ಉತ್ತರಾಖಂಡ್​​ನಲ್ಲಿ ನಡೆದಿದೆ ಅತೀ ದೀರ್ಘಕಾಲದ ಡಿಜಿಟಲ್ ಅರೆಸ್ಟ್​!18 ದಿನಗಳ ಬಂಧನದಲ್ಲಿ ಪ್ರೊಫೇಸರ್ ಕಳೆದುಕೊಂಡಿದ್ದು ಎಷ್ಟು ಲಕ್ಷ?

author-image
Gopal Kulkarni
Updated On
ಉತ್ತರಾಖಂಡ್​​ನಲ್ಲಿ ನಡೆದಿದೆ ಅತೀ ದೀರ್ಘಕಾಲದ ಡಿಜಿಟಲ್ ಅರೆಸ್ಟ್​!18 ದಿನಗಳ ಬಂಧನದಲ್ಲಿ ಪ್ರೊಫೇಸರ್ ಕಳೆದುಕೊಂಡಿದ್ದು ಎಷ್ಟು ಲಕ್ಷ?
Advertisment
  • ಉತ್ತರಾಖಂಡ್​ನಲ್ಲಿ ನಡೆದಿದೆ ಅತ್ಯಂತ ಸುದೀರ್ಘವಾದ ಡಿಜಿಟಲ್ ಅರೆಸ್ಟ್​
  • 18 ದಿನಗಳ ಕಾಲ ಪ್ರೊಫೇಸರ್​​ರನ್ನು ಡಿಜಿಟಲ್ ಬಂಧನದಲ್ಲಿಟ್ಟಿದ್ದ ಕಿಲಾಡಿಗಳು
  • ಕ್ಯಾಮರಾ ಆನ್ ​ಇಟ್ಟು ಎಲ್ಲ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದ್ದ ಸಂತ್ರಸ್ತ

ಉತ್ತರಾಖಂಡ್​ನ ನೈನಿತಾಲ್​ನ ಪ್ರೊಫೇಸರ್​ ಸುಮಾರು 18 ದಿನಗಳ ಕಾಲ ಡಿಜಿಟಲ್ ಅರೆಸ್ಟ್​ನಲ್ಲಿದ್ದು ಸುಮಾರು 47 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವಂಚಕ ಸಿಬಿಐ ಆಫೀಸರ್​​ ನೆಪದಲ್ಲಿ ಪ್ರೊಫೇಸರ್​ನನ್ನು ಟ್ರ್ಯಾಪ್​ ಮಾಡಿ 47 ಲಕ್ಷ ರೂಪಾಯಿ ದೋಚಿದ್ದಾನೆ. ಸದ್ಯ ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

58 ವರ್ಷದ ನೈನಿತಅಲ್ ಪ್ರೊಫೇಸರ್​ನನ್ನು ಸುಮಾರು 18 ದಿನಗಳ ಕಾಲ ಡಿಜಿಟಲ್ ಅರೆಸ್ಟ್​​ನಲ್ಲಿ ಕೂಡಿ ಹಾಕಲಾಗಿದೆ. ನೀನು ಮೋಸ ಮಾಡಿ ದುಡ್ಡು ಮಾಡಿದ್ದೀಯಾ ಎಂಬ ನೆಪದಲ್ಲಿ ಸಿಬಿಐ ಆಫೀಸರ್​ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ. ಪೊಲೀಸರು ಹೇಳುವ ಪ್ರಕಾರ, ಪ್ರೊಫೇಸರ್​ ಒಂದು ಹಂತದ ಆರ್ಥಿಕ ಹಿನ್ನೆಲೆಯೊಂದಿಗೆ ಏಕಾಂಗಿಯಾಗಿ ಬದುಕುತ್ತಿದ್ದಾರೆ. ನೀನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ಅವರನ್ನು ಬಹಳ ವ್ಯವಸ್ಥಿತವಾಗಿ ಟ್ರ್ಯಾಪ್ ಮಾಡಿದ್ದಾರೆ.

ಡಿಸೆಂಬರ್ 5 ರಂದು ಪ್ರೊಫೇಸರ್​​ +670 ಐಎಸ್​ಡಿಯ ನಂಬರ್​ನಿಂದ ಅಂತಾರಾಷ್ಟ್ರೀಯ ಕರೆಯೊಂದನ್ನು ಸ್ವೀಕರಿಸುತ್ತಾರೆ. ಕಾಲ್ ಮಾಡಿದವನು ನಾನು ಸಿಬಿಐ ಆಫೀಸರ್​ ಎಂದು ಹೇಳಿ ನಾನು ತನಿಖೆ ಮುಗಿಸುವವರೆಗೂ ಯಾರೊಂದಿಗೂ ಕಾಲ್ ಮಾಡುವಂತಿಲ್ಲ ಎಂದು ಬೆದರಿಸಿದ್ದಾನೆ. ಸುಮಾರು 18 ದಿನಗಳ ಕಾಲ ಹೀಗೆಯೇ ಕಾಡಿ ಕೊನೆಗೆ 47 ಲಕ್ಷ ರೂಪಾಯಿಯನ್ನು ಹೊಡೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

publive-image

ಡಿಎಸ್​ಪಿ ಅಂಕುಶ ಮಿಶ್ರಾ ಇದನ್ನು ಉತ್ತರಾಖಂಡ್​ ಕಂಡ ಅತೀ ಸುದೀರ್ಘಾವಧಿ ಡಿಜಿಟಲ್ ಅರೆಸ್ಟ್ ಎಂದಿದ್ದಾರೆ. ಇನ್ನು ಇದೇ ಪ್ರಕರಣದ ಅಡಿಯಲ್ಲಿ ಅಮನ್ ಕುಶ್ವಾಲ್ ಎಂಬ ಶಂಕಿತನನ್ನು ಬಂಧಿಸಲಾಗಿದೆ. ಜಂಟಿ ಕಾರ್ಯಾಚರಣೆ ಮೂಲಕ ಉತ್ತರಾಖಂಡ್ ಸ್ಪೇಷಲ್ ಟಾಸ್ಕ್ ಫೋರ್ಸ್​ ಮತ್ತು ಸೈಬರ್ ಪೊಲೀಸರು ಸೇರಿ  ಬಂಧಿಸಿದ್ದಾರೆ. ವಿಚಾರಣೆಯೊಂದಿಗೆ ಇದರ ಮಾಸ್ಟರ್ ಮೈಂಡ್​ ಯಾರು. ಇದರ ಹಿಂದೆ ಇನ್ನೂ ಎಷ್ಟು ಜನರ ಕೈವಾಡವಿದೆ ಎಂದು ತಿಳಿಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:VIDEO: ಹೆಂಡತಿ ಕಾಟ; ಕಿರುಕುಳಕ್ಕೆ ಬೇಸತ್ತು ಲೈವ್​ನಲ್ಲೇ ಪ್ರಾಣ ಬಿಟ್ಟ IT ಕಂಪನಿ ಮ್ಯಾನೇಜರ್

ವರದಿಗಳು ಹೇಳುವ ಪ್ರಕಾರ ವಂಚನೆಗೊಳಗಾದ ವ್ಯಕ್ತಿಗೆ ಸ್ಕೈಪ್​​ನ್ನು ಡೌನ್​ಲೋಡ್ ಮಾಡಿಕೊಳ್ಳಲು ಹೇಳಲಾಗಿತ್ತಂತೆ. ಕ್ಯಾಮರಾವನ್ನು ಸದಾಕಲಾ ಆನ್ ಆಗಿ ಇಡಲು ಸೂಚಿಸಲಾಗಿತ್ತಂತೆ. 58 ವರ್ಷದ ವ್ಯಕ್ತಿಯನ್ನು 18 ದಿನಗಳ ಕಾಲ ಅದ್ಯಾವ ಮಟ್ಟಿಗೆ ಅವರು ಕಾಡಿದ್ದಾರೆ ಅಂದ್ರೆ ನಿತ್ಯ ಕರ್ಮಗಳಿಗಾಗಿ ಹಾಗೂ ಊಟ ಮಾಡುವುದಕ್ಕಾಗಿಯೂ ಕೂಡ ಅವರ ಒಪ್ಪಿಗೆ ಪಡೆಯಬೇಕಾದ ಸ್ಥಿತಿಗೆ ಆತ ಬಂದು ಮುಟ್ಟಿದ್ದರಂತೆ. ತುಂಬಾ ಚಾಲಾಕಿತನದ ಆಟವಾಡಿ ಕೊನೆಗೆ ಆತನಿಂದು ಒಟ್ಟು 6 ಟ್ರಾನ್ಸಕ್ಷನ್​ಗಳ ಮೂಲಕ 47 ಲಕಷ ರೂಪಾಯಿ ಪಡೆದಿದ್ದಾರೆ. ತನಿಖೆಯ ಬಳಿಕ ಈ ಹಣವನ್ನು ವಾಪಸ್ ಕೊಡುವುದಾಗಿಯೂ ಕೂಡ ಹೇಳಿದ್ದಾರೆ. ಯಾವಾಗ ಡಿಸೆಂಬರ್ 23ರಂದು ವಂಚಕ ಸಡನ್ ಆಗಿ ಸಂಪರ್ಕ ಕಡಿತಗೊಳಿಸಿದನೋ ಪ್ರೊಫೇಸರ್​ ಕೂಡಲೇ ತಮ್ಮ ಸ್ನೇಹಿತನಿಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಹೇಳುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ:ಪುಣೆ ಬಸ್‌ನಲ್ಲಿ ರಾಕ್ಷಸ ಕೃತ್ಯ.. ಕಿರಾತಕ ಸಿಕ್ಕಿಬಿದ್ದಿದ್ದೇ ರೋಚಕ! 75 ಗಂಟೆಯ ಆ ಬೇಟೆ ಹೇಗಿತ್ತು?

ಪ್ರಕರಣವನ್ನು ಸದ್ಯ ಕೈಗೆತ್ತಿಕೊಂಡಿರುವ ಇನ್​ಸ್ಪೆಕ್ಟರ್​ ಅರುಣ್ ಕುಮಾರ್, ಪ್ರೊಫೇಸರ್​​ಗೆ ಸಂಪೂರ್ಣವಾಗಿ ಇಂತಹ ಸೈಬರ್ ಕ್ರೈಮ್​ ವಂಚನೆಗಳ ಅರಿವಿಲ್ಲ. ಪಾಪ ಭೀತಿಗೊಂಡು ಅವರು 18 ದಿನಗಳ ಕಾಲ ಐಸೋಲೇಟ್ ಆಗಿದ್ದಾರೆ. ವಂಚಕರು ಹೇಳಿದ ಎಲ್ಲಾ ಸೂಚನೆಗಳನ್ನು ಏನನ್ನೂ ಪ್ರಶ್ನಿಸಿದೆ ಪಾಲನೆ ಮಾಡಿದ್ದಾರೆ ಅಂತ ಹೇಳಿದ್ದಾರೆ.

ಡಿಜಿಟಲ್ ಅರೆಸ್ಟ್​ಗೆ ಸಂಬಂಧಿಸಿದಂತಹ ಪ್ರಕರಣಗಳು ಉತ್ತರಾಖಂಡ್​ನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. 2023ರಲ್ಲಿ ಕೇವಲ ಒಂದೇ ಒಂದು ಇಂತಹ ಪ್ರಕರಣ ಕಂಡು ಬಂದಿತ್ತು. ಆದ್ರೆ 2024ಕ್ಕೆ ಅದರ ಸಂಖ್ಯೆ 15ಕ್ಕೆ ತಲುಪಿತು. ಸಂತ್ರಸ್ತರು ಸುಮಾರು 13 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ದೆಹ್ರಾಡೂನ್​ನ ನಿವಾಸಿಯೊಬ್ಬ ಬರೋಬ್ಬರಿ 3 ಕೋಟಿ ರೂಪಾಯಿ ಕಳೆದುಕೊಂಡಿದ್ದು ವರದಿಯಾಗಿತ್ತು. ಮತ್ತೊಬ್ಬ ವ್ಯಕ್ತಿ ಸುಮಾರು 2.27 ಕೋಟಿ ರೂಪಾಯಿ ವಂಚಕರಿಗೆ ನೀಡಿದ್ದ ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆ ಈ ಬಗ್ಗೆ ಹಲವಾರು ಬಾರಿ ಜಾಗೃತಿ ಮೂಡಿಸಿದೆ ಸಂಶಯಾಸ್ಪದ ಕಾಲ್​ಗಳು ಬಂದಲ್ಲಿ ಕೂಡಲೇ ಜಾಗರೂಕರಾಗಿ ಪೊಲೀಸರಿಗೆ ವರದಿ ಮಾಡಿ ಎಂದು. ಸದ್ಯ ಪ್ರಕರಣದ ತನಿಖೆಯ ಹಂತದಲ್ಲಿದ್ದು ಉಳಿದ ಸತ್ಯಗಳೆಲ್ಲಾ ತನಿಖೆ ಸಂಪೂರ್ಣಗೊಂಡ ಬಳಿಕವೇ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment