ಶ್ವಾಸಗುರುಗಳಿಂದ ಹಿಮಾಲಯದ ಮಡಿಲಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

author-image
Bheemappa
Updated On
ಶ್ವಾಸಗುರುಗಳಿಂದ ಹಿಮಾಲಯದ ಮಡಿಲಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Advertisment
  • ವಿಶ್ವಶಾಂತಿ ಸಂದೇಶ ಸಾರಿದ ಶ್ವಾಸಗುರು ವಚನಾನಂದ ಸ್ವಾಮೀಜಿ
  • ಪವಿತ್ರ ದೇವಭೂಮಿ ಲೇಹ್-ಲಡಾಖ್​​ನಲ್ಲಿ ಯೋಗ ದಿನಾಚರಣೆ
  • ಇವತ್ತು 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಲೇಹ್: ಪವಿತ್ರ ದೇವಭೂಮಿ ಲೇಹ್-ಲಡಾಖ್​​ನ ಅಸ್ಟ್ರಾ ಟರ್ಪ್ ಕ್ರೀಡಾಂಗಣದಲ್ಲಿ ನಡೆದ 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠ ಹಾಗೂ ಶ್ವಾಸಯೋಗ ಸಂಸ್ಥೆಯ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಯವರು ಭಾಗವಹಿಸಿ, ವಿಶ್ವಶಾಂತಿ ಸಂದೇಶ ಹರಡಿದರು.

publive-image

ಕೇಂದ್ರ ಆಯುಷ್ ಇಲಾಖೆ, ಭಾರತ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶ ಲಡಾಖ್ ಈ ಮೂರು ಸಹಯೋಗದಲ್ಲಿ 11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಲೇಹ್-ಲಡಾಖ್​​ನ ಅಸ್ಟ್ರಾ ಟರ್ಪ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಒಂದು ಭೂಮಿ, ಒಂದು ಆರೋಗ್ಯ ಎಂಬ ಥೀಮ್​​ನೊಂದಿಗೆ ವಿಶ್ವಶಾಂತಿ ಸಂದೇಶವನ್ನು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಯವರು ಸಾರಿದರು.

ಇದನ್ನೂ ಓದಿ: WTC ಟ್ರೋಫಿ ಗೆಲ್ಲಿಸಿಕೊಟ್ಟ ಆಫ್ರಿಕಾ ಕ್ಯಾಪ್ಟನ್​ಗೆ ಬಿಗ್ ಶಾಕ್​.. ಟೆಸ್ಟ್​ ಸರಣಿಯಿಂದ ಹೊರಕ್ಕೆ

publive-image

11ನೇಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಿಕ್ಕು ಸಂಘಸೇನಾಜೀ, ಸದ್ಗುರು ಬೃಹ್ಮೆಶಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಅರ್ಜುನ್​ ರಾಮ್ ಮೇಘವಾಲ್, ಮಾಜಿ ಲೆಪ್ಟಿನಂಟ್ ಗರ್ವರ್ನರ್ ಡಾ.ಕಿರಣ್ ಬೇಡಿ ಹಾಗೂ ಲಡಾಖ್​ ಸರ್ಕಾರದ ಸಚಿವರು, ಅಧಿಕಾರಿಗಳು ಸೇರಿದಂತೆ ಶಾಲಾ ಮಕ್ಕಳು, ಜನರು ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment