/newsfirstlive-kannada/media/post_attachments/wp-content/uploads/2024/12/UP_married2.jpg)
ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಈ ಹೆಣ್ಣಿಗೆ ಈ ಗಂಡು ಅನ್ನೋದು ಹಣೆಯಲ್ಲಿ ಬರೆದಿರುತ್ತೆ ಅನ್ನೋ ಮಾತಿದೆ. ಆದ್ರೆ, ಒಬ್ಬ ಮಹಿಳೆಗೆ ಇಬ್ಬರು ಪತಿಯರು ಅನ್ನೋದು ಸ್ವಲ್ಪ ಅಚ್ಚರಿಯ ಸಂಗತಿ. ಇದೀಗ ಉತ್ತರಪ್ರದೇಶದಲ್ಲಿ ಒಬ್ಬ ಮಹಿಳೆ ಇಬ್ಬರು ಸಹೋದರರ ಬಾಳಿಗೆ ಬೆಳಕಾಗಿರುವ ಅಪರೂಪದ ವಿವಾಹ ಸಂಗತಿಯೊಂದು ಹೊರಬಿದ್ದಿದೆ.
ಒಬ್ಬ ಮಹಿಳೆಗೆ ಐದು ಜನ ಪತಿಯಂದಿರು ಇದು ಮಹಾಭಾರತದ ಕಾಲ. ಇದು ಕಲಿಗಾಲ ಇಲ್ಲಿ ಒಬ್ಬ ಪುರುಷ ಹಲವು ಮಹಿಳೆಯರನ್ನ ವರಿಸಿರುವ ಉದಾಹರಣೆಗಳಿವೆ. ಆದ್ರೆ, ಮಹಿಳೆಯರ ವಿಚಾರದಲ್ಲಿ ವಿಭಿನ್ನ. ಒಬ್ಬ ಪತಿಗೆ ಡಿವೋರ್ಸ್ ನೀಡಿ ಮತ್ತೊಂದು ಮದುವೆ ಆಗೋಕೆ ಅವಕಾಶ ಇದೆ. ಆದರೆ, ಇಲ್ಲೊಂದು ಅಪರೂಪದ ಮದುವೆಯೊಂದು ನಡೆದಿದೆ. ಒಬ್ಬ ಮಹಿಳೆ ಇಬ್ಬರು ಪುರುಷರನ್ನ ವರಿಸಿ ಅಚ್ಚರಿ ಮೂಡಿಸಿದ್ದಾಳೆ.
ಏಕಕಾಲದಲ್ಲಿ ಇಬ್ಬರು ಸಹೋದರರನ್ನ ವರಿಸಿದ ಮಹಿಳೆ
ಇಬ್ಬರು ನಡುವಿನ ಮದುವೆ. ಅಂದರೆ ಒಬ್ಬ ವರ, ಒಬ್ಬಳು ವಧು ಮಧ್ಯೆ ಮದುವೆ ನಡೆಯೋದು ಕಾಮನ್. ಆದರೆ ಇಲ್ಲಿ ಒಬ್ಬಳು ವಧುವನ್ನ ಇಬ್ಬರು ವರರು ವರಿಸಿದ್ದಾರೆ. ಮೂವರ ನಡುವಿನ ಪ್ರೇಮಕಹಾನಿ ವಿವಾಹದ ಬಂಧ ಬೆಸೆದುಕೊಂಡಿದೆ. ಇಬ್ಬರು ಸಹೋದರರ ಬಾಳಿಗೆ ಈಕೆ ಬೆಳಕಾಗಿದ್ದು ಹೊಸ ರೀತಿಯ ಮದುವೆಯ ಬಂಧಕ್ಕೆ ಭಾಷ್ಯಾ ಬರೆದಿದ್ದಾರೆ.
ಇಬ್ಬರು ಗಂಡರು.. ಎರಡು ತಾಳಿ ಧರಿಸಿರೋ ಮಹಿಳೆ
ಉತ್ತರಪ್ರದೇಶದ ಸಂತ ಕಬೀರ್ ನಗರದ ನಿವಾಸಿಗಳಾಗಿರೋ ಈ ಜೋಡಿಗಳು ಸದ್ಯ ಉತ್ತರ ಭಾರತದ ಸೆನ್ಸೇಷನ್ ವಿವಾಹಿತ ಜೋಡಿಯಾಗಿ ಹೊರಹೊಮ್ಮಿದೆ. ದೊಡ್ಡದಾಗಿ ಸಿಂಧೂರ ಹಚ್ಚಿಕೊಂಡು ಕೊರಳಲ್ಲಿ ಎರಡು ಮಾಂಗಲ್ಯ ಧರಿಸಿರೋ ಈಕೆಯೇ ಈ ಇಬ್ಬರು ಸೋದರನ್ನ ವರಿಸಿರೋ ಮಹಿಳೆ. ಸದ್ಯ ಇದು ಫೇಕ್ ಮದುವೆ ಅಂತ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ರು. ಇದು ಸುಳ್ಳಲ್ಲ ನಾನು ಎರಡು ಮದುವೆ ಆಗಿರೋದು ನಿಜ ಅಂತ ಮಹಿಳೆ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಈ ಏಕ ಪತ್ನಿ.. ಇಬ್ಬರು ಪತಿಯರು ಎಲ್ಲೇ ಹೋದ್ರೂ ಒಟ್ಟಿಗೆ ಹೋಗುತ್ತಾರಂತೆ. ಒಟ್ಟಿಗೆ ವಾಸಿಸುತ್ತಿದ್ದೇವೆ. ಒಟ್ಟಿಗೆ ಊಟ ಮಾಡುತ್ತೇವೆ. ಅಷ್ಟೇ ಅಲ್ಲ ಮೂವರೂ ಒಟ್ಟಿಗೆ ಮಲಗುತ್ತೇವೆ ಅಂತ ಮಹಿಳೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ನಮ್ಮ ಊರಿಗೆ ನಮ್ಮ ಶಾಸಕರು; ಪ್ರದೀಪ್ ಈಶ್ವರ್ ಕಾರ್ಯಕ್ಕೆ ಭಾರೀ ಮೆಚ್ಚುಗೆ, ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
ಸದ್ಯ ಉತ್ತರಪ್ರದೇಶದ ಈ ಮೂವರ ಜೋಡಿಯ ಹೆಸರೇನು ಅನ್ನೋದು ಎಲ್ಲೂ ಬಹಿರಂಗವಾಗಿಲ್ಲ. ಅದೇನೆ ಇರಲಿ. ಇಬ್ಬರು ಗಂಡಂದಿರ ಮುದ್ದಿನ ಹೆಂಡತಿಯಾಗಿ ಸಂಸಾರವನ್ನ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ ಎಂಬ ಆಕೆಯ ಕಾನ್ಫಿಡೆನ್ಸ್ ಮೆಚ್ಚಬೇಕಾದ್ದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ