/newsfirstlive-kannada/media/post_attachments/wp-content/uploads/2024/11/SURYAVANSHI.jpg)
ಮೆಗಾ ಹರಾಜಿನ ಕಣದಲ್ಲಿ ಬರೋಬ್ಬರಿ 574 ಆಟಗಾರರಿದ್ದಾರೆ. ಅವರ ಪೈಕಿ ಈ ಆಟಗಾರನ ಮೇಲೆ ಅಭಿಮಾನಿಗಳ ದೃಷ್ಟಿ ಇದೆ. ಈತ ಎಷ್ಟು ಮೊತ್ತಕ್ಕೆ ಸೇಲ್ ಆಗ್ತಾನೆ ಅನ್ನೋದಕ್ಕಿಂತ ಯಂಗ್ ಪ್ಲೇಯರ್ ಪ್ರತಿಭೆಗೆ ಅವಕಾಶ ನೀಡ್ತಾರಾ ಅನ್ನೋದಾಗಿದೆ?
2025ರ ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಕಣದಲ್ಲಿರುವ 574 ಆಟಗಾರರ ಪೈಕಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸೇಲ್ ಆಗುವ 204 ಪ್ಲೇಯರ್ಸ್ ಯಾರೆಂಬ ಕುತೂಹಲ ಮನೆ ಮಾಡಿದೆ. 574 ಆಟಗಾರರ ಪೈಕಿ ಒಬ್ಬ ಆಟಗಾರ ಬಿಡ್ಡಿಂಗ್ ವಾರ್ನ ಸೆಂಟರ್ ಆಫ್ ಅಟ್ರಾಕ್ಷನ್. ಆತನೇ ವೈಭವ್ ಸೂರ್ಯವಂಶಿ..
13 ವರ್ಷದ 237 ದಿನ
ಹೆಸರು ವೈಭವ್ ಸೂರ್ಯವಂಶಿ. 2011ರ ಮಾರ್ಚ್ 27ರಂದು ಜನಿಸಿದ ಬಿಹಾರ ಮೂಲದ ಈ ಟೀನೇಜ್ ಆಟಗಾರನ ವಯಸ್ಸು ಜಸ್ಟ್ 13 ವರ್ಷ, 237 ದಿನ. ದೇಶಿ ಕ್ರಿಕೆಟ್ನಲ್ಲಿ ಸಖತ್ ಸೌಂಡ್ ಮಾಡಿರುವ ಈತ, ಬಿಡ್ಡಿಂಗ್ನಲ್ಲಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದಾನೆ. ಈ ಟಿನೇಜ್ ಟ್ಯಾಲೇಂಟೆಡ್ ಪ್ಲೇಯರ್ ಯಾವ ಫ್ರಾಂಚೈಸಿಯ ಪಾಲಾಗ್ತಾನೆ ಎಂಬ ಕುತೂಹಲ ಮನೆ ಇದೆ. ಇದಕ್ಕೆ ಕಾರಣ ಭಾರತದ 3ನೇ ಅತಿ ದೊಡ್ಡ ರಾಜ್ಯ ಎಂದು ಕರೆಸಿಕೊಳ್ಳುವ ಬಿಹಾರದವ ಅನ್ನೋದು.
ಇದನ್ನೂ ಓದಿ:ಕಾಂಗರೂ ಬೇಟೆಗೆ ಕೆರಳಿ ನಿಂತ ಕಿಂಗ್ ಕೊಹ್ಲಿ.. ಪರ್ತ್ನಲ್ಲಿ ಯಾವಗಲೂ ವಿರಾಟ್ ಸೂಪರ್ ಸ್ಟಾರ್!
ವಯಸ್ಸು ಚಿಕ್ಕದು.. ಕೀರ್ತಿ ದೊಡ್ಡದು..!
ಬಿಹಾರ ದೇಶದ 3ನೇ ಅತಿ ದೊಡ್ಡ ರಾಜ್ಯ. ಈ ರಾಜ್ಯದಿಂದ ಕ್ರಿಕೆಟ್ಗೆ ಸಿಕ್ಕ ಕೊಡುಗೆ ಕಡಿಮೆ. ಭಾರತದ 3ನೇ ದೊಡ್ಡ ರಾಜ್ಯವಾಗಿದ್ದರೂ, ಟೀಮ್ ಇಂಡಿಯಾ ಪ್ರತಿನಿಧಿಸಿದ ಆಟಗಾರರ ಸಂಖ್ಯೆ ಜಸ್ಟ್ ಒಬ್ಬಂತೇ ಒಬ್ಬತು. ಟೀಮ್ ಇಂಡಿಯಾ ಇರಲಿ, ಐಪಿಎಲ್ನ ಪ್ರತಿನಿಧಿಸಿದ ಆಟಗಾರರ ಹಸರು ಕೂಡ ಇದುವರೆಗೂ ತಿಳಿದಿಲ್ಲ. ಇಂಥ ರಾಜ್ಯದಲ್ಲಿ ಹುಟ್ಟಿದ ಬೆಳೆದ ಈತ 13ನೇ ವರ್ಷಕ್ಕೆ ದೇಶದ ಉದ್ದಗಲಕ್ಕೆ ಕೀರ್ತಿ ಪತಾಕೆ ಹಾರಿಸಿದ್ದಾನೆ.
12 ವರ್ಷಕ್ಕೆ ರಣಜಿಗೆ ಡೆಬ್ಯು
ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗಿರೋ ಈತ, ಪಾರ್ಟ್ ಟೈಮ್ ಸ್ಪಿನ್ನರ್ ಆಗಿಯೂ ಮ್ಯಾಜಿಕ್ ಮಾಡಬಲ್ಲ ಮೇಜಿಶಿಯನ್. ಜೂನಿಯರ್ ಕ್ರಿಕೆಟ್ ಲೆವೆಲ್ನಲ್ಲಿ ಸಖತ್ ಸೌಂಡ್ ಮಾಡಿದ್ದ ಈತ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ, ವಿನೂ ಮಂಕಡ್ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಅರಿಸಿದ್ದಾರೆ. ಇದೇ ರನ್ ವೈಭವವೇ 12 ವರ್ಷ 284 ದಿನಕ್ಕೆ ರಣಜಿ ಕ್ರಿಕೆಟ್ಗೆ ಡೆಬ್ಯೂ ಮಾಡುವಂತೆ ಮಾಡಿತ್ತು.
ತ್ರಿಶತಕದ ವೈಭವ..
2023ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದ ವೈಭವ್, ಬಿಹಾರ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಅಂಡರ್ 19 ಏಕದಿನ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬೆರೆದಿದ್ದರು. ತ್ರಿಶತಕ ಸಿಡಿಸಿದ್ದ ವೈಭವ್, ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈ ಬಳಿಕ ಅಂಡರ್-19 ಇಂಡಿಯಾ ಬಿ, ಇಂಡಿಯಾ ಎ ಪರ ಸ್ಥಾನ ಪಡೆದಿದ್ದ ವೈಭವ್, ಬಾಂಗ್ಲಾ ಅಂಡರ್ 19, ಇಂಗ್ಲೆಂಡ್ ಅಂಡರ್ 19 ವಿರುದ್ಧ ರನ್ ಹೊಳೆ ಹರಿಸಿದ್ರು. ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ 64 ಎಸೆತಗಳಲ್ಲಿ 104 ರನ್ ಸಿಡಿಸಿದ್ದ ಈ ಯಂಗ್ ಬ್ಯಾಟರ್, ಈಗ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್ನಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ vs ಸ್ಟೀವ್ ಸ್ಮಿತ್, ಮ್ಯಾಚ್ ವಿನ್ನರ್ಸ್ ಯಾರು.. ಈ ಇಬ್ಬರ ಬ್ಯಾಟಿಂಗ್ ಹಿಸ್ಟರಿ ಹೇಗಿದೆ?
ವೈಭವ್ಗೆ ತಂದೆ ಸಂಜೀವ್ ಮಾರ್ಗದರ್ಶನ
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು. ಕ್ರಿಕೆಟ್ ಅಭಿಮಾನಿಯಾಗಿದ್ದ ತಂದೆ ಸಂಜೀವ್ ಸೂರ್ಯವಂಶಿ ಜೊತೆ ಕ್ರಿಕೆಟ್ ಆಡುತ್ತಿದ್ದ ವೈಭವ್ಗೆ, ಕ್ರಿಕೆಟ್ನ ಹುಚ್ಚು ಬೆಳೆದಿತ್ತು. ಮಗನ ಉತ್ಸಾಹ ಕಂಡಿದ್ದ ಸಂಜೀವ್, 5ನೇ ವರ್ಷದಲ್ಲೇ ಮನೆ ಬಳಿ ನೆಟ್ಸ್ ತಯಾರಿಸಿ ಅಭ್ಯಾಸ ನಡೆಸುತ್ತಿದ್ದರು. 9ನೇ ವರ್ಷದಲ್ಲಿ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿದ ಕೃಷಿಕ ತಂದೆ, ಮಗನ ಕನಸಿಗೆ ನೀರು ಎರೆದರು. ಪರಿಣಾಮ ದೊಡ್ಡ ಕ್ರಿಕೆಟರ್ ಆಗುವಂತ ಹೆಜ್ಜೆ ಹಾಕಿದ್ದಾನೆ.
ಮಣೆ ಹಾಕ್ತವಾ ಫ್ರಾಂಚೈಸಿಗಳು..?
ಸಿಕ್ಕ ಅವಕಾಶಗಳನ್ನ ವೈಭವ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ ನಿಜ. 13 ವರ್ಷದ ಈತನಿಗೆ ವಯಸ್ಸೇ ಮುಪ್ಪಾಗುತ್ತಾ ಎಂಬ ಅನುಮಾನ ಇದೆ. 13 ವರ್ಷದ ಈ ಯಂಗ್ ಬ್ಯಾಟರ್, ಸ್ಟಾರ್ ಬೌಲರ್ಗಳನ್ನ ಎದುರಿಸುವ ಸಾಮರ್ಥ್ಯ, ಓತ್ತಡದ ನಿಭಾಯಿಸುವ ಕಲೆಗಾರಿಕೆಯ ಜೊತೆಗೆ ಟಿ20 ಕ್ರಿಕೆಟ್ನ ಅನುಭವದ ಕೊರತೆಯೂ ಇದೆ. ಹೀಗಾಗಿ 13 ವರ್ಷದ ಈತನಿಗೆ ಬಿಡ್ ಮಾಡುವುದು ಕಡಿಮೆ. ಭವಿಷ್ಯದ ದೃಷ್ಟಿಯಿಂದ ಈತನ ಬಿಡ್ ಮಾಡಿದ್ರೆ ಆ ತಂಡಕ್ಕೆ ಲಾಭವೂ ಇದೆ ಅನ್ನೋದನ್ನ ಮರೆಯುವಂತಿಲ್ಲ.
ಇದನ್ನೂ ಓದಿ:ಹೊಸ ಕೋಚ್ ನೇಮಿಸಿಕೊಂಡ ಆರ್ಸಿಬಿ; ತಂಡಕ್ಕೆ ಬಂತು ಮತ್ತಷ್ಟು ಶಕ್ತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ