Advertisment

ಒಬ್ಬ ಯುವತಿಯಿಂದ 20 ಯುವಕರಿಗೆ HIV ಪಾಸಿಟಿವ್.. ಬೆಚ್ಚಿ ಬಿದ್ದ ಇಡೀ ಊರಿನ ಜನ; ಆಗಿದ್ದೇನು?

author-image
admin
Updated On
ಒಬ್ಬ ಯುವತಿಯಿಂದ 20 ಯುವಕರಿಗೆ HIV ಪಾಸಿಟಿವ್.. ಬೆಚ್ಚಿ ಬಿದ್ದ ಇಡೀ ಊರಿನ ಜನ; ಆಗಿದ್ದೇನು?
Advertisment
  • ದಿಢೀರ್ ಅಂತ HIV ಪಾಸಿಟಿವ್‌ ಕೇಸ್‌ ಹೆಚ್ಚಾಗಿದ್ದಕ್ಕೆ ಬೆಚ್ಚಿ ಬಿದ್ದ ಜನ
  • 17 ವರ್ಷದ ಯುವತಿಯ ಸಹವಾಸದಿಂದ HIV ಪಾಸಿಟಿವ್ ಕೇಸ್
  • 19 HIV ಪಾಸಿಟಿವ್‌ ಕೇಸ್‌ ನೋಡಿ ಬೆಚ್ಚಿ ಬಿದ್ದ ಆರೋಗ್ಯ ಇಲಾಖೆ

HIV/ಏಡ್ಸ್‌ ಬಗ್ಗೆ ಜಾಗೃತಿ ಬಹಳ ಮುಖ್ಯ. ರಕ್ತ, ಲೈಂಗಿಕತೆ ಮೂಲಕ ಹರಡುವ ಈ ರೋಗದ ಬಗ್ಗೆ ಎಚ್ಚರವೂ ಅಷ್ಟೇ ಮುಖ್ಯ. ಉತ್ತರಾಖಂಡ್‌ನ ಒಂದು ಊರಿನ ಜನ ಎಚ್ಚರ ತಪ್ಪಿದ್ದು, ಬೆಚ್ಚಿ ಬೀಳುವ ಮಾಹಿತಿಯೊಂದು ವರದಿಯಾಗಿದೆ. ಪದೇ ಪದೆ HIV ಪಾಸಿಟಿವ್ ಕೇಸ್ ಬೆಳಕಿಗೆ ಬಂದಿದ್ದು ಆರೋಗ್ಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

Advertisment

ಉತ್ತರಾಖಂಡ್‌ನ ರಾಮನಗರದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಕಳೆದ 5 ತಿಂಗಳಲ್ಲಿ 19 HIV ಪಾಸಿಟಿವ್‌ನ ಹೊಸ ಕೇಸ್‌ಗಳು ಪತ್ತೆಯಾಗಿದೆ. ಈ ಹಳ್ಳಿಯಲ್ಲಿ ದಿಢೀರ್ ಅಂತ HIV ಪಾಸಿಟಿವ್‌ ಕೇಸ್‌ ಹೆಚ್ಚಾಗಿರೋದು ಆತಂಕವನ್ನ ಉಂಟು ಮಾಡಿದೆ.

17 ವರ್ಷದ ಯುವತಿಯ ಸಹವಾಸದಿಂದ ಹಲವು ಯುವಕರು HIV ಪಾಸಿಟಿವ್ ಆಗಿದ್ದಾರೆ. ಡ್ರಗ್‌ ವ್ಯಸನಿಯಾದ ಆ ಮಹಿಳೆ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗಿದೆ. ಈಕೆಯ ಜೊತೆ ಲೈಂಗಿಕತೆಯಲ್ಲಿ ಭಾಗಿಯಾಗಿದ್ದ 19 ಯುವಕರಿಗೆ HIV ಪಾಸಿಟಿವ್‌ ಆಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಮನಗರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: VIDEO: ‘ಈರುಳ್ಳಿ ಬಾಂಬ್’ ಅನಾಹುತ.. ಭಯಾನಕ ಸ್ಫೋಟಕ್ಕೆ ಬೈಕ್‌ ಸವಾರ ಸಾವು, ಇಬ್ಬರ ಸ್ಥಿತಿ ಗಂಭೀರ

Advertisment

ಉತ್ತರಾಖಂಡ್ ಮುಖ್ಯ ವೈದ್ಯಾಧಿಕಾರಿ ಹರೀಶ್ ಪಂತ್ ಅವರು ಒಂದು ವರ್ಷಕ್ಕೆ 20 HIV ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗುತ್ತಿತ್ತು. ಆದರೆ ಕೇವಲ 5 ತಿಂಗಳಿಗೆ 19 ಹೊಸ ಕೇಸ್‌ ಪತ್ತೆಯಾಗಿರೋದು ಅಚ್ಚರಿ ತಂದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಪಾಸಿಟಿವ್ ಆದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment