/newsfirstlive-kannada/media/post_attachments/wp-content/uploads/2025/05/srs.jpg)
ದೇಶಸೇವೆ ಬಂತು ಅಂದ್ರೆ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡೋದಕ್ಕೆ ಸಿದ್ಧರಾಗುತ್ತಾರೆ. ದೇಶ ಸೇವೆಗೋಸ್ಕರ ಕುಟುಂಬ, ಸ್ನೇಹಿತರನ್ನು ಕೂಡ ಬಿಟ್ಟು ಹೊರಡೋಕೆ ರೆಡಿ ಆಗ್ತಾರೆ. ನಮ್ಮ ದೇಶದ ಹೆಮ್ಮೆಯೇ ಸೈನಿಕರು. ಇದಕ್ಕೆ ಸಾಕ್ಷಿ ಎಂಬಂತೆ ಸೈನಿಕರೊಬ್ಬರು ಹನಿಮೂನ್ ಕೂಡ ಬಿಟ್ಟು ದೇಶಸೇವೆಗಾಗಿ ಮರಳಿದ್ದಾರೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
ಹೌದು, ಈಗಾಗಲೇ ಪಾಪಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಆರಂಭಿಸಿದೆ. ಭಾರತ ಕೂಡ ದಿಟ್ಟ ಪ್ರತ್ಯುತ್ತರ ಕೊಡ್ತಿದೆ. ರಜೆಯ ಮೇಲಿರೋ ಸೈನಿಕರಿಗೆ ಒಬ್ಬೊಬ್ಬರಾಗಿ ವಾಪಸ್ ಬರೋವಂತೆ ಬುಲಾವ್ ನೀಡಲಾಗಿದೆ. ಹಲವಾರು ಸೈನಿಕರು ಸೈನ್ಯದ ಕರೆ ಮೇಲೆ ಕೂಡಲೇ ದೇಶಸೇವೆಗಾಗಿ ತೆರಳ್ತಿದ್ದಾರೆ. ಅದೇ ರೀತಿ ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಿಟ್ಟ ಹೋರಾಟ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೈನಿಕರು ದೇಶದ ಸೇವೆಗಾಗಿ ತಮ್ಮ ಕುಟುಂಬವನ್ನ ಬಿಟ್ಟು ತೆರಳುತ್ತಿದ್ದಾರೆ.
ಈ ಮಧ್ಯೆ ಮದುವೆಯಾಗಿ ಕೇವಲ 8 ದಿನಕ್ಕೆ ಹನಿಮೂನ್ ಕೂಡ ಮೊಟಕುಗೊಳಿಸಿ ಸಿದ್ದಾಪುರದ ಸೈನಿಕ ದೇಶದ ಕರೆಗಾಗಿ ತೆರಳಿದ್ದಾರೆ. ಸಿದ್ದಾಪುರದ ವೆಂಕಟೇಶ್ ಹಾಗೂ ಪ್ರಭಾ ದಂಪತಿಗಳ ಪುತ್ರ, ಸಿ.ಆರ್.ಪಿ.ಎಫ್ ಯೋಧ ಜೈವಂತ್ ಮೇ 1ಕ್ಕೆ ಮದುವೆ ಆಗಿದ್ದರು. ಅದ್ದೂರಿಯಾಗಿ ಮದುವೆ ಕೂಡ ನಡೆದು ನವದಂಪತಿಗಳು ಹನಿಮೂನ್ ಪ್ಲ್ಯಾನ್ ಮಾಡಿ ಹೊರಟಿದ್ರು. ಅದೇ ಸಮಯಕ್ಕೆ ಸೈನ್ಯದ ಸೇವೆಯ ಕರೆಗೆ ಎಲ್ಲವನ್ನೂ ಬಿಟ್ಟು ತೆರಳಿದ್ದಾರೆ ಈ ಸೈನಿಕ.
ಜೈವಂತ್ ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ನಲ್ಲಿ ಛತ್ತೀಸಘಡ್ದಲ್ಲಿ ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಗೆ ಅಂತ ಬಂದು ಮದುವೆ ಮುಗಿಸಿ ಊಟಿಗೆ ಹನಿಮೂನ್ ಟ್ರಿಪ್ಗೆ ಪ್ಲ್ಯಾನ್ ಹಾಕಿ ನವದಂಪತಿಗಳು ತೆರಳಿದ್ರು. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿತು. ಆ ಕೂಡಲೇ ಹನಿಮೂನ್ ಕ್ಯಾನ್ಸಲ್ ಮಾಡಿ ಯೋಧ ದೇಶಸೇವೆಯ ಕರೆಗಾಗಿ ತೆರಳೋಕೆ ರೆಡಿ ಆಗಿ ವಾಪಸ್ ಊರಿಗೆ ಬಂದಿದ್ದಾರೆ. ಜೈವಂತ್ ಕುಟುಂಬ ಕೂಡ ದೇಶಸೇವೆಯೇ ಮೊದಲು, ದೇಶಸೇವೆಗಾಗಿ ಹೊರಡು ಅನ್ನೋ ಧೈರ್ಯದ ಮಾತುಗಳಿಂದ ಅವರ ಜೊತೆ ನಿಂತಿದ್ದಾರೆ. ದೇಶಸೇವೆಗೆ ಹೊರಟ ವಿರಯೋಧನಿಗೆ ತಾಲೂಕಿನ ಜನತೆ ಸನ್ಮಾನ ಮಾಡಿ ಕಳಿಸಿಕೊಟ್ಟಿದ್ದಾರೆ.
ದೇಶಸೇವೆ ಅಂದ್ರೆ ಈಶಸೇವೆ ಅನ್ನೋ ಮಾತೊಂದಿದೆ. ಅದರಂತೆ ಮದುವೆಯಾಗಿ ಕೇವಲ 9 ದಿನಕ್ಕೆ ಸೇವೆಗಾಗಿ ತೆರಳಿದ್ದಾರೆ ನಮ್ಮ ದೇಶದ ಹೆಮ್ಮೆಯ ಯೋಧ. ಇಂತಹ ಯೋಧರಿಗೆ ನಮ್ಮದೊಂದು ಸಲಾಂ. ಯೋಧನಿಗೆ ಬೆನ್ನೆಲುಬಾಗಿ ನಿಂತ ಅವರ ಕುಟುಂಬಕ್ಕೆ ನಮ್ಮದೊಂದು ಸಲಾಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ