ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ಆಯ್ಕೆ; ಯಾರು ಇವರು..?

author-image
Ganesh
Updated On
ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ಆಯ್ಕೆ; ಯಾರು ಇವರು..?
Advertisment
  • ಜನವರಿ 14 ರಿಂದ ಇಸ್ರೋಗೆ ನೂತನ ಸಾರಥಿ
  • ಹಾಲಿ ಅಧ್ಯಕ್ಷ ಎಸ್​.ಸೋಮನಾಥ್ ಅವಧಿ ಮುಕ್ತಾಯ
  • ವಿ.ನಾರಾಯಣನ್ ಹಿನ್ನೆಲೆ ಏನು? ಮೂಲತಃ ಎಲ್ಲಿಯವರು?

ಇಸ್ರೋದ (Indian Space Research Organisation ) ನೂತನ ಅಧ್ಯಕ್ಷರನ್ನಾಗಿ ಹಿರಿಯ ವಿಜ್ಞಾನಿ ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಜೊತೆಗೆ ಡಿಪಾರ್ಟ್​​​ಮೆಂಟ್ ಆಫ್ ಸ್ಪೇಸ್​ನ ಕಾರ್ಯದರ್ಶಿಯಾಗಿಯೂ ಆಯ್ಕೆ ಆಗಿದ್ದಾರೆ.

ಹಾಲಿ ಅಧ್ಯಕ್ಷ ಎಸ್​​.ಸೋಮನಾಥ್ ಅವರ ಉತ್ತರಾಧಿಕಾರಿಯಾಗಿ ನಾರಾಯಣನ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಜನವರಿ 14 ರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ನೂತನ ಮುಖ್ಯಸ್ಥರನ್ನು ಪಡೆಯಲಿದೆ. ಎಲ್​ಪಿಎಸ್​ಸಿ (the Liquid Propulsion Systems Centre ) ಮುಖ್ಯಸ್ಥರಾಗಿರುವ ನಾರಾಯಣನ್ ಅಧಿಕಾರವಧಿ ಎರಡು ವರ್ಷಗಳಾಗಿರುತ್ತದೆ. ಸ್ಪೇಸ್​ ಕಮಿಷನ್​ (Space Commission) ಅಧ್ಯಕ್ಷರೂ ಆಗಿರಲಿರುವ ನಾರಾಯಣನ್, ಕ್ರಯೋಜೆನಿಕ್ ಎಂಜಿನ್​ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ​ಫೋನ್ ಪದೇ ಪದೆ ಬಿಸಿ ಆಗಲು ಕಾರಣ ನೀವೇ.. ಈ ತಪ್ಪುಗಳನ್ನು ಮಾಡಲೇಬೇಡಿ..!

publive-image

ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿ ಪ್ರತಿಕ್ರಿಯಿಸಿರುವ ಇಸ್ರೋದ ನೂತನ ಮುಖ್ಯಸ್ಥರು.. ಭಾರತಕ್ಕಾಗಿ ನಾವು ಸ್ಪಷ್ಟ ಮಾರ್ಗಸೂಚಿಯನ್ನು ಹೊಂದಿದ್ದೇವೆ. ನಮ್ಮಲ್ಲಿ ಉತ್ತಮ ಪ್ರತಿಭೆಗಳಿರೋದ್ರಿಂದ ಇಸ್ರೋವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆ ಇದೆ ಎಂದಿದ್ದಾರೆ ನಾರಾಯಣನ್.

ಪ್ರಸ್ತುತ ನಾರಾಯಣನ್ ಉನ್ನತ ಶ್ರೇಣಿಯ ಹಿರಿಯ ವಿಜ್ಞಾನಿ ಆಗಿರುವ ಅವರು, ಇಸ್ರೋದ ನಿರ್ದೇಶಕರಲ್ಲಿ ಒಬ್ಬರು. ಇಸ್ರೋದಲ್ಲಿ ಅವರು LPSC ನ ಮುಖ್ಯಸ್ಥರಾಗಿ ಮುನ್ನಡೆಸುತ್ತಿದ್ದಾರೆ. ಅಂದ್ಹಾಗೆ ಇವರ ಊರು ತಮಿಳುನಾಡಿನ ಕನ್ಯಾಕುಮಾರಿ. ತಮಿಳು ಮಾಧ್ಯಮದಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದುಕೊಂಡರು. ನಂತರ Cryogenic Engineering ವಿಭಾಗದಲ್ಲಿ M Tech ಪದವಿ ಪಡೆದುಕೊಂಡರು. ಐಐಟಿ ಏರೋಸ್ಪೇಸ್​ ಎಂಜಿನಿಯರಿಂಗ್​​ನಲ್ಲಿ ಪಿಹೆಚ್​ಡಿ ಪಡೆದುಕೊಂಡಿದ್ದಾರೆ. ಎಂಟೆಕ್​ ಪ್ರೋಗ್ರಾಮ್​​ನಲ್ಲಿ ಸಿಲ್ವರ್ ಮೆಡಲ್ ಗೌರವಕ್ಕೆ ಪಾತ್ರರಾಗಿದ್ದಾರೆ. 1984ರಿಂದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.

ಇದನ್ನೂ ಓದಿ:ಮಕ್ಕಳ ಪಾಲಿಗೆ ವೈರಿ ಆಗಿರುವ HMP ವೈರಸ್​.. ವೈದ್ಯರು, ತಜ್ಞರಿಂದ ಅಭಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment