ವಡಾ ಪಾವ್​ ಮಾರಿ ತಿಂಗಳಿಗೆ 2 ಲಕ್ಷ ದುಡಿತಾನೆ ಈ ವ್ಯಕ್ತಿ! MBA ಪದವೀಧರನಿಗಿಂತ ಈತನ ಆದಾಯವೇ ಜಾಸ್ತಿ!

author-image
AS Harshith
Updated On
ವಡಾ ಪಾವ್​ ಮಾರಿ ತಿಂಗಳಿಗೆ 2 ಲಕ್ಷ ದುಡಿತಾನೆ ಈ ವ್ಯಕ್ತಿ! MBA ಪದವೀಧರನಿಗಿಂತ ಈತನ ಆದಾಯವೇ ಜಾಸ್ತಿ!
Advertisment
  • ವಡಾ ಪಾವ್​ ಮಾರಾಟಗಾರನ ವಾರ್ಷಿಕ ಆದಾಯವೆಷ್ಟು ಗೊತ್ತಾ?
  • ಈತನ ಆದಾಯವು MBA ಪದವೀಧರನ ಆದಾಯಕ್ಕೆ ಹೋಳಿಸಬಹುದು
  • ಒಂದು ವಡಾ ಪಾವ್​ಗೆ 15 ರೂಪಾಯಿಯಂತೆ ತಿಂಗಳಿಗೆ ದುಡಿಯೋದೆಷ್ಟು?

ಬಹುತೇಕ ಮಂದಿ ಓದಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಇನ್ನು ಹಲವರು ಅತಿ ಹೆಚ್ಚು ಸಂಬಳ ಸಿಗುವ ಕೆಲಸದತ್ತ ಚಿಂತಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬರೀ ವಡಾ ಪಾವ್​ ಮಾರಿ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ ಎಂದರೆ ನಂಬ್ತೀರಾ?. ನಂಬಲೇ ಬೇಕು.

ಇನ್​​ಸ್ಟಾಗ್ರಾಂ ಕಂಟೆಂಟ್​ ಕ್ರಿಯೇಟರ್​ ಸಾರ್ಥಕ್​​ ಸಚ್​ದೇವ ಎಂಬವರು ಬೀದಿ ಬದಿಯಲ್ಲಿ ವಡಾ ಪಾವ್​ ಮಾರುವ ವ್ಯಕ್ತಿ ವಾರ್ಷಿಕ ಆದಾಯದ ಅಂದಾಜನ್ನು ವಿಡಿಯೋದ ಮೂಲಕ ತಿಳಿಸಿದ್ದಾರೆ. ವಡಾ ಪಾವ್​ ಮಾರಾಟಗಾರನೊಬ್ಬ ಇತರೆ ವೆಚ್ಚಗಳನ್ನು ಹೊರತುಪಡಿಸಿ ತಿಂಗಳಿಗೆ 2 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಅಂದರೆ ವಾರ್ಷಿಕವಾಗಿ 20 ರಿಂದ 24 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಇದೀಗ ಈ ಕುರಿತಾಗಿ ಡೆಲ್ಟಾಯ್​ ಸಮೀಕ್ಷೆಯೊಂದನ್ನು ಮಾಡಿದ್ದು, ಎಂಬಿಎ ಪದವೀಧರನ ಸರಾಸರಿ ವೇತನವು ವರ್ಷಕ್ಕೆ 20-24 ಲಕ್ಷ ರೂಪಾಯಿ ಇದ್ದು, ವಡಾ ಪಾವ್​ ಮಾರಾಟಗಾರ ಆದಾಯ ಎಂಬಿಎ ಪದವೀಧರನ ಆದಾಯಕ್ಕೆ ಸಮನಾಗಿದೆ ಎಂಬುದನ್ನು ತಿಳಿಸಿದೆ.

ಒಂದು ವಡಾ ಪಾವ್​ಗೆ ಎಷ್ಟು ರೂಪಾಯಿ?

ಒಂದು ವಡಾ ಪಾವ್​ಗೆ 15 ರೂಪಾಯಿಯಂತೆ​ ಮಾರಾಟಗಾರ ದಿನಕ್ಕೆ 622 ವಡಾ ಪಾವ್​ ಮಾರಾಟ ಮಾರುತ್ತಾರಂತೆ. ಅಂದರೆ ದಿನಕ್ಕೆ 9,300 ರೂಪಾಯಿ ಆದಾಯ ಬರುತ್ತದೆ. ಇದೇ ಆದಾಯವನ್ನು ತಿಂಗಳಿಗೆ ಒಟ್ಟು ಮಾಡಿದಾಗ 2 ಲಕ್ಷ ಆದಾಯ ಗಳಿಸುತ್ತಾರೆ.

ಇದನ್ನೂ ಓದಿ: ಪ್ರೀತಿಸಿದ ಯುವಕನ ಜೊತೆಗೆ ಮದುವೆಗೆ ನಿರಾಕರಣೆ.. ಕುಟುಂಬದ 13 ಜನರನ್ನು ವಿಷ ಹಾಕಿ ಕೊಂದ ಯುವತಿ

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಭಾರೀ ವೈರಲ್​ ಆಗಿದ್ದು, ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದೊಂದು ಸುಲಭವಾಗಿ ಹಣ ಮಾಡುವ ವಿಧಾನವಾಗಿದೆ ಎಂದು ಅನೇಕರು ಕಾಮೆಂಟ್​​ ಮಾಡುತ್ತಿದ್ದಾರೆ. ಇನ್ನು ಕೆಲವರು ಬೀದಿ ಬದಿಯ ಆಹಾರಗಳು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: BBMP: ಕನ್ನಡ ಉಪನ್ಯಾಸಕರು ಬೇಕಾಗಿದ್ದಾರೆ.. ಸಂಬಳ 43-83 ಸಾವಿರ!

ಒಟ್ಟಿನಲ್ಲಿ ಓದಿ ಕೆಲಸ ಗಿಟ್ಟಿಸಿಕೊಂಡು ದುಡಿಯುವ ಕೈಗಳು ಒಂದೆಡೆಯಾದರೆ, ಸ್ವಂತ ವಡಾ ಪಾವ್​ ಅಂಗಡಿ ಇಟ್ಟುಕೊಂಡು ತಿಂಗಳಿಗೆ 2 ಲಕ್ಷಕ್ಕೂ ಅಧಿಕ ದುಡಿಯುವ ಕೈಗಳೇ ಮೇಲೂ ಎಂಬುದನ್ನು ನೆಟ್ಟಿಗರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment