/newsfirstlive-kannada/media/post_attachments/wp-content/uploads/2024/11/UP_FIRE_2.jpg)
ಮರಣ ಯಾವಾಗ, ಎಲ್ಲಿ, ಹೇಗೆ ಬರುತ್ತೆ ಅಂತ ಊಹೆ ಮಾಡೋಕೆ ಸಾಧ್ಯವಿಲ್ಲ. ಹೀಗೆ ಊಹಿಸದೆ ಬಂದ ಸಾವು 10 ಕಂದಮ್ಮಗಳ ಕಣ್ಣನ್ನ ಶಾಶ್ವತವಾಗಿ ಮುಚ್ಚಿಸಿಬಿಟ್ಟಿದೆ. ಉತ್ತರ ಪ್ರದೇಶದ ಜಾನ್ಸಿಯ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡ 10 ತಾಯಂದಿರ ಮಡಿಲನ್ನ ಬರಿದಾಗಿಸಿದೆ.
ಎಲ್ಲೆಲ್ಲೂ ಆತಂಕ.. ಏನಾಗುತ್ತಿದೆ, ಏನು ಮಾಡಬೇಕು ಅನ್ನೋದೆ ಗೊತ್ತಾಗದೇ ಜನ ಕಂಗಾಲಾಗಿ ಹೋಗಿದ್ದರು. ಒಂದು ಕಡೆ ಸಂಕಷ್ಟಕ್ಕೆ ಸಿಲುಕಿರೋ ಮಕ್ಕಳ ರಕ್ಷಣೆಗೆ ಹರಸಾಹಸ, ಮತ್ತೊಂದು ಕಡೆ ತಾಯಂದಿರು ಹೆತ್ತ ಕಂದಮ್ಮಗಳು ಕಾಣದೆ ಕಣ್ಣಿರು ಇಡುತ್ತಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಒಬ್ರೇ ಅಲ್ಲ, ಜೈಲಿನಲ್ಲಿನ ಈ ಖದೀಮರನ್ನೂ ಟಾರ್ಗೆಟ್ ಮಾಡಿದ ಬಿಷ್ಣೋಯ್ ಗ್ಯಾಂಗ್
/newsfirstlive-kannada/media/post_attachments/wp-content/uploads/2024/11/UP_FIRE_1.jpg)
10 ಹಸುಗೂಸುಗಳನ್ನ ಬಲಿಪಡೆದ ಬೆಂಕಿಯ ಕೆನ್ನಾಲಿಗೆ
ಮಕ್ಕಳು ನಿದ್ರೆಗೆ ಜಾರೋ ಹೊತ್ತು.. ತಾಯಂದಿರು ಮಕ್ಕಳ ಹಾಲುಗಲ್ಲವನ್ನ ನೋಡ್ತಾ ಲಾಲಿ ಹಾಡೋ ಸಮಯ. ಇಂತದೊಂದು ಹೊತ್ತಲ್ಲಿ ಕೆನ್ನಾಲಿಗೆಯನ್ನ ಚಾಚಿದ ಬೆಂಕಿ ಉತ್ತರ ಪ್ರದೇಶದ ಜಾನ್ಸಿಯ ಮಹಾರಾಣಿ ಲಕ್ಷ್ಮಿ ಬಾಯಿ ಮೆಡಿಕಲ್​ ಕಾಲೇಜಿನಲ್ಲಿ ಅಟ್ಟಹಾಸ ಮೆರೆದಿದೆ. ಇದ್ದಕ್ಕಿಂದಂತೆ ಮೆಡಿಕಲ್​ ಕಾಲೇಜು ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿ ಕಾಣಿಸಿಕೊಂಡ ಬೆಂಕಿ ಏನೂ ಅರಿಯದ 10 ಕಂದಮ್ಮಗಳನ್ನ ಬಲಿಪಡೆದಿದೆ. ಮಕ್ಕಳು ಸೇರಿ 40 ಮಂದಿಯನ್ನ ರಕ್ಷಣೆ ಮಾಡಲಾಗಿದೆ.
ವಾರ್ಡ್​ನ ಕಿಟಕಿ ಕಂಬಿ ಮುರಿದು ಮಕ್ಕಳ ರಕ್ಷಣೆ
ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿ ಮಕ್ಕಳು ಹಾಗೂ ವಾರ್ಡ್​ನಲ್ಲಿದ್ದ ಜನರ ರಕ್ಷಣೆಗೆ ಮುಂದಾಗಿದ್ದರು. ಆದ್ರೆ ಬೆಂಕಿ ಅಬ್ಬರಕ್ಕೆ ವಾರ್ಡ್​ನ ಬಾಗಿಲು ಬಂದ್​ ಆದ ಕಾರಣ ವಾರ್ಡ್​ಗೆ ಪ್ರವೇಶಿಸಲು ಬೇರೆ ದಾರಿ ಇಲ್ಲದಂತೆ ಆಗಿತ್ತು. ಬಳಿಕ ವಾರ್ಡ್​ನ ಕಿಟಕಿ ಕಂಬಿ ಮುರಿದು ಮಕ್ಕಳ ವಾರ್ಡ್​ಗೆ ಪ್ರವೇಶಿಸಿ ಮಕ್ಕಳನ್ನ ರಕ್ಷಣೆ ಮಾಡಲಾಯಿತು. ಈ ಹೊತ್ತಿಗಾಗಲೇ 10 ಹಸುಗೂಸುಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಸುಟ್ಟು ಕರಕಲಾಗಿ ಹೋಗಿದ್ದವು.
/newsfirstlive-kannada/media/post_attachments/wp-content/uploads/2024/11/UP_FIRE.jpg)
ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಸಿಎಂ ಯೋಗಿ ಸೂಚನೆ
ಜಾನ್ಸಿ ಆಸ್ಪತ್ರೆಯ ಅಗ್ನಿ ಅವಘಡದಲ್ಲಿ 10 ಮಕ್ಕಳು ಮೃತಪಟ್ಟ ಘಟನೆ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ 12 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಝಾನ್ಸಿ ಕಮಿಷನರ್ ಮತ್ತು ಡಿಐಜಿಗೆ ಸೂಚನೆ ನೀಡಿದ್ದಾರೆ. ಕಣ್ಣು ಬಿಟ್ಟು ಪ್ರಪಂಚ ನೋಡುವ ಮುನ್ನವೇ ಅಗ್ನಿಯ ರೌದ್ರನರ್ತನಕ್ಕೆ 10 ಕಂದಮ್ಮಗಳು ಕೊನೆಯುಸಿರೆಳೆದಿವೆ. ಇಂತದೊಂದು ಭೀಕರ ಅಗ್ನಿ ಅವಘಡಕ್ಕೆ ಕಾರಣ ಏನು ಅನ್ನೋ ಸತ್ಯ ಪೊಲೀಸರ ತನಿಖೆ ಬಳಿಕ ಗೊತ್ತಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us