newsfirstkannada.com

ಭೀಕರ ಕಾರು ಅಪಘಾತ.. ಇಬ್ಬರು ಮಕ್ಕಳ ಸೇರಿ 6 ಮಂದಿ ದಾರುಣ ಸಾವು

Share :

Published February 29, 2024 at 5:59am

    ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ 6 ಜನ ಪ್ರಯಾಣಿಕರು

    ಓರ್ವನ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು ಮಾಡಿದ ಸಿಬ್ಬಂದಿ

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್​​ಡಿಆರ್​ಎಫ್​ ತಂಡ

ಡೆಹ್ರಾಡೂನ್: 500 ಮೀಟರ್ ಆಳದ ಕಂದಕಕ್ಕೆ ಆಲ್ಟೋ ಕಾರೊಂದು ಬಿದ್ದ ಪರಿಣಾಮ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಒಟ್ಟು 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ. ಈ ಘಟನೆಯು ಉತ್ತರಾಖಂಡದ ಚಕ್ರತಾ ಪ್ರದೇಶದ ತ್ಯುನಿಯದಲ್ಲಿ ನಡೆದಿದೆ.

7 ಜನ ಪ್ರಯಾಣಿಕರು ಆಲ್ಟೊ ಕಾರಿನಲ್ಲಿ ಪಂದ್ರಾನುವಿನಿಂದ ಹಿಮಾಚಲ ಪ್ರದೇಶದ ತ್ಯುನಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತ್ಯುನಿಯ ಅಟಲ್ ಮೋಟಾರು ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಕಾರು ಬರೋಬ್ಬರಿ 500 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ 7 ಜನರ ಪೈಕಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಈ ಅಪಘಾತದಲ್ಲಿ ಸಾವನ್ನಪ್ಪಿದವರು ಹಿಮಾಚಲ ಪ್ರದೇಶದ ಮೂಲದ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್​​ಡಿಆರ್​ಎಫ್​ ತಂಡ ರಕ್ಷಣೆ ಕಾರ್ಯದಲ್ಲಿ ತೊಡಗಿ ಓರ್ವನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮೃತದೇಹಗಳನ್ನು ಮೇಲೆತ್ತಲು ಹರಸಾಹಸ ಪಟ್ಟಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಕಾರು ಅಪಘಾತ.. ಇಬ್ಬರು ಮಕ್ಕಳ ಸೇರಿ 6 ಮಂದಿ ದಾರುಣ ಸಾವು

https://newsfirstlive.com/wp-content/uploads/2024/02/accident_Uttarakhand.jpg

Load More