/newsfirstlive-kannada/media/post_attachments/wp-content/uploads/2025/04/Vaibhav-6.jpg)
ಐಪಿಎಲ್ನ 47ನೇ ಪಂದ್ಯದಲ್ಲಿ ನಿನ್ನೆ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 35 ಬಾಲ್ನಲ್ಲಿ 11 ಸಿಕ್ಸರ್, 7 ಬೌಂಡರಿ ಬಾರಿಸುವುದರ ಜೊತೆಗೆ ಸ್ಫೋಟಕ ಶತಕ ಬಾರಿಸಿ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: ಶಿಷ್ಯನ ಶತಕ ವೈಭವಕ್ಕೆ ಬೆರಗಾದ ದ್ರಾವಿಡ್.. ವೀಲ್ ಚೇರ್ನಿಂದ ಎದ್ದು ನಿಂತು ಸಂಭ್ರಮಿಸಿದ ಗುರು – VIDEO
ಬೆನ್ನಲ್ಲೇ ತಮ್ಮ ಯಶಸ್ಸಿನ ಕ್ರೆಡಿಟ್ ಅನ್ನು ಹೆತ್ತವರಿಗೆ ಕೊಟ್ಟಿದ್ದಾರೆ. ಪಂದ್ಯ ಮುಗಿದ ಬಳಿಕ ವಿಶೇಷ ಸಂದರ್ಶನದಲ್ಲಿ ತಾನು ಪಟ್ಟಿರುವ ಕಷ್ಟಗಳ ಬಗ್ಗೆ ವೈಭವ್ ಸೂರ್ಯವಂಶಿ ನೆನಪಿಸಿಕೊಂಡಿದ್ದಾರೆ. ಈ ವೇಳೆ ತನಗಾಗಿ ತಂದೆ, ತಾಯಿ ಮಾಡಿರುವ ತ್ಯಾಗದ ಕುರಿತು ವಿವರಿಸಿದ್ದಾರೆ.
ಅಪ್ಪ ಕೆಲಸ ಬಿಟ್ಟರು..
ಇವತ್ತು ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನನ್ನ ಅಪ್ಪ-ಅಮ್ಮ. ನಾನು ಅವರಿಗೆ ಋಣಿ ಆಗಿರುತ್ತೇನೆ. ನನಗಾಗಿ ಅಮ್ಮ ನಿತ್ಯವೂ ಬೇಗ ಎಳುತ್ತಿದ್ದಳು. ಆಕೆ, ನನಗಾಗಿ ಬೇಗ ಎದ್ದು ಅಡುಗೆ ಮಾಡುತ್ತಿದ್ದಳು. ಅಮ್ಮ ಕೊಟ್ಟ ಬುತ್ತಿಯನ್ನು ತೆಗೆದುಕೊಂಡು ಪ್ರ್ಯಾಕ್ಟೀಸ್ಗೆ ಹೋಗುತ್ತಿದ್ದೆ. ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ, ನನ್ನಮ್ಮ ರಾತ್ರಿ ಮಲಗುತ್ತಿರೋದು ಕೇವಲ ಮೂರು ಗಂಟೆ ಮಾತ್ರ!
ನನಗಾಗಿ ಅಪ್ಪ ಕೆಲಸ ಬಿಟ್ಟರು. ಈಗ ಅಪ್ಪನ ಜವಾಬ್ದಾರಿಯನ್ನು ಅಣ್ಣ ತೆಗೆದುಕೊಂಡಿದ್ದಾನೆ. ನಾವು ಇಂದಿಗೂ ಕಷ್ಟ ಪಡುತ್ತಿದ್ದೇವೆ. ನನ್ನಪ್ಪ, ನನ್ನ ಬೆನ್ನು ಹಿಂದೆ ಇದ್ದಾರೆ. ಅಪ್ಪನ ಶಕ್ತಿಯೇ ಈ ಸಾಧನೆಗೆ ದಾರಿ. ಇವತ್ತು ಏನು ಫಲ ಸಿಕ್ಕಿದೆಯೋ ಅದರ ಹಿಂದಿನ ಶ್ರಮ ನನ್ನ ಹೆತ್ತವರದ್ದು- ವೈಭವ್ ಸೂರ್ಯವಂಶಿ, ರಾಜಸ್ಥಾನ್ ರಾಯಲ್ಸ್ ಆಟಗಾರ
ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 8 ವಿಕೆಟ್ಗಳಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್, 4 ವಿಕೆಟ್ ಕಳೆದುಕೊಂಡು 209 ರನ್ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 2 ವಿಕೆಟ್ ಕಳೆದುಕೊಂಡು 212 ರನ್ಗಳಿಸಿತ್ತು. ಗುಜರಾತ್ ಟೈಟನ್ಸ್ ಪರ ಗಿಲ್ 84, ಬಟ್ಲರ್ 50, ಸಾಯಿ ಸುದರ್ಶನ್ 39 ರನ್ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್, 40 ಬಾಲ್ನಲ್ಲಿ 70 ರನ್ಗಳಿಸಿದ್ರೆ, ರಿಯಾನ್ ಪರಾಗ್, 15 ಬಾಲ್ನಲ್ಲಿ 32 ರನ್ಗಳಿಸಿದರು.
ಇದನ್ನೂ ಓದಿ: ವೈಭವ್ಗೆ ದಾರಿ ತೋರಿಸಿದ ಸಾಹುಕಾರ ಇವರೇ.. ನೆಟ್ಸ್ನಲ್ಲಿ ದ್ರಾವಿಡ್ ನೀಡ್ತಿದ್ದ ಟಾರ್ಗೆಟ್ ಏನಾಗಿತ್ತು..?
𝙏𝙖𝙡𝙚𝙣𝙩 𝙢𝙚𝙚𝙩𝙨 𝙊𝙥𝙥𝙤𝙧𝙩𝙪𝙣𝙞𝙩𝙮 🤗
He announced his arrival to the big stage in grand fashion 💯
It’s time to hear from the 14-year old 𝗩𝗮𝗶𝗯𝗵𝗮𝘃 𝗦𝘂𝗿𝘆𝗮𝘃𝗮𝗻𝘀𝗵𝗶 ✨
Full Interview 🎥🔽 -By @mihirlee_58 | #TATAIPL | #RRvGThttps://t.co/x6WWoPu3u5pic.twitter.com/8lFXBm70U2— IndianPremierLeague (@IPL) April 29, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ