/newsfirstlive-kannada/media/post_attachments/wp-content/uploads/2023/06/Heat.jpg)
ಲಖನೌ: ಬಿಸಿಲ ತಾಪಮಾನ ಏರಿಕೆಯಾಗಿ ಕಳೆದ 24 ಗಂಟೆಯಲ್ಲಿ 34 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬಿಪರ್ಜಾಯ್ ಚಂಡ ಮಾರುತದ ಹೊರತಾಗಿ ಹೀಟ್ ಸ್ಟ್ರೋಕ್ ಸಾವನ್ನಪ್ಪಿರುವುದನ್ನು ದುರಾದೃಷ್ಟಕರ ಸಂಗತಿಯಾಗಿದೆ.
ಅಲ್ಲಿನ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಬಿಸಿಲ ತಾಪಕ್ಕೆ 34 ಮಂದಿ ಸಾವನ್ನಪ್ಪಿದ್ದಾರೆ. 60 ವರ್ಷಕ್ಕಿಂತ ಹೆಚ್ಚಿನವರು ಹೀಟ್ ಸ್ಟ್ರೋಕ್ನಿಂದ ಆಸ್ಪತ್ರೆ ಸೇರುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಜೂ.15ರಂದು 23 ಮಂದಿ ಹಾಗೂ ಜೂ 16ರಂದು 11 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಮೃತರಾದವರು ನಾನಾ ಕಾಯಿಲೆಗೂ ತುತ್ತಾಗಿದ್ದರು. ಇದರೊಂದಿಗೆ ಬಿಸಿಲಿನ ತಾಪವನ್ನು ಎದುರಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್ ಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ