ಹೋಳಿ ಆಡ್ತಿದ್ದ ಮಹಿಳೆಗೆ ಕಾರಿನಿಂದ ಗುದ್ದಿ, ಜೀವ ತೆಗೆದ.. ಪಶ್ಚಾತಾಪ ಇಲ್ಲದೆ ಓಂ ನಮಃ ಶಿವಾಯ ಎಂದ ಆರೋಪಿ

author-image
Bheemappa
Updated On
ಹೋಳಿ ಆಡ್ತಿದ್ದ ಮಹಿಳೆಗೆ ಕಾರಿನಿಂದ ಗುದ್ದಿ, ಜೀವ ತೆಗೆದ.. ಪಶ್ಚಾತಾಪ ಇಲ್ಲದೆ ಓಂ ನಮಃ ಶಿವಾಯ ಎಂದ ಆರೋಪಿ
Advertisment
  • ಘಟನೆಯಲ್ಲಿ ಓರ್ವ ಮಹಿಳೆ ಇನ್ನಿಲ್ಲ, ಏಳು ಜನರು ಗಂಭೀರ
  • ಹೋಳಿ ಆಡುತ್ತಿದ್ದ ಮಹಿಳೆಯ ಮೇಲೆ ಕಾರು ಹರಿಸಿದ ಯುವಕ
  • ಬೈಕ್​​ಗಳಿಗೆ ಡಿಕ್ಕಿ ಮಾಡಿ ಓಂ ನಮಃ ಶಿವಾಯ ಎಂದು ಕೂಗಿದ

ಆಡೋ ಮಕ್ಕಳ ಕೈಗೆ ಅಧಿಕಾರ ಕೊಟ್ರೆ ಕಚೇರಿ ತುಂಬಾ ಕೋತಿಚೇಷ್ಟೆ ಹೆಚ್ಚಾಗುತ್ತೆ. ಹಾಗೇ ಬರಬಾರದ ವಯಸ್ಸಲ್ಲಿ ದಂಡಿಯಾಗಿ ಬಂದ ದುಡ್ಡು, ಮದ ಹೆಚ್ಚಿಸುತ್ತಂತೆ. ಗುಜರಾತ್​​​ನ ವಡೋದರಾದಲ್ಲಿ ಹೋಳಿ ಆಡ್ತಿದ್ದ ಮಹಿಳೆ ಮೇಲೆ ಯುವಕನೊಬ್ಬ ಕಾರು ಹರಿಸಿದ್ದಾನೆ. ಬಳಿಕ ಆ ಹುಡುಗನ ಅಸಹ್ಯ ವರ್ತನೆ, ಜನರ ಆಕ್ರೋಶಕ್ಕೆ ಕಾರಣ ಆಗಿದೆ.

ಮಧ್ಯರಾತ್ರಿ 12.30 ರ ಸಮಯದಲ್ಲಿ ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗೆ ದೊಡ್ಡ ಅನಾಹುತವೇ ನಡೆದೋಗಿತ್ತು. ಅತಿ ವೇಗವಾಗಿ ಬಂದ ಕಾರಿನ ಸೇಫ್ ಚೇಂಜ್ ಆಗಿದೆ ಅಂದ್ರೆ ಇದ್ರಿಂದ ಡಿಕ್ಕಿಯಾದವರ ಪರಿಸ್ಥಿತಿ ಏನ್​ ಆಗಿರಬೇಡ.

ನಶೆ ಏಟಲ್ಲಿ ಕಾನೂನನ್ನೇ ಗಾಳಿಗೆ ತೂರಿದ ಯುವಕ

ಕುಡಿದ ಮತ್ತು, ಗಾಂಜಾ ನಶೆ, ದುಡ್ಡಿನ ದೌಲತ್ತು. ಇದೆಲ್ಲಾ ಒಂದೆಡೆ ಸೇರಿದ್ರೆ ತಲೆಗೆ ಕಿರೀಟ ಬಂದಿರುವ ಫೀಲಿಂಗ್. ಇಲ್ಲೂ ಅದೇ ಆಗಿರೋದು. ಆರೋಪಿಗೆ ಈಗ ಜಸ್ಟ್​​​ 20 ವರ್ಷ. ಕಾನೂನು ವಿದ್ಯಾರ್ಥಿ ಅಂತೆ. ನಶೆ ಏಟಲ್ಲಿ ಕಾನೂನನ್ನೇ ಗಾಳಿಗೆ ತೂರಿ, ಗಾಳಿಯಲ್ಲಿ ಕಾರ್​ ತೇಲಾಸಿದ್ದಾನೆ. ಓರ್ವ ಮಹಿಳೆಯನ್ನ ಇವನ ಡ್ರೈವಿಂಗ್​​​ ಕೊಂದಾಕಿದೆ. ಏಳು ಮಂದಿ ಆಸ್ಪತ್ರೆ ಬೆಡ್​ನಲ್ಲಿ ಮಲಗಿದ್ದಾರೆ.

ಇದನ್ನೂ ಓದಿ:ಮೊದಲು ಪಾರ್ಕಿಗೆ ಕರೆದುಕೊಂಡು ಹೋದರು; ಬಾಡಿಗೆ ಕಾರಲ್ಲಿ ನರ್ಸ್ ಸ್ವಾತಿನ ಸಾಯಿಸಿದ್ದು ಹೇಗೆ..?

publive-image

ಅಂದ್ಹಾಗೆ ಇದು ನಡೆದಿರೋದು ಗುಜರಾತ್​ನ ವಡೋದರದ ಕರೇಲಿಬಾಗ್​ ಪ್ರದೇಶದಲ್ಲಿ. ಪಾನಮತ್ತ ವಿದ್ಯಾರ್ಥಿ ಚಾಲಕನ ಅಜಾಗರೂಕತೆ ಇಷ್ಟೆಲ್ಲಾ ದುರಂತಕ್ಕೆ ಕಾರಣ ಆಗಿದೆ. ಕಾರು ಎಷ್ಟು ಸ್ಪೀಡ್​​ ಇತ್ತು ಅನ್ನೋದಕ್ಕೆ ಬ್ಯಾನೆಟ್, ಇಂಜಿನ್ ಸ್ಥಿತಿಗತಿ ವಿವರಿಸ್ತಿದೆ.

ರಕ್ಷಿತ್ ಕಾರಿನಿಂದ ಇಳಿದು ದರ್ಪ

ಒಬ್ಬ ರಕ್ಷಿತ್, ಸೈಡ್​​​ನಲ್ಲಿದ್ದವನು ಮಿತ್ ಚೌಹಾಣ್. ಕಾರ್​ ಆಫ್​ ಆಗ್ತಿದ್ದಂತೆ ಮಿತ್​, ಪಶ್ಚಾತ್ತಾಪ ಭಯದಲ್ಲಿ ಕೆಳಗಿಳಿದು ನಾನಲ್ಲ ಅವನು ಅಂತ ಕಾಲಿಗೆ ಬುದ್ಧಿ ಹೇಳಿದ್ದಾನೆ. ಹೀಗೆ ಡಿಕ್ಕಿ ಹೊಡೆದ ಬಳಿಕ ರಕ್ಷಿತ್ ಕಾರಿನಿಂದ ಇಳಿದು ದರ್ಪ ತೋರಿದ್ದಾನೆ. ಯಾವ ಸಾಹಸಕ್ಕೆ ಓಂ ನಮಃ ಶಿವಾಯ ಅಂತ ಕೂಗುದ್ನೋ ಏನೋ? ಅಷ್ಟೊತ್ತಿಗೆ ಜಮಾಯಿಸಿದ ಜನ, ಧರ್ಮದೇಟು ಹಾಕಿದ್ದಾರೆ.

ಆದ್ರೆ, ಮಗಳೊಂದಿಗೆ ಹೋಳಿ ಹಬ್ಬ ಆಚರಿಸುವಾಗ ಹೆಣವಾದ ಹೇಮಾನಿ ಪಾಟೀಲ್ ಮಾಡಿದ ತಪ್ಪಾದ್ರು ಏನು?. ಕೋರ್ಟ್​ ಮೆಟ್ಟಿಲೇರಿ ಕಾನೂನು ಕಾಪಾಡಬೇಕಾದ ವಿದ್ಯಾರ್ಥಿಗಳೇ ಹೀಗೆ ಕುಡಿದು ಜನರ ಪ್ರಾಣ ತೆಗೆದ್ರೆ ಹೇಗೆ ಅನ್ನೋ ಪ್ರಶ್ನೆ?.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment