newsfirstkannada.com

ಫೇಸ್​​ಬುಕ್​​ನಲ್ಲಿ ಸ್ನೇಹ, ಡೇಟಿಂಗ್, ಅತ್ಯಾ**! ರಾಜಕೀಯ ಮುಖಂಡನ ಕರಾಳಮುಖ ಬಯಲು..!

Share :

Published February 4, 2024 at 10:39am

    ಪತಿ ಮಾಡಿದ ಪಾಪಕ್ಕೆ ಯುವತಿಯ ಗರ್ಭಪಾತ ಮಾಡಿಸಿದ ಪತ್ನಿ

    ನ್ಯಾಯ ನೀಡುವಂತೆ ಒತ್ತಾಯಿಸಿ ಠಾಣೆ ಮುಂದೆ ಕಣ್ಣೀರು

    ರಾಜಕೀಯ ನಾಯಕನ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

ಉತ್ತರ ಪ್ರದೇಶದ ಪ್ರತಾಪ್​​ಗಢ ಜಿಲ್ಲೆಯ ಸಮಾಜವಾದಿ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಆತನ ಪತ್ನಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಎಸ್​ಪಿ ನಾಯಕ ಫೇಸ್​ಬುಕ್​​ನಲ್ಲಿ ನನ್ನೊಂದಿಗೆ ಸ್ನೇಹ ಬೆಳಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.

ಫೇಸ್​ಬುಕ್​​ನಲ್ಲಿ ಸ್ನೇಹ ಬೆಳಸಿ ನನ್ನ ಫೋನ್ ನಂಬರ್ ಪಡೆದು ಮಾತನಾಡಲು ಶುರುಮಾಡಿದ. ಆ ನಂತರ ನನ್ನನ್ನು ಒಂದು ದಿನ ಕರೆಸಿಕೊಂಡು ತಂಪು ಪಾನಿಯ ನೀಡಿದ್ದ. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ನಾನು ಗರ್ಭಿಣಿಯಾಗಿದ್ದೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಆತನ ಹೆಂಡತಿ ಮಧ್ಯಪ್ರವೇಶ ಮಾಡಿ ಗರ್ಭಪಾತ ಮಾಡಿಸಿದ್ದಾಳೆ. ಇದೀಗ ಅಂದು ನನ್ನನ್ನು ರೇಪ್ ಮಾಡಿದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​​ ಮೇಲ್ ಮಾಡ್ತಿದ್ದಾನೆ ಎಂದು ಆರೋಪಿಸಿದ್ದಾಳೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಅಧಿಕಾರಿ ದುರ್ಗೇಶ್ ಕುಮಾರ್, ಇಬ್ಬರ ನಡುವೆ ಫೇಸ್​ಬುಕ್ ಮೂಲಕ ಪರಿಚಯ ಆಗಿದೆ. ಆ ಪರಿಚಯ ಸ್ನೇಹಕ್ಕೆ ತಿರುಗಿದೆ. ನಂತರ ಡೇಟಿಂಗ್​ ಮಾಡಲು ಶುರುಮಾಡಿದ್ದಾರೆ. ಡೇಟಿಂಗ್ ವೇಳೆ ದೈಹಿಕ ಸಂಪರ್ಕ ನಡೆದಿದೆ. ಒಮ್ಮೆ ಯುವತಿ ಗರ್ಭಿಣಿ ಆಗಿದ್ದಳು. ಆಗ ಆರೋಪಿಯ ಪತ್ನಿ ಮಧ್ಯಪ್ರವೇಶ ಮಾಡಿ ಗರ್ಭಪಾತ ಮಾಡಿಸಿದ್ದಾಳೆ. ಈ ಎಲ್ಲ ಬೆಳವಣಿಗೆಗಳ ಬಳಿಕ ಯುವತಿ ಮದುವೆ ಆಗುವಂತೆ ಪಟ್ಟು ಹಿಡಿದಿದ್ದಾಳೆ. ಅದಕ್ಕೆ ಆರೋಪಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಮದುವೆಯಿಂದ ತಪ್ಪಿಸಿಕೊಳ್ಳಲು ಗರ್ಭಪಾತ ಮಾಡಿಸಿದ್ದಾನೆ. ಜೊತೆಗೆ ಜೀವ ಬೆದರಿಕೆ ಕೂಡ ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಅಂತಾ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಕೇಸ್ ದಾಖಲಾಗಿದೆ. ಐಪಿಸಿ ಸೆಕ್ಷನ್ 366 (ಅಪಹರಣ ಮತ್ತು ಮದುವೆಯನ್ನು ಮದುವೆಯಾಗಲು ಒತ್ತಾಯಿಸುವುದು), 376 (ಅತ್ಯಾಚಾರ), 313 (ಸಮ್ಮತಿ ಇಲ್ಲದೇ ಗರ್ಭಪಾತ), 504 (ಗೊಂದಲ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ಮಾಡುವ ಕೃತ್ಯ), ಸೆಕ್ಷನ್ 506 (ಬೆದರಿಕೆ), 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​​ಬುಕ್​​ನಲ್ಲಿ ಸ್ನೇಹ, ಡೇಟಿಂಗ್, ಅತ್ಯಾ**! ರಾಜಕೀಯ ಮುಖಂಡನ ಕರಾಳಮುಖ ಬಯಲು..!

https://newsfirstlive.com/wp-content/uploads/2024/02/LOVE-DHOKHA.jpg

Load More