Advertisment

ಮತ್ತೆ ಸಿಡಿದ ವೈಭವ್​ ಸೂರ್ಯವಂಶಿ.. ಬೆಂಗಳೂರಲ್ಲಿ 190 ರನ್​ ಚಚ್ಚಿದ ಯಂಗ್ ಬ್ಯಾಟರ್​​!

author-image
Bheemappa
Updated On
ವೈಭವ್ ಸೂರ್ಯವಂಶಿಗೆ ಭಾರತ ತಂಡದಲ್ಲಿ ಸ್ಥಾನ ಇಲ್ವಾ.. ಇನ್ನು ಎಷ್ಟು ವರ್ಷ ಕಾಯಬೇಕು?
Advertisment
  • ಅಂಡರ್​- 19 ತಂಡಕ್ಕೆ ಆಯ್ಕೆ ಆಗಿರುವ ವೈಭವ್​ ಸೂರ್ಯವಂಶಿ
  • ಐಪಿಎಲ್​ನಲ್ಲಿ ಕಡಿಮೆ ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದ ವೈಭವ್
  • ವೈಭವ್​ ಸೂರ್ಯವಂಶಿ ಎಷ್ಟು ಎಸೆತಗಳಲ್ಲಿ 190 ರನ್​ ಬಾರಿಸಿದರು?

ಐಪಿಎಲ್​ನಲ್ಲಿ ಅಬ್ಬರಿಸಿದ್ದ ಬೆನ್ನಲ್ಲೇ 14 ವರ್ಷದ ಯಂಗ್ ಬ್ಯಾಟರ್​ ವೈಭವ್​ ಸೂರ್ಯವಂಶಿಗೆ ಭಾರತದ ಅಂಡರ್​-19 ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಈ ಅಂಡರ್-19 ತಂಡದ ಅಭ್ಯಾಸ ಪಂದ್ಯದಲ್ಲಿ ವೈಭವ್​ ಸೂರ್ಯವಂಶಿ ಅಕ್ಷರಶಃ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ.

Advertisment

ಆಯುಷ್ ಮ್ಹಾತ್ರೆ ನಾಯಕತ್ವದಲ್ಲಿ ಭಾರತದ ಅಂಡರ್​-19 ತಂಡ ಬೆಂಗಳೂರಿನಲ್ಲಿ ಭರ್ಜರಿ ಅಭ್ಯಾಸ ಮಾಡಿದೆ. ಇಂಗ್ಲೆಂಡ್​ ಟೂರ್​ಗೂ ಮೊದಲೇ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಭಾರತದ ಅಂಡರ್ -19 ತಂಡದ ಅಭ್ಯಾಸ ಪಂದ್ಯದಲ್ಲಿ ವೈಭವ್​ ಸೂರ್ಯವಂಶಿ ಮತ್ತೊಮ್ಮೆ ಬ್ಯಾಟಿಂಗ್​​ನಲ್ಲಿ ಪರಾಕ್ರಮ ಮೆರೆದಿದ್ದಾರೆ.

ಕೇವಲ 90 ಎಸೆತಗಳಲ್ಲಿ 190 ರನ್​ಗಳನ್ನು ಬಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈಭವ್​ ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್​ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಿಗ್ ಶಾಟ್ ಬಾರಿಸಿರುವ ವೈಭವ್​ ಸೂರ್ಯವಂಶಿ ಚೆಂಡು ಸಿಕ್ಸರ್ ಹೋಗಿದ್ದರಿಂದ ಕ್ರೀಸ್​ನಲ್ಲಿ ನಡೆದು ಹೋಗುತ್ತಿದ್ದಾರೆ. ​

ಇದನ್ನೂ ಓದಿ: ಹೃದಯಾಘಾತ; ಮತ್ತೊಬ್ಬ ಯುವಕ ನಿಧನ.. ಹಾಸನದಲ್ಲಿ ಹಾರ್ಟ್​ ಅಟ್ಯಾಕ್​ನಿಂದ 5ನೇ ಬಲಿ

Advertisment

publive-image

2025ರ ಐಪಿಎಲ್​ನಲ್ಲಿ ರಾಜಸ್ಥಾನ್ ತಂಡದ​ ಓಪನರ್ಸ್ ಆಗಿದ್ದ​ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಗುಜರಾತ್​ ಬೌಲರ್​ಗಳಿಗೆ ಬೆವರಿಳಿಸಿದ್ದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ 100 ರನ್ ಚಚ್ಚಿದರು. ಇದರಲ್ಲಿ 7 ಬೌಂಡರಿ ಹಾಗೂ​ ಆಕಾಶದೆತ್ತರದ 11 ಸಿಕ್ಸರ್​ಗಳು ಸೇರಿದ್ದವು. ಐಪಿಎಲ್​ ಇತಿಹಾಸದಲ್ಲೇ ಸೂರ್ಯವಂಶಿ ಹೊಸದೊಂದು ಮೈಲಿಗಲ್ಲಿಗೆ ಕಾರಣರಾಗಿದ್ದರು.

ಭಾರತದ U-19 ತಂಡ
ಆಯುಷ್ ಮ್ಹಾತ್ರೆ (ನಾಯಕ), ಅಭಿಜ್ಞಾನ್ ಕುಂಡು (ಉಪನಾಯಕ ಮತ್ತು ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಮೌಲ್ಯರಾಜ್‌ಸಿನ್ಹ್ ಚಾವ್ಡಾ, ಹರ್ವಾಂಶ್ ಸಿಂಗ್ (ವಿಕೆಟ್ ಕೀಪರ್), ವಿಹಾನ್ ಮಲ್ಹೋತ್ರ, ರಾಹುಲ್ ಕುಮಾರ್, ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ಮೊಹಮ್ಮದ್ ಎನಾನ್, ಯುಧಾಜಿತ್ ಗುಹಾ, ಅನ್ಮೋಲ್‌ಜೀತ್ ಸಿಂಗ್, ಪ್ರಣವ್ ರಾಘವೇಂದ್ರ, ಆದಿತ್ಯ ರಾಣಾ.

Advertisment


">June 10, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment