share :

Published March 11, 2024 at 10:34am

    ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಎಷ್ಟು ಬಾರಿ ಗೆದ್ದಿದೆ ಗೊತ್ತಾ?

    ಕಾಂಗ್ರೆಸ್​ನಿಂದ ರಾಹುಲ್ ಗಾಂಧಿಯೇ ಅಮೇಥಿಗೆ ಸೂಕ್ತ ಅಭ್ಯರ್ಥಿನಾ?

    ಅಮೇಥಿ ಲೋಕಸಭೆ ಕ್ಷೇತ್ರದ ರಾಜಕೀಯ ಇತಿಹಾಸ ಹಿನ್ನೆಲೆ ಏನು?

ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿದ್ದು, ಆಕಾಂಕ್ಷಿತ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದ ಜೊತೆಗೆ ಹೈವೋಲ್ಟೇಜ್ ಕ್ಷೇತ್ರಗಳ ಕುರಿತ ಚರ್ಚೆ ಜೋರಾಗಿದೆ. ಅದರಲ್ಲೂ ಚುನಾವಣಾ ರಾಜಕೀಯದ ಅಖಾಡದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಅಮೇಥಿ ಭಾರೀ ಕುತೂಹಲ ಮೂಡಿಸಿದೆ. 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ರಾಜಕಾರಣದಲ್ಲಿ ಅಮೇಥಿ ಇಡೀ ದೇಶದ ಗಮನ ಸೆಳೆಯುತ್ತಿದ್ದು, ಇದೀಗ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ಹಾಲಿ ಸಂಸದೆ ಸ್ಮೃತಿ ಇರಾನಿ ಕಣಕ್ಕೆ ಇಳಿಯೋದು ಬಹುತೇಕ ಪಕ್ಕಾ ಆಗಿದ್ದು, ಇಂದು ಅಥವಾ ನಾಳೆ ಬಿಡುಗಡೆ ಆಗುವ ಎರಡನೇ ಪಟ್ಟಿಯಲ್ಲಿ ಈ ನಿರೀಕ್ಷೆಗೆ ತೆರೆ ಬೀಳಲಿದೆ.

ಕಾಂಗ್ರೆಸ್​ನಿಂದ ರಾಹುಲ್ ಗಾಂಧಿಯೇ ಸೂಕ್ತ ಅಭ್ಯರ್ಥಿನಾ?

ಕಾಂಗ್ರೆಸ್​ನಿಂದ ರಾಹುಲ್ ಗಾಂಧಿಯೇ ಅಮೇಥಿಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್​, ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡ್ತಿರೋದು ಅಧಿಕೃತವಾಗಿದೆ. ಹೀಗಾಗಿ ರಾಹುಲ್ ಗಾಂಧಿ ಅಮೇಥಿಯಿಂದಲೂ ಸ್ಪರ್ಧೆ ಮಾಡ್ತಾರಾ ಇಲ್ಲವಾ ಅನ್ನೋದು ರಹಸ್ಯವಾಗಿಯೇ ಉಳಿದಿದೆ. ಇದರ ಮಧ್ಯೆ ವಿಚಾರ ಏನೆಂದರೆ ಅಮೇಥಿ ಹಾಗೂ ರಾಯ್ ಬರೇಲಿ ಕ್ಷೇತ್ರದಿಂದ ಗಾಂಧಿ ಕುಟುಂಬದ ಸದಸ್ಯರೇ ಚುನಾವಣಾ ಅಖಾಡಕ್ಕೆ ಇಳಿಯಬೇಕು ಅನ್ನೋದು ಕಟ್ಟಾ ಕಾಂಗ್ರೆಸ್ ನಾಯಕರ ಒತ್ತಾಯ. ಈ ವಿಚಾರವನ್ನು ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಹೈಕಮಾಂಡ್​ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್​ನಿಂದ ಅಮೇಥಿಯಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಎಂಬ ಕುತೂಹಲಗಳ ನಡುವೆ, ಅಮೇಥಿ ಲೋಕಸಭೆ ಕ್ಷೇತ್ರದ ಚುನಾವಣಾ ರಾಜಕೀಯ ಚರಿತ್ರೆ ಇಲ್ಲಿದೆ.

ಐದು ವಿಧಾನಸಭಾ ಕ್ಷೇತ್ರ

ತಿಲೋಯ್, ಸಲೂನ್, ಜಗದೀಶ್‌ಪುರ, ಗೌರಿಗಂಜ್ ಮತ್ತು ಅಮೇಥಿ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಅಮೇಥಿ ಲೋಕಸಭಾ ಕ್ಷೇತ್ರವು ವಿಭಿನ್ನ ರಾಜಕೀಯ ನೆಲೆಯನ್ನ ಕಂಡುಕೊಂಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಿರದ ಸಾಮಾನ್ಯ ಕ್ಷೇತ್ರ ಅಮೇಥಿ. ಪ್ರತಿ ಚುನಾವಣೆಯಲ್ಲೂ ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷಗಳು ಹಿಡಿತ ಸಾಧಿಸಲು ಇಲ್ಲಿ ದರ್ಬಾರ್ ನಡೆಸುತ್ತವೆ.

ಏನು ಹೇಳ್ತದೆ ಐತಿಹಾಸಿಕ ಹಿನ್ನೆಲೆ..?

ಗಾಂಧಿ ಕುಟುಂಬಕ್ಕೆ ಅತ್ಯಾಪ್ತವಾಗಿರುವ ಕ್ಷೇತ್ರ ಅಮೇಥಿ. ಸಂಜಯ್ ಗಾಂಧಿಯವರ ಮರಣದ ನಂತರ.. ದೇಶದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಅವರು 1981 ರಿಂದ ಅಮೇಥಿಯನ್ನು ಪ್ರತಿನಿಧಿಸುತ್ತಿದ್ದರು. 1984, 1989 ಮತ್ತು 1991ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರು ಮೇ 21, 1991ರಂದು ರಾಜೀವ್ ಗಾಂಧಿ ಹತ್ಯೆ ಆಯಿತು. ಕೊನೆಗೆ ಸೋನಿಯಾ ಗಾಂಧಿ 1999ರಲ್ಲಿ ಗೆಲುವು ಕಂಡರು. ಬಿಜೆಪಿ 1998 ಮತ್ತು 2014ರಿಂದ ಅಮೇಥಿ ಬಿಜೆಪಿ ತೆಕ್ಕೆಯಲ್ಲಿದೆ.

ಜನಸಂಖ್ಯಾ ವಿವರ:

ಸದ್ಯದ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ.. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 17,43,515 ಮತದಾರರಿದ್ದರು. ಈ ಪೈಕಿ 9,24,563 ಪುರುಷ ಹಾಗೂ 8,18,812 ಮಹಿಳಾ ಮತದಾರರಾಗಿದ್ದಾರೆ. 140 ಮತದಾರರು ತೃತೀಯಲಿಂಗಿಗಳಾಗಿದ್ದರೆ, 1,472 ಅಂಚೆ ಮತಗಳಾಗಿವೆ. 2019 ರಲ್ಲಿ ಅಮೇಥಿಯಲ್ಲಿ ಸೇವಾ ಮತದಾರರ ಸಂಖ್ಯೆ 2,482 (2,390 ಪುರುಷರು ಮತ್ತು 92 ಮಹಿಳೆಯರು). 2014ರಲ್ಲಿ ಅಮೇಥಿ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 16,69,843. ಈ ಪೈಕಿ 8,90,648 ಪುರುಷ ಹಾಗೂ 7,79,148 ಮಹಿಳಾ ಮತದಾರರಿದ್ದರು.

ಅಮೇಥಿ 2019 ಮತ್ತು 2014 ವಿಜೇತರು

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಜುಬಿನ್ ಇರಾನಿ 55,120 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು ಅವರು 4,68,514 ಮತಗಳನ್ನು ಪಡೆದುಕೊಂಡಿದ್ದಾರೆ. ಎದುರಾಳಿ ರಾಹುಲ್ ಗಾಂಧಿಗೆ 4,13,394 ವೋಟ್​​ಗಳು ಬಿದ್ದಿದ್ದವು. ಪಕ್ಷೇತರ ಅಭ್ಯರ್ಥಿ ಧ್ರುವ್ ಲಾಲ್ 7,816 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಈ ಮೂಲಕ ಅಮೇಥಿಯಲ್ಲಿ ಒಟ್ಟು 9,42,453 ಮತಗಳು ಚಲಾವಣೆಯಾಗಿದ್ದವು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮೇಥಿಯಲ್ಲಿ ಸತತ 4ನೇ ಬಾರಿಗೆ ಸ್ಪರ್ಧೆ ಮಾಡಿದ್ದರು. ಅವರು 2004, 2009 ಮತ್ತು 2014ರಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು. 2019ರಲ್ಲಿ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋಲನ್ನು ಅನುಭವಿಸಿದರು

ಅಮೇಥಿ ಹಿಂದಿನ ವಿಜೇತರು

  • ಸ್ಮೃತಿ ಇರಾನಿ: (ಬಿಜೆಪಿ) 2019
  • ರಾಹುಲ್ ಗಾಂಧಿ (ಕಾಂಗ್ರೆಸ್​) 2014
  • ರಾಹುಲ್ ಗಾಂಧಿ (ಕಾಂಗ್ರೆಸ್): 2009
  • ರಾಹುಲ್ ಗಾಂಧಿ (ಕಾಂಗ್ರೆಸ್): 2004
  • ಸೋನಿಯಾ ಗಾಂಧಿ (ಕಾಂಗ್ರೆಸ್): 1999
  • ಸಂಜಯ್ ಸಿಂಗ್ (ಬಿಜೆಪಿ): 1998
  • ಸತೀಶ್ ಶರ್ಮಾ (ಕಾಂಗ್ರೆಸ್): 1996
  • ಸತೀಶ್ ಶರ್ಮಾ (ಕಾಂಗ್ರೆಸ್): 1991 ಉಪಚುನಾವಣೆ
  • ರಾಜೀವ್ ಗಾಂಧಿ (ಕಾಂಗ್ರೆಸ್): 1991
  • ರಾಜೀವ್ ಗಾಂಧಿ (ಕಾಂಗ್ರೆಸ್): 1989
  • ರಾಜೀವ್ ಗಾಂಧಿ (ಕಾಂಗ್ರೆಸ್): 1984
  • ರಾಜೀವ್ ಗಾಂಧಿ (ಕಾಂಗ್ರೆಸ್): 1981 ಉಪಚುನಾವಣೆ
  • ಸಂಜಯ್ ಗಾಂಧಿ (ಕಾಂಗ್ರೆಸ್): 1980
  • ರವೀಂದ್ರ ಪ್ರತಾಪ್ ಸಿಂಗ್ (BLD): 1977
  • ವಿದ್ಯಾ ಧರ್ ಬಜ್​ಪೈ (ಕಾಂಗ್ರೆಸ್​) 1971

ಹಾಗೆ ನೋಡಿದರೆ 1971 ರಿಂದ ಅಮೇಥಿ ಲೋಕಸಭೆ ಕ್ಷೇತ್ರವು ಕಾಂಗ್ರೆಸ್​ನ ಅದರಲ್ಲೂ ಗಾಂಧಿ ಕುಟುಂಬದ ಭದ್ರ ಕೋಟೆಯಾಗಿದೆ. ಇಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಬಾರಿ ಮಾತ್ರ. 2019 ಚುನಾವಣೆಯಿಂದ ಬಿಜೆಪಿ ತೆಕ್ಕೆಗೆ ಹೋಗಿದ್ದು, ಇಂದು ಮತ್ತೆ ಕಾಂಗ್ರೆಸ್ ಅದನ್ನು ಪಡೆಯಬೇಕು ಎಂದು ಬಲಿಷ್ಠ ಅಭ್ಯರ್ಥಿಯ ಅನಿವಾರ್ಯತೆ ಇದೆ. ಇಂದು ಕಾಂಗ್ರೆಸ್​ ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಮಹತ್ವದ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ಅಮೇಥಿ ಕ್ಷೇತ್ರದ ಬಗ್ಗೆಯೂ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ. ಗಾಂಧಿ ಕುಟುಂಬದ ಅತ್ಯಾಪ್ತರ ಒತ್ತಾಯದಂತೆ, ಹೈಕಮಾಂಡ್ ರಾಹುಲ್ ಗಾಂಧಿಯನ್ನೇ ಕಣಕ್ಕಿಳಿಸಿದರೂ ಅಚ್ಚರಿ ಇಲ್ಲ.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಾಂಧಿ ಪರಿವಾರದ ಅತ್ಯಾಪ್ತ ಅಮೇಥಿ ಲೋಕಸಭಾ ಕ್ಷೇತ್ರ.. ಅದರ ಚುನಾವಣಾ ರಾಜಕೀಯದ ಚರಿತ್ರೆ ಹೇಗಿದೆ..?

https://newsfirstlive.com/wp-content/uploads/2024/03/AMETHI-ELECTION.jpg

Load More