/newsfirstlive-kannada/media/post_attachments/wp-content/uploads/2025/06/SAMBAL_DOCTORS_1.jpg)
ಮೃತದೇಹದ ಮೇಲೆ ಗಾಯದ ಗುರುತುಗಳಿರುತ್ತವೆ. ಗಾಯದ ಗುರುತುಗಳು ಜೀವ ಹೋಗಿರುವುದು ಏನಕ್ಕೆ ಅಂತ ಸ್ಪಷ್ಟವಾಗಿ ಹೇಳುತ್ತಿರುತ್ತಾವೆ. ಆದರೇ, ಆ ವ್ಯಕ್ತಿ ತನ್ನ ಜೀವವನ್ನು ತಾನೇ ತೆಗೆದುಕೊಂಡ ಅಂತ ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆ ಕಳೆದ ಕೆಲ ತಿಂಗಳಿಂದ ಸಂಘರ್ಷದಿಂದಲೇ ಸುದ್ದಿಯಲ್ಲಿದೆ. ಇಂಥ ಜಿಲ್ಲೆಯಲ್ಲಿ ಜೀವ ತೆಗೆಯುವ ಘಟನೆಗಳನ್ನು ಮುಚ್ಚಿ ಹಾಕುವುದರ ಬೆಲೆ ಬರೀ 50 ಸಾವಿರ ರೂಪಾಯಿ. ಮೃತ ವ್ಯಕ್ತಿಗಳ ಮೇಲಿನ ಗಾಯದ ಗುರುತುಗಳನ್ನು ಅಳಿಸಿ ಹಾಕಿ, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತನ್ನ ಜೀವ ತಾನೇ ತೆಗೆದುಕೊಂಡ ಎಂದು ವರದಿ ನೀಡುತ್ತಿದ್ದಾರೆ. ಇಂಥ ವೈದ್ಯರ ಜಾಲದ ವಿರುದ್ಧ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಸಂಭಾಲ್ ಜಿಲ್ಲೆಯಲ್ಲಿ 32 ಮಂದಿ ಸರ್ಕಾರಿ ವೈದ್ಯರುಗಳ ಮೇಲೆ ವ್ಯಕ್ತಿಗಳ ಜೀವ ತೆಗೆದಿರುವ ವರದಿಗಳನ್ನು ತಾನೇ ಬಲಿಯಾಗಿದ್ದಾನೆ ಎಂದು ಬದಲಾಯಿಸಿ ವರದಿ ನೀಡಿದ ಆರೋಪವಿದ್ದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಜಾಲದಲ್ಲಿ ಫಾರ್ಮಾಸಿಸ್ಟ್​​ಗಳು, ಆಸ್ಪತ್ರೆ ವಾರ್ಡ್ ಬಾಯ್​​ಗಳು, ವೈದ್ಯರು ಭಾಗಿಯಾಗಿದ್ದಾರೆ. ಬಹಳ ಮಹತ್ವದ ಮರಣೋತ್ತರ ಪರೀಕ್ಷೆಯ ವರದಿಯನ್ನೇ ತಿರುಚಿದ್ದಾರೆ.
/newsfirstlive-kannada/media/post_attachments/wp-content/uploads/2025/06/SAMBAL_DOCTORS_2.jpg)
ಇದೆಲ್ಲವೂ ಬೆಳಕಿಗೆ ಬಂದಿದ್ದು, 19 ವರ್ಷದ ಮಂಜು ಎಂಬಾಕೆಯ ಮರ್ಡರ್ ನಡೆದ ಬಳಿಕ. ಮಂಜು ಕುಟುಂಬವೇ ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಓರ್ವ ಫಾರ್ಮಾಸಿಸ್ಟ್, ವಾರ್ಡ್ ಬಾಯ್​​​ಗೆ 50 ಸಾವಿರ ರೂಪಾಯಿ ಹಣ ನೀಡಿ, ಮರಣೋತ್ತರ ಪರೀಕ್ಷೆಯ ವರದಿಯನ್ನು ತಿರುಚುವಂತೆ ಹೇಳಿದ್ದಾರೆ.
ಪ್ರಮುಖ ಶಂಕಿತ ಮಧುರ್ ಆರ್ಯ, ಭೋಜಾಯ್ ಸಿಎಚ್‌ಸಿಯಲ್ಲಿ ಫಾರ್ಮಾಸಿಸ್ಟ್. ವಾರ್ಡ್ ಬಾಯ್ ಯಶ್ ಶರ್ಮಾ ಮತ್ತು ಓರ್ವ ಕಂಪ್ಯೂಟರ್ ಅಪರೇಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಮಧುರ್ ಆರ್ಯಗೆ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಕೊಡಲಾಗಿದೆ. ವ್ಯವಸ್ಥಿತವಾಗಿ ನೂರಾರು ಕೊಲೆ ಕೇಸ್​ಗಳನ್ನು ತಿರುಚಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದ್ದಾರೆ.
ಮೇ, 31 ರಂದು ಮಂಜು ಹರದಾಸಪುರದ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದಕ್ಕೆ ಆಕೆಯ ಬಾಯ್ ಫ್ರೆಂಡ್ ಪ್ರಮೋದ್ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದರು. ಆದರೇ, ಪ್ರಮೋದ್ ಆಕೆ ಜೀವ ಬಿಟ್ಟಾಗ ಆ ಸ್ಥಳದಲ್ಲಿ ಇರಲಿಲ್ಲ. ಆ ಸ್ಥಳದಲ್ಲಿ ತಂದೆ, ಸೋದರ, ಸಂಬಂಧಿಕರು ಇದ್ದರು. ಮಂಜು ಸಾವಿಗೂ ಮುನ್ನ ತಂದೆಯೇ ಕೆಲ ಅನುಮಾನಾಸ್ಪದ ಪೋನ್ ಕಾಲ್ ಮಾಡಿದ್ದರು ಎಂಬುದು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಇನ್ನೂ ಮಧುರ್ ಆರ್ಯ ಕೂಡ ಪೊಲೀಸರ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಮಂಜು ಅನ್ನು ಆಕೆಯ ಕುಟುಂಬದವರೇ ಮುಗಿಸಿದ್ದರು. ನೇಣು ಹಾಕಿದ ಸ್ಥಿತಿಯನ್ನು ಶವ ಇಟ್ಟಿದ್ದರು. ಬಾಯ್ ಫ್ರೆಂಡ್ ಅನ್ನು ಕೇಸ್​ನಲ್ಲಿ ಸಿಲುಕಿಸಲು ಕುತ್ತಿಗೆ ಹಿಸುಕಿದ್ದೇ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷೆಯ ವರದಿ ನೀಡಲು 50 ಸಾವಿರ ರೂಪಾಯಿ ಡೀಲ್ ಮಾಡಿಕೊಳ್ಳಲಾಗಿತ್ತು ಎಂದು ಮಧುರ್ ಆರ್ಯ ಹೇಳಿದ್ದ. ಈ ಕೇಸ್ ನಲ್ಲಿ ಪೊಲೀಸರು ಈಗ ಮಂಜು ತಂದೆ ಚಂದ್ರಕೇಶ್, ಸೋದರ ಧರ್ಮೇಂದ್ರ , ಸಂಬಂಧಿ ಜಯಪ್ರಕಾಶ್, ಪ್ರವೇಶ್ ರನ್ನು ಬಂಧಿಸಿದ್ದಾರೆ. ಇನ್ನೂ ಮರಣೋತ್ತರ ಪರೀಕ್ಷೆ ವರದಿ ಡಿಜಿಟಲ್ ಆಗಿ ಎಡಿಟ್ ಮಾಡಿದ್ದ ಯಶ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಂತ್ಯ ಕೇಸ್​; ಆಘಾತಕಾರಿ ಮಾಹಿತಿ ಬಿಚ್ಚಿಟ್ಟ CCF ಹೀರಾಲಾಲ್
/newsfirstlive-kannada/media/post_attachments/wp-content/uploads/2025/06/SAMBAL_DOCTORS.jpg)
ಈ ಆಪರೇಷನ್ ಅನೌಪಚಾರಿಕ ನೆಟ್ ವರ್ಕ್ ಮೂಲಕ ನಡೆದಿದೆ. ಸಂತ್ರಸ್ತರು, ಆರೋಪಿಗಳ ಕುಟುಂಬಗಳು ಮಧುರ್ ಆರ್ಯನಂಥ ಮಧ್ಯವರ್ತಿಗಳನ್ನು ಸಂಪರ್ಕ ಮಾಡಿದ್ದಾರೆ. 30 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೂ ಡೀಲ್ ಮಾಡಿಕೊಂಡು ಮರಣೋತ್ತರ ಪರೀಕ್ಷೆಯ ವರದಿಯನ್ನೇ ತಿರುಚಿದ್ದಾರೆ. ಯಶ್ ಶರ್ಮಾಗೆ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಸಿಸ್ಟಮ್​​ಗೆ ಲಾಗಿನ್ ಆಗುವ ಅವಕಾಶ ಇತ್ತು. ಇದನ್ನು ಬಳಸಿಕೊಂಡು ವರದಿಯನ್ನು ತಿರುಚಿದ್ದಾನೆ. ಕುತ್ತಿಗೆ ಹಿಸುಕಿರುವುದನ್ನು ಆತ್ಮಹತ್ಯೆ ಎಂದು ಉಲ್ಲೇಖ ಮಾಡಿದ್ದಾನೆ. ದೇಹದ ಮೇಲಿನ ಗಾಯದ ಗುರುತಿನ ಅಂಶವನ್ನು ತೆಗೆದು ಹಾಕಿದ್ದಾನೆ. ವೈದ್ಯರುಗಳು ಮರಣೋತ್ತರ ಪರೀಕ್ಷೆಯ ವರದಿಯ ಕಂಟೆಂಟ್ ಅನ್ನು ಪರಿಶೀಲಿಸದೇ, ಸಹಿ ಹಾಕಿದ್ದಾರೆ.
ಮಧುರ್ ಆರ್ಯನ ಪೋನ್​ನಲ್ಲಿ ಪೇಮೆಂಟ್, ತಿರುಚಿದ ಪೋಸ್ಟ್ ಮಾರ್ಟಂ ವರದಿಯ ನೂರಾರು ವಾಟ್ಸಾಫ್ ಚಾಟ್ ಪತ್ತೆಯಾಗಿದೆ. ಏನ್ನನ್ನು ಬರೆಯಬೇಕು, ಏನ್ನನ್ನು ಡೀಲೀಟ್ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಸ್ಥಳೀಯ ವೈದ್ಯರ ಜೊತೆ ಸಭೆ ನಡೆಸಿದ್ದಾರೆ. ಕೆಲ ವೈದ್ಯರು ಜಿಲ್ಲಾಧಿಕಾರಿ ಜೊತೆ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮುಂದೆ ಈ ರೀತಿ ಮಾಡಲ್ಲ ಎಂದಿದ್ದಾರೆ. ಬಹುತೇಕ ವೈದ್ಯರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ಮೂವರು ಸದಸ್ಯರ ತನಿಖಾ ಸಮಿತಿಯನ್ನು ಈ ಬಗ್ಗೆ ರಚಿಸಿ ತನಿಖೆ ಮಾಡಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us