/newsfirstlive-kannada/media/post_attachments/wp-content/uploads/2025/06/Uttarakhand_cloudburst.jpg)
ಡೆಹ್ರಾಡೂನ್: ಮೇಘಸ್ಫೋಟ ಸಂಭವಿಸಿ ನಿರ್ಮಾಣ ಹಂತದ ಹೋಟೆಲ್ ಕಟ್ಟದಲ್ಲಿದ್ದ 9 ಕಾರ್ಮಿಕರು ನಾಪತ್ತೆ ಆಗಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಬರ್ಕೋಟ್-ಯಮುನೋತ್ರಿ ಮಾರ್ಗದಲ್ಲಿರುವ ಸಿಲೈ ಬ್ಯಾಂಡ್ನಲ್ಲಿ ನಡೆದಿದೆ.
ಸಿಲೈ ಬ್ಯಾಂಡ್ನಲ್ಲಿ ಹೋಟೆಲ್ವೊಂದರ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇದಕ್ಕಾಗಿ ಕಟ್ಟದಲ್ಲಿ 9 ಕಾರ್ಮಿಕರು ಇದ್ದರು. ಆದರೆ ಈಗ ಮೇಘಸ್ಫೋಟ ಸಂಭವಿಸಿ ಅವರೆಲ್ಲಾ ಕಾಣೆಯಾಗಿದ್ದಾರೆ. ಜೊತೆಗೆ ಹೋಟೆಲ್ಗೂ ಸಾಕಷ್ಟು ಹಾನಿಯಾಗಿದೆ. ಭಾರೀ ಮಳೆಯಿಂದ ಕೆಲ ಅವಶೇಷಗಳು ನೀರಿನೊಂದಿಗೆ ಹರಿದು ಬಂದು ಯಮುನೋತ್ರಿ ಮಾರ್ಗಕ್ಕೂ ಸಮಸ್ಯೆ ಆಗಿದೆ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ಹೇಳಿದ್ದಾರೆ.
ಇದನ್ನೂ ಓದಿ:ಸಾಲು ಸಾಲು ಸೋಲು.. ಹೆಡ್ ಕೋಚ್ ಗೌತಮ್ ಗಂಭೀರ್ ಸಹಾಯಕ ಸಿಬ್ಬಂದಿ ಏನ್ ಮಾಡ್ತಿದ್ದಾರೆ?
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ನಾಪತ್ತೆ ಆದವರ ಒಂದೂ ಕುರುಹು ಕೂಡ ಇದುವರೆಗೂ ಪತ್ತೆ ಆಗಿಲ್ಲ. ಮಳೆ ಜೋರಾಗಿದ್ದರಿಂದ ಯಾತ್ರಿಕರು ಹಾಗೂ ನಿವಾಸಿಗಳಿಗೆ ಸುರಕ್ಷತೆ ದೃಷ್ಟಿಯಿಂದ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಚಾರ್ ಧಾಮ್ ಯಾತ್ರೆಗೆ 24 ಗಂಟೆವರೆಗೆ ನಿಷೇಧ ಹೇರಲಾಗಿದೆ. ಮಳೆಯಿಂದ ಸಾಕಷ್ಟು ಸಮಸ್ಯೆಗಳು ಆಗುತ್ತಿರುವುದರಿಂದ ಹರಿದ್ವಾರ, ರಿಷಿಕೇಶ, ಶ್ರೀನಗರ, ರುದ್ರಪ್ರಯಾಗ, ಸೋಂಪ್ರಾಯಾಗ್ ಮತ್ತು ವಿಕಾಸ್ ನಗರಕ್ಕೆ ಯಾತ್ರಿಗಳು ತೆರಳುವುದಕ್ಕೆ ನಿರ್ಬಂಧ ಹಾಕುವಂತೆ ಪೊಲೀಸರಿಗೆ, ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ