Advertisment

ಭೀಕರ ಅಪಘಾತ 14 ಸಾವು.. 9 ಪ್ರಯಾಣಿಕರಿಗೆ ಗಂಭೀರ ಗಾಯ

author-image
Ganesh
Updated On
ಭೀಕರ ಅಪಘಾತ 14 ಸಾವು.. 9 ಪ್ರಯಾಣಿಕರಿಗೆ ಗಂಭೀರ ಗಾಯ
Advertisment
  • ರಿಷಿಕೇಶ್​-ಬದ್ರಿನಾಥ್ ಹೆದ್ದಾರಿಯಲ್ಲಿ ಕಣಿವೆಗೆ ಬಿದ್ದ ಟೆಂಪೋ
  • ಟಿಟಿಯಲ್ಲಿ ಪ್ರಯಾಣಿಸುತ್ತಿದ್ದ 23ರ ಪೈಕಿ 14 ಮಂದಿ ದುರ್ಮರಣ
  • ಮೃತರ ಕುಟುಂಬಕ್ಕೆ ಪಿಎಂಎನ್‌ಆರ್‌ಎಫ್‌ನಿಂದ ₹2 ಲಕ್ಷ ಪರಿಹಾರ

ಉತ್ತರಾಖಂಡದ ಹೆದ್ದಾರಿಯೊಂದರಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಟೆಂಪೋ ಟ್ರಾವೆಲರ್ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ 14 ಜನರು ಸಾವನ್ನಪ್ಪಿದ್ದಾರೆ.

Advertisment

ರಿಷಿಕೇಶ್​-ಬದ್ರಿನಾಥ್ ಹೆದ್ದಾರಿಯಲ್ಲಿ ಕಣಿವೆಗೆ ಬಿದ್ದ ಟೆಂಪೋ
ಉತ್ತರಾಖಂಡದ ರುದ್ರಪ್ರಯಾಗದ ರಿಷಿಕೇಶ್​-ಬದರಿನಾಥ್ ಹೆದ್ದಾರಿಯಲ್ಲಿ 23 ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಆಳವಾದ ಕಮರಿಗೆ ಬಿದ್ದ ಪರಿಣಾಮ ಸುಮಾರು 14 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹೆದ್ದಾರಿ ಮೇಲಿಂದ ಅಲಕನಂದಾ ನದಿಗೆ ಟೆಂಪೋ ಟ್ರಾವೆಲರ್ ಉರುಳಿ ಬಿದ್ದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ.. ಇನ್ನಿಬ್ಬರು ರಿಷಿಕೇಶ್​ ಏಮ್ಸ್​ನಲ್ಲಿ ಪ್ರಾಣಬಿಟ್ಟಿದ್ರೆ.. ಇನ್ನಿಬ್ಬರು ರುದ್ರಪ್ರಯಾಗ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಉಳಿದ 9 ಮಂದಿಗೂ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗ ಬಹುದು ಎಂದ ಹೇಳಲಾಗ್ತಿದೆ.

ಇದನ್ನೂ ಓದಿ:ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!

publive-image

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರ ಏರ್​ ಲಿಫ್ಟ್​
ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರುದ್ರಪ್ರಯಾಗ ಜಿಲ್ಲೆಯಲ್ಲಿ ಪೊಲೀಸರು, ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತಾದ್ರು ಅಷ್ಟರಲ್ಲಿ ಹಲವರ ಪ್ರಾಣ ಪಕ್ಷ ಹಾರಿಹೋಗಿತ್ತು. ವಿಷಯ ಮುಟ್ಟುತ್ತಿದ್ದಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸೂಚನೆಯ ಮೇರೆಗೆ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಏರ್​ ಲಿಫ್ಟ್​ ಮಾಡಲಾಗಿ, ಹೆಲಿ-ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯ್ತು.

Advertisment

ಇದನ್ನೂ ಓದಿ:ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

ಮೃತರ ಕುಟುಂಬಕ್ಕೆ ಪಿಎಂಎನ್‌ಆರ್‌ಎಫ್‌ನಿಂದ ₹2 ಲಕ್ಷ ಪರಿಹಾರ
ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಅಪಾರ ನೋವನ್ನು ಭರಿಸುವ ಶಕ್ತಿ ನೀಡಲಿ ಅಂತಾ ಪ್ರಧಾನಿ ಮೋದಿ ಪೋಸ್ಟ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ, ಗಾಯಾಳುಗಳಿಗೆ 50,000 ರೂಪಾಯಿಯನ್ನ ಘೋಷಿಸಿದ್ದಾರೆ. ಇನ್ನೂ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ:ಪೆಟ್ರೋಲ್‌, ಡೀಸೆಲ್‌​ ಬೆಲೆ​ ಮಾತ್ರವಲ್ಲ.. ಬಡವರ ಜೇಬಿಗೆ ಇನ್ನೂ ಬೀಳಲಿದೆ ಕತ್ತರಿ.. ಯಾಕೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment