/newsfirstlive-kannada/media/post_attachments/wp-content/uploads/2024/05/UP_BOY.jpg)
ಮುಜಾಫರ್‌ನಗರ: ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿ ರಿಮಾಂಡ್ ರೂಮ್​ಗೆ ಕಳುಹಿಸಿದ್ದಾರೆ. ಉತ್ತರಪ್ರದೇಶದ ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ಮುಜಾಫರ್‌ನಗರದ ಹಳ್ಳಿಯೊಂದರ ಬಾಲಕನ ಮೇಲೆ 50 ವರ್ಷದ ವ್ಯಕ್ತಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಬಾಲಕನನ್ನ ಅತ್ಯಾಚಾರ ಮಾಡಿರುವುದನ್ನು ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಇಷ್ಟೇ ಅಲ್ಲದೇ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗೆ ಅಪ್​ಲೋಡ್​ ಮಾಡುವುದಾಗಿ ಬ್ಲ್ಯಾಕ್​ಮೇಲ್ ಕೂಡ​ ಮಾಡಿದ್ದಾನೆ. ನಿತ್ಯ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗಿದೆ.
ಬ್ಲ್ಯಾಕ್​ಮೇಲ್ ಮಾಡುವುದನ್ನ ಮುಂದುವರೆಸಿದ ವ್ಯಕ್ತಿ ಮತ್ತೆ ತನ್ನ ಮನೆಗೆ ಬರುವಂತೆ ಬಾಲಕನನ್ನ ಪೀಡಿಸಿದ್ದಾನೆ. ಇದರಿಂದ ಮನೆಗೆ ಬಂದ ಬಾಲಕ ಅಲ್ಲೇ ಇದ್ದ ಚೂಪಾದ ವಸ್ತುವನ್ನ ತೆಗೆದುಕೊಂಡು ವ್ಯಕ್ತಿಯ ತಲೆಗೆ ಹಾಗೂ ಗಂಟಲಿಗೆ ಇರಿದು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಕೊಲೆಯಾದ ವ್ಯಕ್ತಿಯ ಸಂಬಂಧಿಕರು, ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ 15 ವರ್ಷದ ಬಾಲಕನನ್ನು ಪೊಲೀಸರು ಅರೆಸ್ಟ್ ಮಾಡಿ ರಿಮಾಂಡ್​ ರೂಮ್​ಗೆ ಕಳುಹಿಸಿದ್ದಾರೆ. ಇನ್ನು ವ್ಯಕ್ತಿಯ ಮನೆಯಲ್ಲೇ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us