ಅಪ್ಪನ ಕನಸು ನನಸು.. ಪುತ್ರ ವೈಭವ್​​ಗೆ ಕ್ರಿಕೆಟ್ ಕಲಿಸಲು ಜಮೀನನ್ನೇ ಮಾರಿದ್ದ ತಂದೆ..!

author-image
Ganesh
Updated On
‘ಅಪ್ಪ ನನಗಾಗಿ ಕೆಲಸ ಬಿಟ್ಟರು, ಅಮ್ಮ ಬರೀ 3 ತಾಸು ನಿದ್ರೆ ಮಾಡ್ತಿದ್ದಳು..’ ವೈಭವ್ ಕಷ್ಟದ ಬದುಕು ಹೇಗಿತ್ತು..?
Advertisment
  • ಕ್ರಿಕೆಟ್​ ಲೋಕದ ನಯಾ ಸೂಪರ್​ ಸ್ಟಾರ್ ವೈಭವ್
  • ಕ್ರಿಕೆಟ್​ ಪ್ರೇಮಿಗಳ ಬಾಯಲ್ಲಿ ವೈಭವ್ ಹೆಸರು
  • ತಂದೆಯ ನಂಬಿಕೆ ಸುಳ್ಳಾಗಲಿಲ್ಲ, ಮಗ ಈಗ ದೊಡ್ಡ ಕ್ರಿಕೆಟರ್

ವೈಭವ್​ ಸೂರ್ಯವಂಶಿ ಸದ್ಯ ಕ್ರಿಕೆಟ್​ ಲೋಕದ ನಯಾ ಸೂಪರ್​ ಸ್ಟಾರ್​​​. ಗೂಗಲ್​ ಸಿಇಒ ಸುಂದರ್​ ಪಿಚ್ಚೈಯಿಂದ ಹಿಡಿದು ಹಳ್ಳಿ ಹಳ್ಳಿಯ ಕ್ರಿಕೆಟ್​ ಪ್ರೇಮಿಗಳ ಬಾಯಲ್ಲಿ ವೈಭವ್ ಹೆಸರು ಓಡಾಡ್ತಿದೆ. ಕ್ರಿಕೆಟ್​ ಲೋಕ ಕಂಡ ಸೂಪರ್​ ಸ್ಟಾರ್​​ಗಳು ಈತನ ಆಟಕ್ಕೆ ಫಿದಾ ಆಗಿದ್ದಾರೆ. ಈ ಪ್ರಸಿದ್ಧಿ, ಸೂಪರ್​ ಸ್ಟಾರ್​ ಪಟ್ಟ ಸಖಾಸುಮ್ಮನೆ ಬಂದಿದ್ದಲ್ಲ. ಕಠಿಣ ಶ್ರಮವಿದೆ, ತಂದೆಯ ತ್ಯಾಗದ ಕಥೆಯಿದೆ. ಇದರ ಪ್ರತಿಫಲವೇ ಈ ಯಶಸ್ಸು..

ಇದನ್ನೂ ಓದಿ: ಶಿಷ್ಯನ ಶತಕ ವೈಭವಕ್ಕೆ ಬೆರಗಾದ ದ್ರಾವಿಡ್​.. ವೀಲ್​​ ಚೇರ್​ನಿಂದ ಎದ್ದು ನಿಂತು ಸಂಭ್ರಮಿಸಿದ ಗುರು – VIDEO

publive-image

ಸುಳ್ಳಾಗಲಿಲ್ಲ ವೈಭವ್​ ತಂದೆಯ ನಂಬಿಕೆ

ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು. ಕ್ರಿಕೆಟ್​ನ ಹುಚ್ಚು ಹತ್ತಿಸಿದ್ದೆ ಅಪ್ಪ ಸಂಜೀವ್​ ಸೂರ್ಯವಂಶಿ. ಆರಂಭದಲ್ಲಿ ತಂದೆಯ ಜೊತೆ ವೈಭವ್​​ ಕ್ರಿಕೆಟ್​ ಆಡುತ್ತಿದ್ರು. ಮಗನ ಉತ್ಸಾಹ ಕಂಡಿದ್ದ ಸಂಜೀವ್, ಆತನಿಗೆ 5ನೇ ವರ್ಷದಲ್ಲೇ ಮನೆ ಬಳಿ ನೆಟ್ಸ್​ ತಯಾರಿಸಿ ಅಭ್ಯಾಸಕ್ಕೆ ನೆರವಾಗಿದ್ರು. ಕೃಷಿಕರಾಗಿದ್ರು ಮಗನ ಕನಸಿಗೆ ನೆರವಾದ ತಂದೆ 9ನೇ ವರ್ಷದಲ್ಲಿ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.

ಇದನ್ನೂ ಓದಿ: ಕಿಂಗ್ ಕೊಹ್ಲಿಗೆ ಶಾಕ್ ಕೊಟ್ಟ ಸಾಯಿ ಸುದರ್ಶನ್, ತೀವ್ರಗೊಂಡ ಪೈಪೋಟಿ..!

publive-image

ಮಗನನ್ನ ಕ್ರಿಕೆಟರ್​ ಮಾಡೋ ಪಣ ತೊಟ್ಟ ತಂದೆ ಹಣದ ಅಡಚಣೆಯಾದಾಗ ಇದ್ದ ಸ್ವಲ್ಪ ಕೃಷಿ ಜಮೀನನ್ನೆ ಮಾರಿದರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್​ ಓಜಾ ಬಳಿ ಕೋಚಿಂಗ್​ಗೆ ಸೇರಿಸಿದರು. ಅಕಾಡೆಮಿ ಸೇರಿದ ಮೊದಲ ದಿನವೇ ತಂದೆಯ ಋಣ ತೀರಿಸೋ ಪಣ ತೊಟ್ಟಿದ್ದ ವೈಭವ್, ಸಿಕ್ಕ ಪ್ರತಿ ಅವಕಾಶದಲ್ಲೂ ಸಾಮರ್ಥ್ಯ ಫ್ರೂವ್ ಮಾಡಿದ್ದರು. ಯಶಸ್ಸಿನ ಪಯಣದಲ್ಲಿ ಸಾಗಿದ್ದ ವೈಭವ್​ ವಿರುದ್ಧ ಏಜ್​ ಫ್ರಾಡ್​ ಆರೋಪವೂ ಕೇಳಿ ಬಂತು. ಈ ವೇಳೆ ಬಿಸಿಸಿಐ ನಿಯಮದಂತೆ ವೈಭವ್​, ಬೋನ್​​​ ಟೆಸ್ಟ್​ಗೆ ಒಳಗಾಗಿ, ತಾನು ತಪ್ಪು ಮಾಡಿಲ್ಲ ಅನ್ನೋದು ಪ್ರೂವ್​ ಮಾಡಿದರು.

ಚಿಕ್ಕ ವಯಸ್ಸಿನಲ್ಲೇ ಯಶಸ್ಸಿನ ಮೆಟ್ಟಿಲು ಹತ್ತುತ್ತಿರುವ ವೈಭವ್​ಗೆ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗ್ತಿದೆ. ಆದ್ರೆ, ಸಕ್ಸಸ್​ನ ಅಮಲು ತಲೆಗೇರಿಸಿಕೊಳ್ಳದೆ ಸರಿಯಾದ ಹಾದಿಯಲ್ಲಿ ವೈಭವ್​​ ಮುನ್ನಡೆಯಲಿ ಅನ್ನೋದು ಕ್ರಿಕೆಟ್ ಅಭಿಮಾನಿಗಳ ಆಶಯ.

ಇದನ್ನೂ ಓದಿ: 6 ವರ್ಷದ ಪುಟ್ಟ ಪೋರ; ಅಂದು IPL ನೋಡಲು ಬಂದಿದ್ದ ವೈಭವ್ ಸೂರ್ಯವಂಶಿ ಫೋಟೋ ವೈರಲ್‌!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment