/newsfirstlive-kannada/media/post_attachments/wp-content/uploads/2025/01/MAN-DANCE.jpg)
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ವಿಶೇಷ ಅಂತ್ಯಕ್ರಿಯೆ ನಡೆದಿರೋದು ಬೆಳಕಿಗೆ ಬಂದಿದೆ. ತಂದೆಯ ಮರಣದ ನಂತರ ಮಗ ಸ್ಮಶಾನದಲ್ಲಿ ಸ್ನೇಹಿತರೊಂದಿಗೆ DJ ಸಾಂಗ್ಗೆ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾನೆ.
‘ನಾನು ಮಾಡೋದೇ ಹಿಂಗೆ..’
ಮಗರಾಯ ಡೋಲು, ನಗಾರಿಗಳನ್ನು ಬಾರಿಸುತ್ತಾ ಅಪ್ಪನ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ. ಜೊತೆಗೆ ಅಂತ್ಯಕ್ರಿಯೆ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾನೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಪ್ರೀತಿಪಾತ್ರರು ದೇಹ ತ್ಯಜಿಸಿದಾಗ ಮನೆಯಲ್ಲಿ ಶೋಕ ಹರಡುತ್ತದೆ. ಕುಟುಂಬಸ್ಥರು ಅಳುವ ದೃಶ್ಯ ಸಾಮಾನ್ಯ. ಆದರೆ, ಸುಲ್ತಾನಪುರ ಪೊಲೀಸ್ ವ್ಯಾಪ್ತಿಯ ನಾರಾಯಣಪುರ ವಾರ್ಡ್‌ನಲ್ಲಿ ವಿಭಿನ್ನ ದೃಶ್ಯ ಕಂಡುಬಂದಿದೆ. ಅಲ್ಲಿ ನೆಲೆಸಿದ್ದ ಶ್ರೀರಾಮ್ ಅವರ ತಂದೆ ರಾಮಕಿಶೋರ್ ಮಿಶ್ರಾ 80ನೇ ವಯಸ್ಸಿನಲ್ಲಿ ನಿಧನರಾದರು. ಅಪ್ಪ ನಿಧನರಾಗುತ್ತಿದ್ದಂತೆಯೇ ಮಗ ಸಂಭ್ರಮಿಸಿದ್ದಾನೆ.
ಇದನ್ನೂ ಓದಿ:ವೈದ್ಯರು ಇನ್ನಿಲ್ಲ ಎಂದು ಘೋಷಿಸಿದ್ರು.. ದೇಹ ವಾಪಸ್ ತರುವಾಗ ರಸ್ತೆಯಲ್ಲಿ ನಡೀತು ದೊಡ್ಡ ಪವಾಡ..!
ಸ್ಮಶಾನದಲ್ಲಿ ನೃತ್ಯ..
ಶ್ರೀರಾಮ್ ಬ್ಯಾಂಡ್ ವಾದಕರನ್ನು ಸ್ಮಶಾನಕ್ಕೆ ಕರೆಸಿ ಅಪ್ಪನ ಕೊನೆಯ ದಿನವನ್ನು ಸೆಲೆಬ್ರೇಟ್ ಮಾಡಿದ್ದಾನೆ. ಪಾರ್ಥಿವ ಶರೀರ ಸ್ಮಶಾನಕ್ಕೆ ಬರ್ತಿದ್ದಂತೆಯೇ ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡಿದ್ದಾನೆ. ಕರೆನ್ಸಿ ನೋಟುಗಳನ್ನು ಮನಸೋ ಇಚ್ಛೆ ಎಸೆದಿದ್ದಾನೆ. ಸುಮಾರು 10ಕ್ಕೂ ಹೆಚ್ಚು ಸ್ನೇಹಿತರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಕೊನೆಯ ಪ್ರಯಾಣದ ಜೊತೆಗೆ 13 ದಿನ ಕಳೆದ ನಂತರ ಕಾರ್ಯ ಕೂಡ ಮಾಡಿದ್ದಾನೆ. ಹದಿಮೂರನೇ ದಿನ ಬ್ಯಾಂಡ್ ಬಾರಿಸಲು ವ್ಯವಸ್ಥೆ ಮಾಡಿದ್ದ. ಕುಟುಂಬದ ಸದಸ್ಯರಿಗೆ ಮತ್ತು ಪರಿಚಯಸ್ಥರಿಗೆ ಔತಣಕೂಟ ಏರ್ಪಡಿಸಿದ್ದ. ಈ ವೇಳೆ ಕುಟುಂಬದ ಸದಸ್ಯರು ಕೂಟ ನೃತ್ಯ ಮಾಡಿದ್ದಾರೆ.
ಇದನ್ನೂ ಓದಿ: ಚಿನ್ನ ಮನೆಯಲ್ಲಿದ್ದರೆ ಚೆನ್ನಾ..! ದೇಶದಲ್ಲಿ ಗೋಲ್ಡ್ ಲೋನ್ ಭಾರೀ ಹೆಚ್ಚಳ; RBI ಕಳವಳ; ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮ್.. ಅಪ್ಪನ ಕೊನೆಯ ವಿದಾಯವನ್ನು ಅಳುವ ಮೂಲಕ ಮಾಡಬಾರದು. ನೃತ್ಯ ಮತ್ತು ಹಾಡುವ ಮೂಲಕ ಮಾಡಬೇಕು. ಅಳುವುದರಿಂದ ನಮ್ಮನ್ನು ಅಗಲಿದ ವ್ಯಕ್ತಿಯ ಆತ್ಮವನ್ನು ನೋಯಿಸುತ್ತದೆ. ಇದೂ ಕೂಡ ಜೀವನದ ಸಂಭ್ರಮವಾಗಿದೆ. ಹಾಗಾಗಿ ನಾನು ಈ ರೀತಿ ಆಚರಣೆ ಮಾಡಿದ್ದೇನೆ ಎಂದಿದ್ದಾನೆ.
ಇದನ್ನೂ ಓದಿ:Sydney Test: ರೋಹಿತ್ರನ್ನೇ ತಂಡದಿಂದ ಕೈಬಿಟ್ಟ ಗಂಭೀರ್.. ಸಿಡ್ನಿ ಟೆಸ್ಟ್ನಲ್ಲಿ 2 ಪ್ರಮುಖ ಬದಲಾವಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ