U-19 ಟೀಂ ಇಂಡಿಯಾ ಪ್ರಕಟ.. ಇಬ್ಬರು ಐಪಿಎಲ್ ಸ್ಟಾರ್​ಗಳಿಗೆ ಒಲಿದ ಲಕ್..!

author-image
Ganesh
Updated On
U-19 ಟೀಂ ಇಂಡಿಯಾ ಪ್ರಕಟ.. ಇಬ್ಬರು ಐಪಿಎಲ್ ಸ್ಟಾರ್​ಗಳಿಗೆ ಒಲಿದ ಲಕ್..!
Advertisment
  • ಇಂಗ್ಲೆಂಡ್ ಪ್ರವಾಸಕ್ಕೆ U-19 ತಂಡ ಪ್ರಕಟಿಸಿದ ಬಿಸಿಸಿಐ
  • ಜೂನ್ 24 ರಿಂದ ಟೂರ್ನಿಗಳು ಆರಂಭ ಆಗಲಿವೆ
  • ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ತಂಡ ಪ್ರಕಟ

ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಅಂಡರ್-19 ತಂಡವನ್ನು ಪ್ರಕಟಿಸಿದೆ. ಇಬ್ಬರು ಐಪಿಎಲ್ ಸ್ಟಾರ್​ಗಳು ತಂಡದಲ್ಲಿ ಸ್ಥಾನ ಪಡೆದಿದ್ದು, 14 ವರ್ಷ ವೈಭವ್ ಸೂರ್ಯವಂಶಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​​ನ ಆಯುಷ್ ಮ್ಹಾತ್ರೆಗೆ ಲಕ್ ಒಲಿದಿದೆ.

ಇದನ್ನೂ ಓದಿ: ‘ಸರ್ಪ್ರೈಸ್ ಕೊಡ್ತೀನಿ ಕಣ್ಣು ಮುಚ್ಚಿಕೋ ಅಂದ, ಆಮೇಲೆ ನೋಡಿದ್ರೆ..’ ನಟ ಮನು ಬಗ್ಗೆ ಸಂತ್ರಸ್ತೆ ಮತ್ತಷ್ಟು ಆರೋಪ

ವಿಶೇಷ ಅಂದರೆ ಆಯುಷ್ ಮ್ಹಾತ್ರೆಗೆ ನಾಯಕತ್ವದಲ್ಲಿ ಅಂಡರ್-19 ಟೀಂ ಇಂಡಿಯಾ ಆಡಲಿದೆ. ಇನ್ನು, ಅಭಿಜ್ಞಾನ್ ಕುಂಡು ಅವರು ಉಪನಾಯಕರಾಗಿ ತಂಡವನ್ನು ಲೀಡ್ ಮಾಡಲಿದ್ದಾರೆ. ಆಯುಷ್ ಮತ್ತು ಸೂರ್ಯವಂಶಿ ಈ ಬಾರಿಯ ಐಪಿಎಲ್​ನಲ್ಲಿ ಹೆಚ್ಚು ಗಮನ ಸೆಳೆದರು.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್​ ಅಲ್ಲವೇ ಅಲ್ಲ.. RCBಗೆ ಅಸಲಿ ವಿಲನ್ ಯಾರು?

ರಾಜಸ್ಥಾನ್ ರಾಯಲ್ಸ್ ಪರ 7 ಮ್ಯಾಚ್ ಆಡಿರುವ ಸೂರ್ಯವಂಶಿ 252 ರನ್​ಗಳಿಸಿದ್ದಾರೆ. ಸ್ಪರ್ಧಾತ್ಮಕ ಕ್ರಿಕೆಟ್ ಜಗತ್ತಿನಲ್ಲಿ ಅತಂತ್ಯ ವೇಗವಾಗಿ ಶತಕ ಬಾರಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಸೂರ್ಯವಂಶಿ 35 ಬಾಲ್​​ನಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.

ಸಿಎಸ್​ಕೆ ಪರ ಆಡಿರುವ ಆಯುಷ್ ಕೂಡ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕ ಋತುರಾಜ್ ಗಾಯಕ್ವಾಡ್​ ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ತಂಡಕ್ಕೆ ಎಂಟ್ರಿ ನೀಡಿದರು. ಸಿಎಸ್​ಕೆ ಪರ ಬ್ಯಾಟ್ ಬೀಸಿದ ಮ್ಹಾತ್ರೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡದಲ್ಲಿ ಅತ್ಯಧಿಕ ಸ್ಕೋರ್​ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಂಡರ್-19 ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ವಿವಿಧ ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಐದು ಯೂಥ್ ಏಕದಿನ ಸೀರೀಸ್ ಕೂಡ ಸೇರಿದೆ. ಜೂನ್ 24 ರಿಂದ ಜುಲೈ 23 ವರೆಗೆ ಪಂದ್ಯಾವಳಿಗಳು ನಡೆಯಲಿವೆ.

ಹೇಗಿದೆ ತಂಡ..?

ಆಯುಷ್ ಮ್ಹಾತ್ರೆ (ಕ್ಯಾಪ್ಟನ್), ಅಭಿಜ್ಞಾನ್ ಕುಂಡು (ಉಪನಾಯಕ), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್ ಸಿಂಗ್, ರಾಹುಲ್ ಕುಮಾರ್, ಹೆನಿಲ್ ಪಟೇಲ್, ಯುಧಜಿತ್ ಗುಹಾ, ಪ್ರಣವ್ ರಾಘವೇಂದ್ರ, ಆರ್.ಎಸ್. ಅಂಬರೀಶ್, ಕನಿಶಕ್, ಖಿಲಾನ್ ಪಟೇಲ್, ಮೊಹ್ಮದ್ ಎನಾನ್, ಆದಿತ್ಯ ರಾಣಾ, ಅನ್ಮೋಲ್​​ಜಿತ್ ಸಿಂಗ್

ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್​ ಮುಂದೆ 5 ಚಾಲೆಂಜ್​ಗಳು.. RCB ಟಾರ್ಗೆಟ್ ಏನು ಗೊತ್ತಾ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment