ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್​.. ಅತೀ ಕಡಿಮೆ ಬಾಲ್​ಗೆ ಶತಕ ಬಾರಿಸಿ ದಾಖಲೆ..!

author-image
Ganesh
Updated On
ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್​.. ಅತೀ ಕಡಿಮೆ ಬಾಲ್​ಗೆ ಶತಕ ಬಾರಿಸಿ ದಾಖಲೆ..!
Advertisment
  • ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಶತಕ
  • ಎಷ್ಟು ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದಾರೆ ಗೊತ್ತಾ..?
  • ಸೂರ್ಯವಂಶಿ ಮುಂದಿನ ಟಾರ್ಗೆಟ್ ದ್ವಿಶತಕ

ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ವೋರ್ಸೆಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹೊಡಿಬಡಿ ಆಟವಾಡಿದ ವೈಭವ್, ಕೇವಲ 52 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್‌ ಒಳಗೊಂಡ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮತ್ತೆ ಸುವರ್ಣಾವಕಾಶ ಕೈಚೆಲ್ಲಿದ ಕನ್ನಡಿಗ.. ಅಭಿಮಾನಿಗಳಿಂದ ಭಾರೀ ಆಕ್ರೋಶ..!

ನನಗೆ ದಾಖಲೆ ಆಗಿರೋದು ಗೊತ್ತಿರಲಿಲ್ಲ. ನಾನು ಪೆವಿಲಿಯನ್​ಗೆ ಬಂದಾಗ ನಮ್ಮ ಮ್ಯಾನೇಜರ್​ ಅಂಕಿತ್ ಸರ್ ಅವರು ತಿಳಿಸಿದರು. ಮುಂದಿನ ಬಾರಿ 200 ಸ್ಕೋರ್ ಮಾಡುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮುಂದಿನ 50 ಓವರ್​ವರೆಗೂ ಆಡುವ ಗುಡಿಯನ್ನ ಹೊಂದಿರುವ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಭು ಚೌಹಾಣ್ ಮನೆಯಲ್ಲಿ ಬೀಗರ ಗಲಾಟೆ, ಮಾರಾಮಾರಿ.. ಕಪಾಳಕ್ಕೆ ಬಾರಿಸಿದ ಶಾಸಕ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment