/newsfirstlive-kannada/media/post_attachments/wp-content/uploads/2025/07/UP_Woman.jpg)
ಲಕ್ನೋ: ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆಯಬೇಕಾದ ಭ್ರೂಣವೂ ಯಕೃತ್ತು (Liver)ನಲ್ಲಿ ಬೆಳೆಯುತ್ತಿರುವುದು ಕಂಡು ಬಂದಿದ್ದರಿಂದ ವೈದ್ಯರೇ ಫುಲ್ ಶಾಕ್ ಆಗಿದ್ದಾರೆ. ಇದು ಅಪರೂಪದಲ್ಲಿ ಅಪರೂಪ ಎಂದು ಹೇಳಲಾಗಿದ್ದು ಇಡೀ ವಿಶ್ವದಲ್ಲಿ ಇದು 8ನೇ ಕೇಸ್ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ಆಸ್ಪತ್ರೆಯೊಂದರಲ್ಲಿ 30 ವರ್ಷದ ಮಹಿಳೆಯೊಬ್ಬರು ಗರ್ಭಿಣಿ ಎಂದು ಎಂಆರ್ಐ ಸ್ಯಾನಿಂಗ್ಗೆ ಬಂದಿದ್ದರು. ಈ ವೇಳೆ ಎಂಆರ್ಐ ಸ್ಯಾನಿಂಗ್ ಮಾಡುವಾಗ ಮಹಿಳೆಯ ಗರ್ಭಕೋಶದಲ್ಲಿ ಬೆಳೆಯಬೇಕಾದ ಭ್ರೂಣವೂ ಯಕೃತ್ತು (Liver)ನಲ್ಲಿ ಬೆಳೆಯುತ್ತಿರುವುದು ಕಂಡು ವೈದ್ಯರು ಶಾಕ್ ಆಗಿದ್ದಾರೆ. ಆದರೆ ಭ್ರೂಣ ಯಕೃತ್ತುನಲ್ಲಿ ಬೆಳೆಯುತ್ತಿದ್ದರಿಂದ ಗರ್ಭಕೋಶ ಖಾಲಿಯಾಗಿಯೇ ಉಳಿದಿದೆ ಎಂದು ಸ್ಕ್ಯಾನಿಂಗ್ನಿಂದ ಗೊತ್ತಾಗಿದೆ.
ಇದನ್ನು ವೈದ್ಯ ಲೋಕದಲ್ಲಿ Intrahepatic Ectopic Pregnancy ಎಂದು ಕರೆಯಲಾಗುತ್ತದೆ. ಒಮ್ಮೆ ಪರೀಕ್ಷಿಸಿದಾಗ ಆಶ್ವರ್ಯ ಎನಿಸಿತು. ಹೀಗಾಗಿ ಎರಡ್ಮೂರು ಬಾರಿ ಸ್ಕ್ಯಾನ್ ಮಾಡಿದ ಮೇಲೆ ಇದು ದೃಢಪಟ್ಟಿದೆ. ಈಗಾಗಲೇ ಇದಕ್ಕೆ 12 ತಿಂಗಳುಗಳು ಕಳೆದಿವೆ ಎಂದು ವೈದ್ಯರು ಹೇಳಿದ್ದಾರೆ. ಇಂತಹ ಕೇಸ್ ಇಡೀ ವಿಶ್ವದಲ್ಲೇ 8ನೇ ಪ್ರಕರಣವಾದರೆ ಭಾರತದಲ್ಲಿ ಇದು ಮೊಟ್ಟ ಮೊದಲ ಕೇಸ್ ಆಗಿದೆ. ಇದುವರೆಗೂ ಈ ರೀತಿ ದೇಶದಲ್ಲಿ ಕಂಡು ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಮಹಿಳೆಗೆ ಹೊಟ್ಟೆ ನೋವು, ವಾಂತಿ ಸೇರಿ ಆರೋಗ್ಯದ ಸಮಸ್ಯೆಗಳು ಹೆಚ್ಚಾದಾಗ ಅವರನ್ನು ಪರೀಕ್ಷೆಗೆ ಕರೆದುಕೊಂಡು ಬಂದಿದ್ದರು. ಮಹಿಳೆಯ ಗರ್ಭಕೋಶದಲ್ಲಿ ಈ ರೀತಿ ಬೆಳೆಯುವುದು ತುಂಬಾ ಅಪಾಯಕಾರಿ. ಇದು ಮಹಿಳೆಯ ಜೀವಕ್ಕೆ ಕುತ್ತು ತರುತ್ತದೆ. ಹೀಗಾಗಿ ಅದನ್ನು ಹೊರಗೆ ತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಯ ಯಕೃತ್ತುನಲ್ಲಿ ಭ್ರೂಣ ಬೆಳೆಯುವಾಗ ಆಕೆಯ ಹೆಸರು ಸೇರಿ ಇತರೆ ಮಾಹಿತಿ ಬಹಿರಂಗ ಪಡಿಸಬಾರದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೆಸರು DOG ಬಾಬು, ತಂದೆ ಕುತ್ತಾ ಬಾಬು.. ನಾಯಿ ಫೋಟೋಗೆ ಸರ್ಟಿಫಿಕೇಟ್ ಕೊಟ್ಟ ಸರ್ಕಾರಿ ಅಧಿಕಾರಿಗಳು
ಇದು ಯಾವಾಗ ನಾನು ನೋಡಿದೇನೋ ನನಗೆ ನಂಬೋಕೆ ಆಗಲಿಲ್ಲ. ಭ್ರೂಣವೂ ಬಲ ಭಾಗದಲ್ಲಿ ಬೆಳೆಯುತ್ತಿದ್ದು ಹೃದಯ ಬಡಿತವೆಲ್ಲ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇಂತಹದ್ದನ್ನ ನನ್ನ ವೃತ್ತಿ ಜೀವನದಲ್ಲೇ ನೋಡಿಲ್ಲ. ಇದೇ ಮೊದಲ ಬಾರಿಗೆ ನೋಡಿದೆ ಎಂದು ಮೀರತ್‌ನಲ್ಲಿರುವ ಖಾಸಗಿ ಇಮೇಜಿಂಗ್ ಕೇಂದ್ರದಲ್ಲಿ ವಿಕಿರಣಶಾಸ್ತ್ರಜ್ಞ ಕೆ.ಕೆ ಗುಪ್ತಾ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ