/newsfirstlive-kannada/media/post_attachments/wp-content/uploads/2025/04/Vaibhav_Suryavanshi-1.jpg)
ಗುಜರಾತ್​ ಟೈಟನ್ಸ್​ ತಂಡ ನೀಡಿರುವ 210 ರನ್​ಗಳ ಬಿಗ್ ಟಾರ್ಗೆಟ್​ ಅನ್ನು ರಾಜಸ್ಥಾನ್ ರಾಯಲ್ಸ್​ ಆಟಗಾರರು ಚೇಸ್ ಮಾಡುತ್ತಿದ್ದಾರೆ. ಆರಂಭದಲ್ಲೇ 14 ವರ್ಷದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ.
ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್​ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ್ದ ಗುಜರಾತ್​ ಟೈಟನ್ಸ್​ 210 ರನ್​ಗಳ ಬೃಹತ್​ ಮೊತ್ತದ ರನ್​ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್​ಗೆ ನೀಡಿದೆ.
ಈ ಗುರಿ ಹಿಂದೆ ಬಿದ್ದಿರುವ ರಾಜಸ್ಥಾನ್​ ಓಪನರ್​​ ಆರಂಭದಲ್ಲೇ ಘರ್ಜನೆ ಮಾಡಿದ್ದಾರೆ. ಕೇವಲ 14 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್​​ನಿಂದ ಅರ್ಧಶತಕ ಸಿಡಿಸಿದ್ದಾರೆ. ಕೇವಲ 17 ಬಾಲ್​ಗಳನ್ನು ಎದುರಿಸಿದ ಸೂರ್ಯವಂಶಿ 3 ಬೌಂಡರಿ ಹಾಗೂ 6 ಅತ್ಯದ್ಭುತವಾದ ಸಿಕ್ಸರ್​​ಗಳಿಂದ 51 ರನ್​ಗಳನ್ನು ಬಾರಿಸಿದರು. ಇನ್ನೊಂದು ವಿಶೇಷ ಎಂದರೆ ಒಂದೇ ಓವರ್​ನಲ್ಲಿ ಸೂರ್ಯವಂಶಿ 28 ರನ್​ಗಳನ್ನು ಚಚ್ಚಿದ್ದಾರೆ.
ಪಂದ್ಯದಲ್ಲಿ ಗುಜರಾತ್​ ಪರ ಬೌಲಿಂಗ್ ಮಾಡಲು ಬಂದ ಇಶಾಂತ್ ಶರ್ಮಾ, 14 ವರ್ಷದ ಬ್ಯಾಟರ್​​ನಿಂದ ಭಾರೀ ಮುಖಭಂಗಕ್ಕೆ ಒಳಗಾದರು. ಇಶಾಂತ್​ ಶರ್ಮಾರ ಮೊದಲ ಎರಡು ಬಾಲ್​ಗೆ ಸತತ 2 ಸಿಕ್ಸರ್​ ಬಾರಿಸಿದ ವೈಭವ್ ಸೂರ್ಯವಂಶಿ, 3ನೇ ಬಾಲ್​ ಅನ್ನು ಬೌಂಡರಿಗೆ ಅಟ್ಟಿದರು. 4ನೇ ಬಾಲ್​ ಡಾಟ್ ಆದ್ರೆ, 5 ಬಾಲ್​ಗೆ ಮತ್ತೊಂದು ಮನಮೋಹಕ ಸಿಕ್ಸರ್ ಬಾರಿಸಿದರು. ಇದರ ನಂತರ ಸತತ 2 ವೈಡ್​ ಬಾಲ್ ಹಾಕಿದ ಇಶಾಂತ್ ಶರ್ಮಾ ಕೊನೆಯ ಎಸೆತವನ್ನು ಬೌಂಡರಿ ಬಿಟ್ಟುಕೊಟ್ಟರು. ಇದರಿಂದ ವೈಭವ್ ಒಂದೇ ಓವರ್​ನಲ್ಲಿ 28 ರನ್​ಗಳ ಬಾರಿಸಿದರು.
ಸದ್ಯ ರಾಜಸ್ಥಾನ್ ತಂಡ ಒಂದು ವಿಕೆಟ್​ ಕಳೆದುಕೊಳ್ಳದೇ 114 ರನ್​ಗಳಿಸಿದೆ. ವೈಭವ್ ಸೂರ್ಯವಂಶಿ 64 ರನ್​ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ