ಕೈದಿಗಳಿಗೆ ವರವಾಯ್ತು ಜೈಲಿನಲ್ಲಿ ನಡೆದ ರಾಮಲೀಲಾ ನಾಟಕ; ವಾನರ ವೇಷ ಹಾಕಿದ ಇಬ್ಬರು ಎಸ್ಕೇಪ್!

author-image
Gopal Kulkarni
Updated On
ಕೈದಿಗಳಿಗೆ ವರವಾಯ್ತು ಜೈಲಿನಲ್ಲಿ ನಡೆದ ರಾಮಲೀಲಾ ನಾಟಕ; ವಾನರ ವೇಷ ಹಾಕಿದ ಇಬ್ಬರು ಎಸ್ಕೇಪ್!
Advertisment
  • ಜೈಲಿನಲ್ಲಿ ನಡೆಯುತ್ತಿದ್ದ ನಾಟಕವನ್ನೇ ವರದಾನ ಮಾಡಿಕೊಂಡ ಕೈದಿಗಳು
  • ಅತ್ತ ನಾಟಕ ನಡೆಯುತ್ತಿದ್ರೆ, ಇತ್ತ ಏಣಿ ಬಳಸಿ ಗೋಡೆ ಹಾರಿದ ಕಿಲಾಡಿಗಳು
  • ನಾಟಕದಲ್ಲಿ ವಾನರ ವೇಷ ಹಾಕಿದವರು ವಾನರರಂತೆ ಗೋಡೆ ಜಿಗಿದರು

ಉತ್ತರಾಖಂಡ್​ನ ಹರಿದ್ವಾರದ ರೋಷನ್​ಬಾದ್ ಜೈಲಿನಿಂದ ಇಬ್ಬರೂ ಆರೋಪಿಗಳು ಪರಾರಿಯಾದ ಬಗ್ಗೆ ವರದಿಯಾಗಿದೆ. ಜೈಲಿನಲ್ಲಿ ನವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ರಾಮಲೀಲಾ ನಾಟಕ ನಡೆಯುತ್ತಿರುವ ವೇಳೆ ಪಂಕಜ್ ಮತ್ತು ರಾಜ್​ಕುಮಾರ್ ಎಂಬ ಕೈದಿಗಳು ಎಸ್ಕೇಪ್ ಆಗಿದ್ದಾರೆ. ಹತ್ಯೆ ಮತ್ತು ಅಪಹರಣ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಬ್ಬರೂ ಕೈದಿಗಳು ರಾಮಲೀಲಾ ನಾಟಕದಲ್ಲಿ ವಾನರ ಪಾತ್ರ ಮಾಡಿದ್ದರು. ಎಲ್ಲರೂ ನಾಟಕ ನೋಡುತ್ತಾ ಮಗ್ನರಾಗಿದ್ದ ವೇಳೆ ವಾನರ ವೇಷಿಗಳು, ಅಸಲಿ ವಾನರಂತೆಯೇ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಹಿಂದೂಗಳಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರಕ್ಕೆ ಮೋಹನ್ ಭಾಗವತ್ ದೊಡ್ಡ ಸಂದೇಶ

ಈ ಒಂದು ಘಟನೆ ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ನಡೆದಿದೆ. ನಾಟಕದಲ್ಲಿ ಸೀತಾಮಾತೆ ರಾಮನನ್ನು ಸಂಧಿಸುವ ಸನ್ನಿವೇಶ ಬಂದರೂ ಕೂಡ ಈ ಇಬ್ಬರು ವಾನರ ವೇಷ ಹಾಕಿದವರು ಅಲ್ಲಿ ಕಾಣಿಸಿಲ್ಲ. ವಿಚಾರ ತಿಳಿದ ಜೈಲು ಸಿಬ್ಬಂದಿ ಹುಡುಕಾಟ ನಡೆಸಿದಾಗ. ಜೈಲಿನ ಗೋಡೆಯನ್ನು ಏಣಿಯಿಂದ ಹತ್ತಿ ಅಲ್ಲಿಂದ ಆಚೆ ಜಿಗಿದು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಈ ಗ್ರಾಮದಲ್ಲಿ ವರ ಕುದುರೆ ಮೇಲೆ ಕೂರುವಂತಿಲ್ಲ; ಕಾರಣ ಕೇಳಿದ್ರೆ ಶಾಕ್​ ಆಗೋದು ಪಕ್ಕಾ!


">October 12, 2024

ಈ ಬಗ್ಗೆ ಮಾತನಾಡಿರುವ ಹರಿದ್ವಾರದ ಎಸ್​ಎಸ್​ಪಿ ಪ್ರಮೇಂದ್ರ ಶುಕ್ರವಾರ ರಾತ್ರಿ ಜೈಲಿನೊಳಗಡೆ ನಡೆದ ರಾಮಲೀಲಾ ನಾಟದ ವೇಳೆ ಇಬ್ಬರು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಅವರ ಪತ್ತೆಗೆ ಈಗಾಗಲೇ ತಂಡವನ್ನು ರಚನೆ ಮಾಡಲಾಗಿದೆ. ಸದ್ಯದರಲ್ಲಿಯೇ ಇಬ್ಬರೂ ಕೈದಿಗಳನ್ನು ಸೆರೆಹಿಡಿಯಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮೇಂದ್ರ ಸಿಂಗ್ , ಜೈಲಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಇದೇ ವೇಳೆ ನಾಟಕವೂ ನಡೆಯುತ್ತಿತ್ತು. ಇದನ್ನೇ ಅವಕಾಶ ಮಾಡಿಕೊಂಡ ಇಬ್ಬರು ಕೈದಿಗಳು ಜೈಲಿನಿಂದ ಎಸ್ಕೇಪ್ ಆಗಿದ್ದಾರೆ. ಈ ಒಂದು ಘಟನೆಯನ್ನು ನಿರ್ಲಕ್ಷದ ಪರಮಾವಧಿಯೆಂದು ಪರಿಗಣಿಸಲಾಗಿದ್ದು. ಜೈಲು ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment