ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ!

author-image
Bheemappa
Updated On
ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ!
Advertisment
  • ಪುರುಷರು ಈ ರೀತಿಯ ಡ್ರೆಸ್ ಧರಿಸಿದರೆ, ದೇವಾಲಯದ ಎಂಟ್ರಿ ಇಲ್ಲ
  • ಮಹಿಳೆಯರು ಯಾವ ಉಡುಪು ಧರಿಸಿ ದೇವಾಲಯಕ್ಕೆ ಹೋಗಬೇಕು?
  • ಮುರುಡೇಶ್ವರ ದೇವಾಲಯದ ಒಳ ಪ್ರವೇಶಕ್ಕೆ ಕಡ್ಡಾಯ ವಸ್ತ್ರ ಸಂಹಿತೆ

ಉತ್ತರ ಕನ್ನಡ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮುರುಡೇಶ್ವರ ದೇವಾಲಯದಲ್ಲಿ ಅಧಿಕೃತವಾಗಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಸದ್ಯ ಈ ಸಂಬಂಧ ಆಡಳಿತ ಮಂಡಳಿಯು ದೇವಾಲಯದ ಮುಂಭಾಗದಲ್ಲಿ ಸೂಚನ ಫಲಕ ಅಳವಡಿಸಿದೆ.

ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಭಾರತೀಯ ಸಾಂಪ್ರದಾಯದಂತೆ ಉಡುಪು ಧರಿಸುವಂತೆ ಸೂಚಿಸಲಾಗಿದೆ. ಅಂಗಿ, ಲುಂಗಿ, ಕುರ್ತಾ ಪೈಜಾಮ, ಫಾರ್ಮಲ್​ ಪ್ಯಾಂಟ್, ಶರ್ಟ್​ ಧರಿಸಬಹುದು. ಮಹಿಳೆಯರು ಸ್ಯಾರಿ, ಸಾಲ್ವರ್, ಚೂಡಿದಾರ ಧರಿಸಿ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್​ ಬ್ರೇಕ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!

publive-image

ಪುರುಷರು, ಮಹಿಳೆಯರು ಟೀಶರ್ಟ್​, ಆಫ್​ ಪ್ಯಾಂಟ್, ಸ್ಕರ್ಟ್​, ಆಫ್​ತೋಳಿನ ಟೀಶರ್ಟ್​, ಪುರುಷರು ಬನಿಯನ್ ಧರಿಸಿ ಬರುವಂತಿಲ್ಲ. ದೇವಾಲಯದ ಓಳಗೆ ಪಾಶ್ಚಿಮಾತ್ಯ ಶೈಲಿಯ ಕ್ಯಾಶುಯಲ್ ಡ್ರೆಸ್​​ಗಳಿಗೆ ಅನುಮತಿ ನಿರಾಕರಣೆ ಮಾಡಲಾಗಿದೆ. ಈ ಬಗ್ಗೆ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿ ಭಕ್ತರಿಗೆ ಸೂಚನೆ ನೀಡಲಾಗಿದೆ.

ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಬೇಕಾಬಿಟ್ಟಿ ಉಡುಪು ಧರಿಸಿ ಒಳಗೆ ಬರುತ್ತಿರುವುದಕ್ಕೆ ಆಕ್ಷೇಪ ಕೇಳಿ ಬಂದಿದ್ದವು. ಈ ಬಗ್ಗೆ ಹಿಂದೂ ಪರ ಸಂಘಟನೆಗಳು ದೇವಾಲಯ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೆ ಮನವಿ ಮಾಡಿದ್ದವು. ಇದರ ಬೆನ್ನಲ್ಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment