ಭಿಕ್ಷುಕನ ಜತೆ ಓಡಿ ಹೋಗಿದ್ದ 6 ಮಕ್ಕಳ ತಾಯಿ ಕೇಸ್​ಗೆ ಬಿಗ್​ ಟ್ವಿಸ್ಟ್​.. ಮಹಿಳೆ ಪತ್ತೆ, ಅಸಲಿಗೆ ಆಗಿದ್ದೇನು?

author-image
Bheemappa
Updated On
ಭಿಕ್ಷುಕನ ಜತೆ ಓಡಿ ಹೋಗಿದ್ದ 6 ಮಕ್ಕಳ ತಾಯಿ ಕೇಸ್​ಗೆ ಬಿಗ್​ ಟ್ವಿಸ್ಟ್​.. ಮಹಿಳೆ ಪತ್ತೆ, ಅಸಲಿಗೆ ಆಗಿದ್ದೇನು?
Advertisment
  • ಯಾರಿಗೂ ಹೇಳದೆ, ಕೇಳದೇ ಮಹಿಳೆ ಎಲ್ಲಿಗೆ ಹೋಗಿದ್ದರು?
  • ಪೊಲೀಸರ ಮುಂದೆ ಮಹಿಳೆ ಹಾಜರಾಗಿ ಮಾತಾಡಿದ್ದು ಇಲ್ಲಿದೆ
  • ಎಮ್ಮೆ ಮಾರಾಟದಿಂದ ಬಂದ ಹಣ ತಗೊಂಡು ಹೋಗಿದ್ರಾ?

ಲಕ್ನೋ: ಭಿಕ್ಷುಕನ ಜೊತೆ ಹೆಂಡತಿ ಓಡಿ ಹೋಗಿದ್ದಾಳೆಂದು ಅನುಮಾನಿಸಿ ಗಂಡ ಉತ್ತರ ಪ್ರದೇಶದ ಹಾರ್ಡೋಯಿ ಜಿಲ್ಲೆಯ ಹರ್ಪಾಲ್‌ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದನು. ಸದ್ಯ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು 6 ಮಕ್ಕಳ ತಾಯಿ ವಾಪಸ್ ಆಗಿದ್ದು ಪೊಲೀಸರ ಮುಂದೆ ಸತ್ಯ ಏನು ಎಂಬುದನ್ನು ಮನವರಿಕೆ ಮಾಡಿದ್ದಾರೆ.

ಹರ್ಪಾಲ್‌ಪುರ ಠಾಣಾ ವ್ಯಾಪ್ತಿಯಲ್ಲಿ ರಾಜುಕುಮಾರ್- ರಾಜೇಶ್ವರಿ ದಂಪತಿ ಕುಟುಂಬ ವಾಸವಿತ್ತು. ಈ ದಂಪತಿಗೆ 6 ಮಕ್ಕಳು ಇದ್ದಾರೆ. ಆದರೆ ಜನವರಿ 3 ರಂದು ಮಾರ್ಕೆಟ್​ಗೆ ಹೋಗಿ ತರಕಾರಿ ಹಾಗೂ ಹೊಸ ಬಟ್ಟೆಗಳನ್ನು ತರುವುದಾಗಿ ತನ್ನ ದೊಡ್ಡ ಮಗಳಿಗೆ ಹೇಳಿ ಹೋಗಿದ್ದ ತಾಯಿ ವಾಪಸ್ ಆಗಿರಲಿಲ್ಲ. ಇದರಿಂದ ಮನೆಯಲ್ಲಿದ್ದ ಮಕ್ಕಳು, ಗಂಡ, ಸಂಬಂಧಿಕರು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

publive-image

ಇದನ್ನೂ ಓದಿ: 1036 ಉದ್ಯೋಗಗಳನ್ನ ಆಹ್ವಾನ ಮಾಡಿರುವ ರೈಲ್ವೆ ಇಲಾಖೆ.. ಅರ್ಜಿ ಸಲ್ಲಿಕೆ ಆರಂಭ, ಸಂಬಳ ಎಷ್ಟು?

ಹೆಂಡತಿ ರಾಜೇಶ್ವರಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಕ್ಕೆ ಗಾಬರಿಗೊಂಡ ಗಂಡ ಪೊಲೀಸ್ ಠಾಣೆಗೆ ಹೋಗಿ, ನನ್ನ ಹೆಂಡತಿ ಮನೆಯಲ್ಲಿಟ್ಟಿದ್ದ ಎಮ್ಮೆ ಮಾರಾಟದ ಹಣವನ್ನೆಲ್ಲಾ ತೆಗೆದುಕೊಂಡು ಭಿಕ್ಷುಕ ಜೊತೆ ಓಡಿ ಹೋಗಿರಬಹುದು ಎಂದು ಶಂಕಿಸಿ ಜನವರಿ 6 ರಂದು ಪ್ರಕರಣ ದಾಖಲು ಮಾಡಿದ್ದಾನೆ. 45 ವರ್ಷದ ನನ್ಹೆ ಪಂಡಿತ್ ಎನ್ನುವ ಭಿಕ್ಷುಕನ ಜೊತೆ ಓಡಿ ಹೋಗಿರಬಹುದು ಎಂದು ಶಂಕಿಸಿದ್ದಾನೆ. ಈ ಸಂಬಂಧ ಪೊಲೀಸರು ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87ರ ಅಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಇನ್ನು ಇದೆಲ್ಲಾ ವಿಷ್ಯ ಗೊತ್ತಾಗುತ್ತಿದ್ದಂತೆ ಮಹಿಳೆ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ನಡೆದಿರುವ ಎಲ್ಲ ಸಂಗತಿ ವಿವರಿಸಿದ್ದಾರೆ. ಮನೆಯಲ್ಲಿರುವಾಗ ಯಾವುದಾದರೂ ಜಗಳ ತೆಗೆದು ಗಂಡ, ನನಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದನು, ಮನಸ್ಸಿಗೆ ಬಂದಂತೆ ಬೈಯ್ಯುತ್ತಿದ್ದನು. ಸಂಸಾರ ಸಾಕಾಗಿ ಫರೂಕಾಬಾದ್‌ನಲ್ಲಿನ ನನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ಅಷ್ಟರಲ್ಲೇ ಇಷ್ಟಲ್ಲಾ ನಡೆದು ಹೋಗಿದೆ ಎಂದು ಹೇಳಿದ್ದಾರೆ. ಇನ್ನು ಪೊಲೀಸರು, ಆಕೆಯ ಗಂಡ ಹೇಳಿರುವುದೆಲ್ಲ ಸುಳ್ಳು, ಅವನ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment