/newsfirstlive-kannada/media/post_attachments/wp-content/uploads/2024/12/Vaibhav_Suryavanshi_NEW.jpg)
ಆಕ್ಷನ್ ಟೇಬಲ್ನಲ್ಲಿ ಕ್ರಿಕೆಟ್ ಲೋಕಲ್ ಸೂಪರ್ ಸ್ಟಾರ್ಗಳು ಯಾರಿಗೂ ಬೇಡವಾದ್ರು. ಆದ್ರೆ, ಈ ಯಂಗ್ಸ್ಟರ್ ವೈಭವ್ ಸೂರ್ಯವಂಶಿ ಖರೀದಿಗೆ ಪೈಪೋಟಿ ನಡೆಯಿತು. ಪರಿಣಾಮ 13 ವರ್ಷಕ್ಕೆ ಈತ ಕೋಟ್ಯಾಧಿಪತಿ. ಅಂದ್ಹಾಗೆ ಈ ಕೋಟ್ಯಾಧಿಪತಿ ಪಟ್ಟ ಸುಖಾ ಸುಮ್ಮನೆ ಬಂದಿದ್ದಲ್ಲ. ಇದರ ಹಿಂದೆ ತಂದೆಯ ಋಣದ ಭಾರವಿದೆ. ವಿವಾದದ ಅವಮಾನವಿದೆ. ಹ್ಯಾಟ್ರಿಕ್ ಸಿಕ್ಸರ್ನ ರೋಚಕ ಕತೆಯಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜು ಹಲವು ಅಚ್ಚರಿಗಳಿಗೆ ಕಾರಣವಾಯ್ತು. ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ರಂತ ಜಂಟಲ್ಮನ್ ಗೇಮ್ ಕಂಡ ಲೆಜೆಂಡ್ಗಳೇ ಅನ್ಸೋಲ್ಡ್ ಆದರು. ಐಪಿಎಲ್ನಲ್ಲಿ ಮ್ಯಾಚ್ ವಿನ್ನರ್ಸ್ ಅನಿಸಿಕೊಂಡ ಶಾರ್ದೂಲ್ ಠಾಕೂರ್, ಪೃಥ್ವಿ ಷಾ ಯಾರಿಗೂ ಬೇಡವಾದರು. ಆದ್ರೆ, ಈ 13 ವರ್ಷದ ಯಂಗ್ ಆಲ್ರೌಂಡರ್ ಹೆಸರು ಬಂದ ಕೂಡಲೇ ಬಿಡ್ಡಿಂಗ್ ವಾರ್ ನಡೆಯಿತು.
ಇದನ್ನೂ ಓದಿ: IPL Auction; ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆದ ಭಾರತದ ಮೂವರು ಸ್ಟಾರ್ ಪ್ಲೇಯರ್ಸ್?
ಮೆಗಾ ಆಕ್ಷನ್ನಲ್ಲಿ ಸ್ಟಾರ್ಗಳ ಅಬ್ಬರದ ನಡುವೆ ಸದ್ದು ಮಾಡಿದ್ದು ಈ ಯಂಗ್ಸ್ಟರ್ ಹೆಸರು. ಆಕ್ಷನರ್ ಮಲ್ಲಿಕಾ ಸಾಗರ್ ನಂಬರ್ 491, ವೈಭವ್ ಸೂರ್ಯವಂಶಿ ಎಂಬ ಭವಿಷ್ಯದ ಭರವಸೆಯ ಹೆಸರು ಹೇಳಿದ್ದೇ ತಡ ಫ್ರಾಂಚೈಸಿಗಳು ಎದ್ದು ಕೂತವು. ಡೆಲ್ಲಿ ಕ್ಯಾಪಿಟಲ್ಸ್- ರಾಜಸ್ಥಾನ್ ರಾಯಲ್ಸ್ ನೀನಾ.? ನಾನಾ.? ಎಂಬಂತೆ ಜಿದ್ದಿಗೆ ಬಿದ್ವು. 30 ಲಕ್ಷ ಮೂಲ ಬೆಲೆ ಹೊಂದಿದ್ದ ವೈಭವ್ ಸೂರ್ಯವಂಶಿಯ ಪ್ರೈಸ್ ನೋಡ ನೋಡ್ತಿದ್ದಂತೆ ಕೋಟಿಯ ಗಡಿ ದಾಟಿತು. ಅಂತಿಮವಾಗಿ ಬರೋಬ್ಬರಿ 1.10 ಕೋಟಿಗೆ 13 ವರ್ಷದ ಹುಡುಗನನ್ನ ರಾಜಸ್ಥಾನ್ ರಾಯಲ್ಸ್ ಖರೀದಿಸಿತು.
13 ವರ್ಷ, ಆ 3 ಘಟನೆ, 1.10 ಕೋಟಿ ಹಣ.!
13 ವರ್ಷಕ್ಕೆ ಕೋಟ್ಯಧಿಪತಿ. ಕೇಳೋಕೆ ಮೈ ಜುಮ್ ಅನ್ನಿಸುತ್ತೆ. ವೈಭವ್ ಸೂರ್ಯವಂಶಿ ಕೋಟಿಗೆ ಸೇಲ್ ಆದ ಬೆನ್ನಲ್ಲೇ ಪುಣ್ಯ ಮಾಡಿರಬೇಕು. ಅದೃಷ್ಟ ಮಾಡಿರಬೇಕು ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದ್ರೆ, ಈ ಪಾಪ-ಪುಣ್ಯ, ಅದೃಷ್ಟ ಎಷ್ಟರ ಮಟ್ಟಿಗೆ ವರ್ಕೌಟ್ ಆಗಿದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ, ಯುವ ಆಟಗಾರನ ಕಠಿಣ ಪರಿಶ್ರಮಕ್ಕೆ ಫಲವಂತೂ ಸಿಕ್ಕಿದೆ. ಅಂದ್ಹಾಗೆ 13 ವರ್ಷದ ವೈಭವ್ ಜೀವನಕ್ಕೆ ಟ್ವಸ್ಟ್ ಆ 3 ಘಟನೆಗಳು.
ತಲೆಯ ಮೇಲಿತ್ತು ತಂದೆಯ ಋಣದ ಭಾರ.!
ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಪ್ರೀತಿ ಬೆಳೆಸಿಕೊಂಡ ವೈಭವ್ ಟ್ಯಾಲೆಂಟ್ನ ಮೊದಲು ಗುರುತಿಸಿದ್ದೇ ತಂದೆ ಸಂಜೀವ್. ಕ್ರಿಕೆಟ್ ಪ್ರೇಮಿಯಾಗಿದ್ದ ಸಂಜೀವ್ ಆರಂಭದಲ್ಲಿ ಮನೆಯ ಬಳಿಯೇ ನೆಟ್ಸ್ ತಯಾರಿಸಿ ಮಗನ ಅಭ್ಯಾಸಕ್ಕೆ ನೆರವಾದರು. ಬಳಿಕ ವೈಭವ್ ಉತ್ಸಾಹ ಹೆಚ್ಚಾದಂತೆ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಇಷ್ಟೇ ಅಲ್ಲ, ಮಗನನ್ನ ಕ್ರಿಕೆಟರ್ ಮಾಡೋ ಪಣ ತೊಟ್ಟ ತಂದೆ ಹಣದ ಅಡಚಣೆಯಾದಾಗ ಇದ್ದ ಸ್ವಲ್ಪ ಕೃಷಿ ಜಮೀನನ್ನೆ ಮಾರಿದರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್ ಓಜಾ ಬಳಿ ಕೋಚಿಂಗ್ಗೆ ಸೇರಿಸಿದರು. ಅಕಾಡೆಮಿ ಸೇರಿದ ಮೊದಲ ದಿನ ತಂದೆಯ ಋಣ ತೀರಿಸೋ ಪಣ ತೊಟ್ಟಿದ್ದ ವೈಭವ್ ಸೂರ್ಯವಂಶಿ.
ಸಕ್ಸಸ್ ಬೆನ್ನಲ್ಲೇ ಎದುರಾಗಿತ್ತು ವಿವಾದ ಅವಮಾನ.!
ಸ್ಪಷ್ಟವಾದ ಗುರಿ ಹೊಂದಿ, ಕಠಿಣ ಪರಿಶ್ರಮದಿಂದ ಹೋರಾಡಿದ ವೈಭವ್ ಸೂರ್ಯವಂಶಿಗೆ ಅಂದುಕೊಂಡಂತೆ ಬೇಗನೇ ಸಕ್ಸಸ್ ಸಿಕ್ಕಿತು. ಬಿಹಾರ ಕ್ರಿಕೆಟ್ ಅಸೋಷಿಯೇಶನ್ನ ಏಜ್ ಗ್ರೂಪ್ ಕ್ರಿಕೆಟ್ನಲ್ಲಿ ವೈಭವ್ ಹೆಸರು ಸಖತ್ ಸೌಂಡ್ ಮಾಡಿತು. ಈ ಸಕ್ಸಸ್ ಬೆನ್ನಲ್ಲೇ ವಿವಾದದ ಅವಮಾನ ಎದುರಾಯಿತು. ಏಜ್ ಫ್ರಾಡ್ನ ಬಲವಾದ ಆರೋಪ ಕೇಳಿಬಂತು. ಆಗ ಬಿಸಿಸಿಐ ನಿಯಮದಂತೆ ವೈಭವ್, ಬೋನ್ ಟೆಸ್ಟ್ಗೆ ಒಳಗಾಗಿ, ತನ್ನ ತಾನು ತಪ್ಪು ಮಾಡಿಲ್ಲ ಅನ್ನೋದು ಪ್ರೂವ್ ಮಾಡಿದರು.
ಇದನ್ನೂ ಓದಿ:IPL 2025 Auction; ಸ್ಪಿನ್ನರ್ ಚಹಾಲ್ಗೂ ಒಲಿದ ಬಂದ ಲಕ್ಷ್ಮಿ.. ಬಾರೀ ಮೊತ್ತಕ್ಕೆ ಸೇಲ್ ಆದ RCB ಮಾಜಿ ಪ್ಲೇಯರ್
ಬದುಕು ಬದಲಿಸಿದ್ದು ಆ ಹ್ಯಾಟ್ರಿಕ್ ಸಿಕ್ಸರ್.!
ತನ್ನ ಆಟದಿಂದಲೇ ಗಮನ ಸಳೆದ ವೈಭವ್ಗೆ 11ನೇ ವರ್ಷಕ್ಕೆ ಭಾರತ ಅಂಡರ್ 19 ತಂಡಕ್ಕೆ ಎಂಟ್ರಿ ಕೊಟ್ಟಿದ್ದ. 12 ವರ್ಷಕ್ಕೆ ರಣಜಿ ಟ್ರೋಫಿ ಡೆಬ್ಯೂ ಮಾಡಿದ್ದ. ಐಪಿಎಲ್ ಆಡೋ ಕನಸು ತನ್ನಲ್ಲಿತ್ತು. ಈ ಕನಸನ್ನ ನನಸು ಮಾಡಿದ್ದು ಆ ಹ್ಯಾಟ್ರಿಕ್ ಸಿಕ್ಸರ್. ಐಪಿಎಲ್ ಆಕ್ಷನ್ಗೂ ಮುನ್ನ ರಾಜಸ್ಥಾನ ರಾಯಲ್ಸ್ ಟ್ರಯಲ್ಸ್ ನಡೆಸಿತ್ತು. ಈ ಟ್ರಯಲ್ಸ್ ಹೋಗಿದ್ದ ಸೂರ್ಯವಂಶಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ರಂತೆ. ಇದನ್ನ ನೋಡಿ ಇಂಪ್ರೆಸ್ ಆದ ಮ್ಯಾನೇಜ್ಮೆಂಟ್ 1.10 ಕೋಟಿ ರೂಪಾಯಿಗೆ ಖರೀದಿಸಿದೆ.
ಸಾಧಿಸೋ ಪಣತೊಟ್ಟು ಛಲದಿಂದ ಹೋರಾಡಿದ ವೈಭವ್ ಸೂರ್ಯವಂಶಿ 13 ವರ್ಷಕ್ಕೆ ಕೋಟ್ಯಧಿಪತಿ ಆಗಿದ್ದಾನೆ. ಆದ್ರೆ, ಚಿಕ್ಕ ವಯಸ್ಸಿಗೆ ಸಿಕ್ಕಿರೋ ಯಶಸ್ಸಿನ ಅಮಲು ತಲೆ ಏರದಿರಲಿ ಅನ್ನೋದು ಕ್ರಿಕೆಟ್ ಲೋಕದ ಆಶಯವಾಗಿದೆ. ಅತಿ ವೇಗವಾಗಿ ಸಕ್ಸಸ್ ಕಂಡು ಅಷ್ಟೇ ವೇಗವಾಗಿ ಮರೆಯಾದ ಪೃಥ್ವಿ ಷಾ ಉದಾಹರಣೆ ಎಲ್ಲರ ಮುಂದಿದೆ. ಹೀಗಾಗಿ ಈ ಬಿಹಾರ ಬಾಯ್ ಮುಂದೆ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ