Advertisment

ಲಿಂಗಾಯತ ಹಿಂದೂ ಧರ್ಮದ ಭಾಗವೇ? ಜನ್ಮ, ಪುನರ್ಜನ್ಮ, ಮೋಕ್ಷದ ಬಗ್ಗೆ ವಚನಾನಂದ ಸ್ವಾಮೀಜಿ ಏನಂದ್ರು?

author-image
AS Harshith
Updated On
ಲಿಂಗಾಯತ ಹಿಂದೂ ಧರ್ಮದ ಭಾಗವೇ? ಜನ್ಮ, ಪುನರ್ಜನ್ಮ, ಮೋಕ್ಷದ ಬಗ್ಗೆ ವಚನಾನಂದ ಸ್ವಾಮೀಜಿ ಏನಂದ್ರು?
Advertisment
  • ಏಕದೇವ ಉಪಾಸನೆ ಮಾಡಲು ಲಿಂಗಾಯತ ತತ್ವ ಹೇಳುತ್ತದೆ
  • ಶರಣ ಅಂದರೆ ನಾನೇ ಸತಿಯಾಗಿ ಶಿವನನ್ನೇ ಪತಿಯಾಗಿ ಪೂಜಿಸುವುದು
  • ಬಸವಣ್ಣನವರು ಮೂಲ ಹಿಂದುನೇ ಎಂದ ವಚನಾನಂದ ಸ್ವಾಮೀಜಿ

ಶಿವ ಅಂದರೆ ಮಂಗಳಕರ. ಆತನ ಸ್ವರೂಪ ಲಿಂಗಾಯತ ನಿರಾಕಾರ. ಸ್ವರ್ಗ ಮತ್ತೆ ಪಾತಾಳದೊಳಗೆ ಕೂಡಲ ಸಂಗಮ ದೇವ. ಏಕದೇವ ಉಪಾಸನೆ ಮಾಡಿ ಎಂದು ಲಿಂಗಾಯತ ತತ್ವ ಹೇಳುತ್ತದೆ. ಲಿಂಗಾಯತ ಆಚರಣೆ ಮಾಡುತ್ತಾರೋ ಬಿಡುತ್ತಾರೋ ಅವರಿಗೆ ಬಿಟ್ಟಿದ್ದು ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

Advertisment

ನ್ಯೂಸ್​​ಫಸ್ಟ್​ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಲಿಂಗಾಯತ ಆಚರಣೆ, ಜನ್ಮ, ಪುನರ್ಜನ್ಮ, ಮೋಕ್ಷದ ಬಗ್ಗೆ ಇರುವ ಲಿಂಗಾಯತ ನಂಬಿಕೆಗಳು ಕುರಿತಾಗಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನದಿಯಲ್ಲಿ ಈಶ್ವರ್​ ಮಲ್ಪೆಗೆ ಸಿಕ್ತು 15kg ಲೋಹದ ಸಾಮಾಗ್ರಿ! ಅದನ್ನು ಕಂಡು ಅರ್ಜುನ್​ ಲಾರಿ ಮಾಲೀಕ ಏನಂದ್ರು ಗೊತ್ತಾ?

ಅಂಗ-ಲಿಂಗ ಇವುಗಳ ಸಾಮರಸ್ಯವೇ ಶಿವಯೋಗ. ಶರಣಸತಿ ಲಿಂಗಪತಿ ಎನ್ನುವಂತಹ ಆಲೋಚನೆಗಳು ಮತ್ತು ತತ್ವಶಾಸ್ತ್ರಗಳು ಇರೋದು ಲಿಂಗಾಯತರಲ್ಲಿ. ಶರಣ ಅಂದರೆ ನಾನೇ ಸತಿಯಾಗಿ ಶಿವನನ್ನೇ ಪತಿಯಾಗಿ ಪೂಜಿಸುವುದು. ಆ ಸಿದ್ಧಾಂತ ನಮ್ಮದು ಎಂದು ವಚನಾನಂದ ಸ್ವಾಮೀಜಿಗಳು ಹೇಳಿದ್ದಾರೆ.

Advertisment

ಲಿಂಗಾಯತ ಧರ್ಮಕ್ಕೆ ಪಾರಮಾರ್ಥಿಕ ನೆಲೆ ಏನು?

ಬಸವಣ್ಣ ಶ್ರೇಷ್ಠ ಜ್ಞಾನಿಗಳು. ಅವರು 12 ವರ್ಷಗಳ ಕಾಲ ಕೂಡಲ ಸಂಗಮದಲ್ಲಿದ್ದವರು. 64 ವಿದ್ಯೆಗಳ ಪ್ರವೀಣರು. ಬಸವಣ್ಣನವರು ಆ ವಿಚಾರಗಳನ್ನು ಹೇಳಿದರು. ಶಿವ ಅಂದರೆ ಮಂಗಳಕರ. ಬಸವಣ್ಣ ಮೂಲ ಹಿಂದುನೇ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ: BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್​​

ಲಿಂಗಾಯತರು ಪುನರ್ಜನ್ಮವನ್ನು ನಂಬುತ್ತಾರೆ ಕರ್ಮ ಸಿದ್ಧಾಂತವನ್ನು ನಂಬುತ್ತಾರೆ. ಪುನರ್ಜನ್ಮದಿಂದ ಮುಕ್ತಿಯಾಗುವ ವಿಧಾನವನ್ನು ಬಸವಣ್ಣ ಹೇಳಿದ್ದಾರೆ. ಜೊತೆಗೆ ಕರ್ಮದಿಂದ ಮುಕ್ತಿಯಾಗುವುದನ್ನು ಹೇಳಿದ್ದಾರೆ.

Advertisment

ಇದನ್ನೂ ಓದಿ: ದೇವಸ್ಥಾನದಲ್ಲಿ ಪೊಲೀಸ್​​​ ಜೊತೆ ಕುಡುಕನ ಕಿರಿಕ್: ಎಣ್ಣೆ ಏಟಲ್ಲಿ ಆತ ಮಾಡಿದ್ದೇನು ಗೊತ್ತಾ..?

ಮೋಕ್ಷದ ಬಗ್ಗೆಯೂ ವಚನಾನಂದ ಸ್ವಾಮೀಜಿ ಮಾತನಾಡಿದ್ದು. ಮೋಕ್ಷ ಎಂದರೆ ಲಿಂಗೈಕ್ಯರಾಗುವುದು ಎಂದರ್ಥ. ಈ ದೇಹ ಬಿಟ್ಟು ಲಿಂಗೈಕ್ಯರಾಗುವುದಲ್ಲ. ಇರುವಾಗಲೇ ಲಿಂಗೈಕ್ಯರಾಗುವುದು. ಅದನ್ನೇ ಮೋಕ್ಷ ಎನ್ನುವುದು. ಮೋಕ್ಷ ಎಂದರೆ ಮುಕ್ತನಾಗಿರುವುದು. ಕೆಲವರು ಕೃಷ್ಣೈಕ್ಯ, ಬೃಂದಾವನೈಕ್ಯ, ಶಿವೈಕ್ಯ ಎನ್ನುತ್ತಾರೆ. ನಮ್ಮಲ್ಲಿ ಲಿಂಗೈಕ ಎನ್ನುತ್ತಾರೆ. ಶಬ್ಧ, ಭಾಷೆ ಬೇರೆ ಬೇರೆ ಇರಬಹುದು ಆದರೆ ಆರ್ಥ ಮಾತ್ರ ಒಂದೇ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment