/newsfirstlive-kannada/media/post_attachments/wp-content/uploads/2025/07/vaibhav_suryavanshi_New.jpg)
ಒಂದು ಕಡೆ 25 ವರ್ಷದ ಶುಭ್ಮನ್ ಗಿಲ್ ಸೀನಿಯರ್ ಇಂಗ್ಲೆಂಡ್ ಟೀಮ್ನ ಬೆಂಡೆತ್ತಿದ್ದಾರೆ. ಇನ್ನೊಂದೆಡೆ 14 ವರ್ಷದ ವೈಭವ್ ಸೂರ್ಯವಂಶಿ ಜೂನಿಯರ್ ಇಂಗ್ಲೆಂಡ್ ಟೀಮ್ನ ರುಬ್ಬುತ್ತಿದ್ದಾರೆ. ಅವರದ್ದೇ ಹೋಮ್ಗ್ರೌಂಡ್ನಲ್ಲಿ ಆಂಗ್ಲರನ್ನ ಅಟ್ಟಾಡಿಸಿರೋ ವೈಭವ್ ಸೂರ್ಯವಂಶಿ, ಕ್ರಿಕೆಟ್ ಜಗತ್ತಿಗೆ ಹೊಸ ಸಂದೇಶ ರವಾನಿಸಿದ್ದಾರೆ. ಸೂಪರ್ ಸ್ಟಾರ್ ಸೂರ್ಯವಂಶಿಯ ಸ್ಪೆಷಲ್ ರಿಪೋರ್ಟ್.
ಫೋರ್, ಸಿಕ್ಸ್ ಇಂಗ್ಲೆಂಡ್ನ ವೋರ್ಸ್ಸ್ಟೆರ್ನಲ್ಲಿ ಟೀಮ್ ಇಂಡಿಯಾ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಸೃಷ್ಟಿಸಿದ್ದು ರನ್ ಸುನಾಮಿಯನ್ನ. 14 ವರ್ಷದ ಯುವ ಆಟಗಾರ ನಿರ್ಭೀತ ಆಟವನ್ನಾಡ್ತಾ ಬೌಂಡರಿ, ಸಿಕ್ಸರ್ಗಳ ಧಮಾಕ ಸೃಷ್ಟಿಸ್ತಾ ಇದ್ರೆ, ಇಂಗ್ಲೆಂಡ್ ಬೌಲರ್ಗಳು ತಬ್ಬಿಬ್ಬಾಗಿದ್ರು. ಆ ಅಗ್ರೆಸ್ಸಿವ್ ಆಟ, ಫಿಯರ್ಲೆಸ್ ಆ್ಯಟಿಟ್ಯೂಡ್ ಕ್ರಿಕೆಟ್ ಲೋಕವೇ ಸ್ಟನ್ ಆಗಿದೆ.
ಆಂಗ್ಲರ ನಾಡಲ್ಲಿ ಸೂರ್ಯವಂಶಿ ಸೆನ್ಸೇಷನಲ್ ಆಟ.!
ಭಾರತದ ನಯಾ ಸೂಪರ್ ಸ್ಟಾರ್ ವೈಭವ್ ಸೂರ್ಯವಂಶಿ ಆಂಗ್ಲರ ನಾಡಲ್ಲಿ ಆರ್ಭಟಿಸಿದ್ದಾರೆ. ಇಂಗ್ಲೆಂಡ್ ಅಂಡರ್ 19 ತಂಡದ ಎದುರಿನ 4ನೇ ಯೂತ್ ಒಡಿಐ ಪಂದ್ಯದಲ್ಲಿ ವೈಭವ್ ಇಂಗ್ಲೆಂಡ್ ಬೌಲಿಂಗ್ ಧೂಳಿಪಟ ಮಾಡಿದರು. ನೀವ್ ನಂಬ್ತಿರೋ ಇಲ್ವೋ, 14 ವರ್ಷದ ಹುಡುಗ ಸೆಂಚುರಿ ಸಿಡಿಸಿದ್ದು ಜಸ್ಟ್ 52 ಎಸೆತಕ್ಕೆ.
ವೇಗದ ಶತಕ ಸಿಡಿಸಿ ದಾಖಲೆ ಬರೆದ 14ರ ಪೋರ.!
ಯೂತ್ ಒಡಿಐನಲ್ಲಿ ದಾಖಲಾದ ವೇಗದ ಶತಕ ಇದು. ಬೌಂಡರಿ, ಸಿಕ್ಸರ್ಗಳಲ್ಲೇ ರನ್ಡೀಲ್ ಮಾಡಿದ ವೈಭವ್ ಸೂರ್ಯವಂಶಿ ಜಸ್ಟ್ 52 ಎಸೆತಕ್ಕೆ ಸೆಂಚುರಿ ಬಾರಿಸಿದರು. ಶತಕದ ಗಡಿ ದಾಟಿದ ಮಾತ್ರಕ್ಕೆ ರನ್ ದಾಹ ನೀಗಲ್ಲ. ಆ ನಂತರವೂ ಅಬ್ಬರಿಸಿದ ಸೂರ್ಯವಂಶಿ 78 ಎಸೆತಕ್ಕೆ 143 ರನ್ ಸಿಡಿಸಿದರು. ಈ ಸ್ಪೋಟಕ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್, 13 ಬೌಂಡರಿಗಳಿದ್ದವು.
ಸೆಂಚುರಿ ಸಿಡಿಸಲು ಸ್ಪೂರ್ತಿಯಾದ ಶುಭ್ಮನ್.!
ಇಂಗ್ಲೆಂಡ್ ಸೀನಿಯರ್ ತಂಡಕ್ಕೆ ಶುಭ್ಮನ್ ಗಿಲ್ ತಲೆನೋವಾಗಿದ್ದಾರೆ. ಅತ್ಯದ್ಭುತ ಫಾರ್ಮ್ನಲ್ಲಿ ಬ್ಯಾಟ್ ಬೀಸ್ತಾ ಇರೋ ಶುಭ್ಮನ್ ಗಿಲ್, ಬೆನ್ ಸ್ಟೋಕ್ಸ್ ಪಡೆಯ ಪ್ಲಾನ್ ಸ್ಟ್ರೋಕ್ ಕೊಡ್ತಿದ್ದಾರೆ. ಇತ್ತ ಇಂಗ್ಲೆಂಡ್ ಜೂನಿಯರ್ ತಂಡವನ್ನ ವೈಭವ್ ಸೂರ್ಯವಂಶಿ ಕಾಡ್ತಿದ್ದಾರೆ. ಅಂದ್ಹಾಗೆ ಈ ಸೂರ್ಯವಂಶಿಗೆ ಸ್ಪೂರ್ತಿ ಯಾರು ಗೊತ್ತಾ.? ಶುಭ್ಮನ್ ಗಿಲ್.!
ನಾನು ಶುಭ್ಮನ್ ಗಿಲ್ರಿಂದ ಸ್ಪೂರ್ತಿ ಪಡೆದುಕೊಂಡೆ. ನಾನು ಆ ಟೆಸ್ಟ್ ನೋಡಿದೆ. 100 ಮತ್ತು 200 ರನ್ ಹೊಡೆದ ಬಳಿಕವೂ ಅದೇ ಆಟ ಆ ಮುಂದುವರೆಸಿದರು. ತಂಡವನ್ನ ಮುಂದೆ ತೆಗೆದುಕೊಂಡು ಹೋದರು. ನನಗೂ ಇವತ್ತು ಸಮಯವಿತ್ತು. 20 ಓವರ್ಗಳು ಬಾಕಿ ಉಳಿದಿದರು. ನಾನು ದೊಡ್ಡ ಇನ್ನಿಂಗ್ಸ್ ಕಟ್ಟಬಹುದಿತ್ತು.
ನಾನೇ ನೆಕ್ಸ್ಟ್ ಸೂಪರ್ಸ್ಟಾರ್.. ಸೂರ್ಯವಂಶಿ ಸಂದೇಶ.!
ವಿಸ್ಪೋಟಕ ಶತಕದೊಂದಿಗೆ ಸೂರ್ಯವಂಶಿ ಕ್ರಿಕೆಟ್ ಜಗತ್ತಿನ ನೆಕ್ಸ್ಟ್ ಸೂಪರ್ ಸ್ಟಾರ್ ನಾನೇ ಅನ್ನೋ ಸಂದೇಶವನ್ನ ತನ್ನ ಬ್ಯಾಟಿಂಗ್ನಿಂದಲೇ ನೀಡಿದ್ದಾನೆ. ಯುವ ಆಟಗಾರನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಯಾರಾದರು ಯಾವುದೇ ಅನುಮಾನ, ಕಿಂಚಿತ್ತೂ ಹಿಂಜರಿಕೆಯಿಲ್ಲದೇ ಈ ಮಾತನ್ನ ಒಪ್ಪಲೇಬೇಕು. ಈ ಸರಣಿಯಲ್ಲೇ ಸೂರ್ಯವಂಶಿ ಇಂಗ್ಲೆಂಡ್ ತಂಡಕ್ಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ.!
ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್
ಇಂಗ್ಲೆಂಡ್ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ 19 ಎಸೆತಗಳಲ್ಲಿ 49 ರನ್ ಸಿಡಿಸಿದ್ದ ವೈಭವ್ ಸೂರ್ಯವಂಶಿ, 2ನೇ ಏಕದಿನದಲ್ಲಿ 34 ಎಸೆತಕ್ಕೆ 45 ರನ್ಗಳಿಸಿದರು. 3ನೇ ಏಕದಿನದಲ್ಲಿ ಜಸ್ಟ್ 31 ಎಸೆತಕ್ಕೆ 86 ರನ್ ಸಿಡಿಸಿದ ಮಿಂಚಿದ ಸೂರ್ಯವಂಶಿ, 4ನೇ ಏಕದಿನದಲ್ಲಿ 78 ಎಸೆತಕ್ಕೆ ಬರೋಬ್ಬರಿ 143 ರನ್ ಕಲೆ ಹಾಕಿದರು.
IPL ಅಖಾಡದಲ್ಲೂ ಸೂರ್ಯವಂಶಿ ಆರ್ಭಟ.!
ವೈಭವ್ ಸೂರ್ಯವಂಶಿ ನೆಕ್ಸ್ಟ್ ಸೂಪರ್ ಸ್ಟಾರ್ ಅನ್ನೋದಕ್ಕೆ ಐಪಿಎಲ್ ಸೀಸನ್ 18ಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಾ.? ಘಟಾನುಘಟಿ ಬೌಲರ್ಗಳನ್ನ ಬೆಚ್ಚಿ ಬೀಳಿಸಿದ್ದನ್ನ ಮರೆಯೋಕಾಗುತ್ತಾ.? ಐಪಿಎಲ್ ಅಖಾಡದಲ್ಲಿ ಅಬ್ಬರಿಸಿ ಬೊಬ್ಬಿರಿದ ವೈಭವ್ ಸೂರ್ಯವಂಶಿ 7 ಪಂದ್ಯದಿಂದ 252 ರನ್ಗಳಿಸಿದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿದರು. ದಿಗ್ಗಜ ಬೌಲರ್ಗಳನ್ನ ಚಚ್ಚಿ ಬಿಸಾಕಿ ಐಪಿಎಲ್ ಇತಿಹಾಸದ 2ನೇ ವೇಗದ ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಖಂಡಿತ ಸೂಪರ್ ಸ್ಟಾರ್ ಆಗೋ ಎಲ್ಲಾ ತಾಖತ್ತಿದೆ.
ಇದನ್ನೂ ಓದಿ:ಬ್ಯುಸಿನೆಸ್ ಫೀಲ್ಡ್ಗೆ ಇಳಿದ ಟೀಮ್ ಇಂಡಿಯಾದ ಸ್ಟಾರ್.. ವಿರಾಟ್ ಕೊಹ್ಲಿ ಶಿಷ್ಯ ಹೊಸ ಇನ್ನಿಂಗ್ಸ್!
ಟೆಸ್ಟ್ನಲ್ಲೂ ವೈಭವ್ ಸೂರ್ಯವಂಶಿ ಶತಕ ಸಾಧನೆ.!
ಏಕದಿನ, ಐಪಿಎಲ್ ಅಷ್ಟೇ ಅಲ್ಲ, ಈಗಾಗಲೇ ಟೆಸ್ಟ್ನಲ್ಲೂ ವೈಭವ್ ಸೂರ್ಯವಂಶಿ ಸಾಮರ್ಥ್ಯ ತೋರಿಸಿದ್ದಾರೆ. 2024ರಲ್ಲಿ ಆಸ್ಟ್ರೇಲಿಯಾ ಅಂಡರ್ 19 ತಂಡದ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ನಲ್ಲಿ ಸೂರ್ಯವಂಶಿ ಸೆಂಚುರಿ ಸಿಡಿಸಿದರು. ಈ ಮೂಲಕ ಅಂಡರ್19 ಟೆಸ್ಟ್ನಲ್ಲಿ ಸೆಂಚುರಿ ಬಾರಿಸಿದ ಅತಿ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.
ತನ್ನ ಬ್ಯಾಟಿಂಗ್ನಿಂದಲೇ ವೈಭವ್ ಸೂರ್ಯವಂಶಿ ಭವಿಷ್ಯದ ಸೂಪರ್ ಸ್ಟಾರ್ ಅನ್ನೋ ನಿರೀಕ್ಷೆಯನ್ನ ಕ್ರಿಕೆಟ್ ಲೋಕದಲ್ಲಿ ಹುಟ್ಟು ಹಾಕಿದ್ದಾರೆ. ಅದು ನಿಜವಾಗಬೇಕಂದ್ರೆ, ಇದೇ ಕನ್ಸಿಸ್ಟೆನ್ಸಿಯನ್ನ ವೈಭವ್ ಕಾಯ್ದುಕೊಳ್ಳಬೇಕಿದೆ. ಮುಖ್ಯವಾಗಿ ಚಿಕ್ಕ ವಯಸ್ಸಿಗೆ ಸಿಕ್ಕಿರೋ ಯಶಸ್ಸನ್ನ ಸರಿಯಾಗಿ ಹ್ಯಾಂಡಲ್ ಮಾಡಬೇಕಿದೆ. ಟ್ಯಾಲೆಂಟ್ ಇದ್ದರೂ ಯಶಸ್ಸಿನ ಮದ ಹತ್ತಿಸಿಕೊಂಡು ಕರಿಯರ್ ಹಾಳುಮಾಡಿಕೊಂಡ ಹಲ ಉದಾಹಣೆಗಳು ನಮ್ಮ ಎದುರಿಗಿವೆ ಅಲ್ವಾ.?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ