newsfirstkannada.com

ಲೋಕಸಭಾ ಚುನಾವಣೆ; ಮೋದಿ, ಅಮಿತ್​ ಶಾಗೆ ಬಿಗ್​ ಶಾಕ್​ ಕೊಟ್ಟ ಉತ್ತರ ಪ್ರದೇಶ

Share :

Published April 29, 2024 at 6:50am

    ಪ್ರಮಾಣ ಕುಸಿತದಿಂದ ಕೇಸರಿ ಹೈಕಮಾಂಡ್​ಗೆ ಟೆನ್ಷನ್​

    ಯೋಗಿ ನಾಡಲ್ಲಿ ಮತದಾನದ ಪ್ರಮಾಣ ತೀವ್ರ ಕುಸಿತ

    ಹೆಚ್ಚಾದ ಬಿಸಿಲಿನ ಧಗೆ, ಕಾರ್ಯಕರ್ತರ ಅಸಮಾಧಾನ

ಉತ್ತರ ಪ್ರದೇಶದ ಮತದಾರರು ಕೇಸರಿ ಪಾಳಯಕ್ಕೆ ಕೊಂಚ ತಲೆಬಿಸಿ ಉಂಟುಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದಿರುವ 2 ಹಂತಗಳ ಚುನಾವಣೆಯಲ್ಲೂ ಮತದಾನ ಪ್ರಮಾಣ ತೀವ್ರ ಕುಸಿತವಾಗಿದೆ. ಇದು ಮೋದಿ ಹಾಗೂ ಅಮಿತ್‌ ಶಾ ತಲೆನೋವಿಗೆ ಕಾರಣವಾಗಿದೆ. ದೇಶದ ಗದ್ದುಗೆ ಹಿಡಿಯಬೇಕಾದ್ರೆ ಉತ್ತರಪ್ರದೇಶದಲ್ಲಿ ಹಿಡಿತ ಸಾಧಿಸಬೇಕು ಅನ್ನೋದು ರಾಜಕೀಯ ತಂತ್ರಜ್ಞರ ಅಭಿಮತ ಹಾಗೂ ವಾಸ್ತವ. ಯಾಕಂದ್ರೆ ಅದು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡ ರಾಜ್ಯ ಹಾಗೂ ಅತೀ ಹೆಚ್ಚಿನ ಲೋಕಸಭೆ ಸ್ಥಾನ ಅಂದ್ರೆ 80 ಕ್ಷೇತ್ರಗಳನ್ನು ಒಳಗೊಂಡಿದೆ.

ಇಲ್ಲಿ ಹಿಡಿತ ಸಾಧಿಸಿದ್ರೆ ದೆಹಲಿ ಗದ್ದುಗೆಯನ್ನ ಲೀಲಾಜಾಲವಾಗಿ ಹಿಡಿಯಬಹುದು ಅನ್ನೋದು ಹಲವು ರಾಜಕಾರಣಿಗಳ ಲೆಕ್ಕಾಚಾರ. ಆದ್ರೆ ಇದೇ ಉತ್ತರಪ್ರದೇಶದಲ್ಲಿ ಕಳೆದ ಬಾರಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದ್ದ ಕೇಸರಿ ಪಾಳಯಕ್ಕೆ ಸದ್ಯ ಸುದ್ದಿಯೊಂದು ಕಳವಳಕಾರಿಯಾಗಿದೆ. ಇದೇ ಅಂಶ ಸದ್ಯಕ್ಕೆ ಬಿಜೆಪಿ ಪಾಲಿಗೆ ಕಳವಳಕಾರಿಯಾಗಿದೆ. ಚುನಾವಣಾ ಆಯೋಗವು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಅಂತ ಹೇಳಿದ್ರೂ ಕೂಡ ಕೆಲವರು ಮತಗಟ್ಟೆಯತ್ತ ತಲೆಯನ್ನೇ ಹಾಕಿಲ್ಲ. ಹೀಗಾಗಿ ಕಳೆದ ಬಾರಿಯ 62ರಿಂದ 54.85 ಶೇಕಡಾ ಮತದಾನಕ್ಕಿಳಿದಿದೆ. ಅಂದ್ರೆ 2ನೇ ಹಂತದ ಚುನಾವಣೆಯಲ್ಲಿ ಸುಮಾರು 7ಶೇಕಡಾ ಕಡಿಮೆ ಮಂದಿ ಹಕ್ಕು ಚಲಾಯಿಸಿದ್ದಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ಕೇಸರಿ ಪಾಳಯಕ್ಕೆ ಆಘಾತಕಾರಿ ಅಂಶ ಏನಂದ್ರೆ ಮಥುರಾದಲ್ಲಿ ಸುಮಾರು 12% ರಷ್ಟು ಮತದಾನ ಇಳಿಕೆಯಾಗಿದೆ. 2019 ರಲ್ಲಿ 61.03% ಇದ್ದದ್ದು ಎರಡನೇ ಹಂತದಲ್ಲಿ 49.29%ಗೆ ಇಳಿಕೆಯಾಗಿದೆ. ಗಾಜಿಯಾಬಾದ್‌ನಲ್ಲಿ 6 ಶೇಕಡಾಗೆ ಇಳಿಕೆ ಅಂದ್ರೆ 55 ರಿಂದ 49.65% ಕ್ಕೆ ಕಡಿಮೆಯಾಗಿದೆ. ಇದೇ ಉತ್ತರಪ್ರದೇಶದಲ್ಲಿ ಏಪ್ರಿಲ್ 19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 60.25 ಶೇಕಡಾ ಮತದಾನವಾಗಿತ್ತು. ಕಳೆದ ಬಾರಿ 66.50 ಶೇಕಡಾ ಮತದಾನವಾಗಿದ್ರೆ ಈ ಬಾರಿ 6 ಶೇಕಡಾ ಮತದಾನ ಇಳಿಕೆಯಾಗಿದೆ. ಒಟ್ಟಾರೆ ಉತ್ತರಪ್ರದೇಶದಲ್ಲಿ ಈ ಬಾರಿ ಮತದಾನ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಹೆಚ್ಚಾದ ಬಿಸಿಲಿನ ಧಗೆ, ಗ್ರಾಮೀಣ ಪ್ರದೇಶಗಲ್ಲಿನ ಬೆಳೆಗಳ ಕೊಯ್ಲು, ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನಗಳೆಲ್ಲ ಮತದಾನ ಕುಸಿತಕ್ಕೆ ಕಾರಣ ಅಂತ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಮತದಾನ ಪ್ರಮಾಣ ಕುಸಿತದಿಂದ ಕೇಸರಿ ಹೈಕಮಾಂಡ್​ಗೆ ಟೆನ್ಷನ್​ಗೆ ಕಾರಣವಾಗಿದೆ. ಜೋಡೆತ್ತುಗಳಾದ ಮೋದಿ ಹಾಗೂ ಚುನಾವಣಾ ಚಾಣಕ್ಯ ಅಮಿತ್‌ ಶಾ ತಲೆನೋವಿಗೆ ಕಾರಣಾಗಿದೆ. ರಾಮಮಂದಿರ ನಿರ್ಮಾಣ, ಕಾಶಿ ಅಭಿವೃದ್ಧಿ ಸೇರಿದಂತೆ ಉತ್ತರ ಪ್ರದೇಶದಲ್ಲಿ ಹಲವು ಜನಪರ ಕಾರ್ಯಕ್ರಮಗಳ ಹೊರತಾಗಿಯೂ ಮತದಾನ ಮಾಡಲು ಜನರಲ್ಲಿ ಉತ್ಸಾಹವಿಲ್ಲ. ಶೆ. 6 ರಿಂದ 7ರಷ್ಟು ಮತದಾನ ಕುಸಿತವಾಗಿದೆ. ಹಾಗಾದ್ರೆ ಉತ್ತರ ಪ್ರದೇಶದಲ್ಲಿ ಯಾವುದೇ ಅಲೆ ಕೆಲಸ ಮಾಡ್ತಿಲ್ವಾ ಅನ್ನೋ ಪ್ರಶ್ನೆಗಳು ಉದ್ಭವವಾಗಿವೆ. ಇದಕ್ಕೆಲ್ಲಾ ಮತದಾರರ ನಿರಾಸಕ್ತಿಯೇ ಸಾಕ್ಷಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ; ಮೋದಿ, ಅಮಿತ್​ ಶಾಗೆ ಬಿಗ್​ ಶಾಕ್​ ಕೊಟ್ಟ ಉತ್ತರ ಪ್ರದೇಶ

https://newsfirstlive.com/wp-content/uploads/2023/06/MODI-7.jpg

Load More