/newsfirstlive-kannada/media/post_attachments/wp-content/uploads/2025/04/Vaibhav_Suryavanshi_Yashasvi.jpg)
ಯಂಗ್ ಆ್ಯಂಡ್ ಎನರ್ಜಿಟಿಕ್ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ನಿಂದ ಗುಜರಾತ್ ವಿರುದ್ಧ ರಾಜಸ್ಥಾನ ರಾಯಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಓಪನರ್ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅತ್ಯಮೂಲ್ಯವಾದ ಸೆಂಚುರಿ ಬಾರಿಸುವ ಮೂಲಕ ಆರ್ಆರ್ ಸುಲಭ ಜಯಗಳಿಸಿದೆ. ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಪ್ಲೇಯರ್ ಒಬ್ಬರು ಶತಕ ಬಾರಿಸಿರುವುದು ದಾಖಲೆ ಪಟ್ಟಿಗೆ ಸೇರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟನ್ಸ್, ಓಪನರ್ ಶುಭ್ಮನ್ ಗಿಲ್ ಮತ್ತು ಜೋಶ್ ಬಟ್ಲರ್ ಅವರ ಅಮೋಘ ಅರ್ಧಶತಕದಿಂದ 210 ರನ್ಗಳ ಬೃಹತ್ ಮೊತ್ತದ ರನ್ಗಳ ಗುರಿಯನ್ನು ನೀಡಿತ್ತು. ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಗಿಲ್, ಕೇವಲ 50 ಬಾಲ್ಗಳಲ್ಲಿ 5 ಬೌಂಡರಿ ಹಾಗೂ 4 ಬಿಗ್ ಸಿಕ್ಸರ್ನಿಂದ 84 ರನ್ ಗಳಿಸಿ ಕ್ಯಾಚ್ ಔಟ್ ಆಗಿದ್ದರು. ಇದರಿಂದ 210 ರನ್ಗಳ ಗುರಿ ಇತ್ತು.
ಈ ಟಾರ್ಗೆಟ್ ಹಿಂದೆ ಬಿದ್ದಿದ್ದ ರಾಜಸ್ಥಾನ್ ಓಪನರ್ಸ್ ಇಬ್ಬರು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಗುಜರಾತ್ ಬೌಲರ್ಗಳನ್ನು ಹೇಗೆಂದರೆ ಹಾಗೇ ಚಚ್ಚಿದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ 100 ರನ್ ಚಚ್ಚಿದರು. 7 ಬೌಂಡರಿ ಹಾಗೂ ಮನಮೋಹಕವಾದ ಆಕಾಶದೆತ್ತರದ 11 ಸಿಕ್ಸರ್ಗಳು ಇದರಲ್ಲಿ ಸೇರಿವೆ. ಐಪಿಎಲ್ ಇತಿಹಾಸದಲ್ಲೇ ಸೂರ್ಯವಂಶಿ ಹೊಸದೊಂದು ಮೈಲಿಗಲ್ಲಿಗೆ ಕಾರಣರಾದರು ಎನ್ನಬಹುದು.
ಇದನ್ನೂ ಓದಿ:11 ಸಿಕ್ಸರ್ಗಳು.. ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ
ಓಪನರ್ ಆಗಿ ಕ್ರೀಸ್ಗೆ ಬಂದು ತಂಡ ಗೆಲ್ಲುವವರೆಗೂ ಕ್ರೀಸ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ಈ ಪಂದ್ಯದಲ್ಲಿ ಒಟ್ಟು 40 ಬಾಲ್ಗಳನ್ನು ಎದುರಿಸಿದ ಯುವ ಬ್ಯಾಟ್ಸ್ಮನ್ 9 ಬೌಂಡರಿ, 2 ಸಿಕ್ಸರ್ಗಳಿಂದ 70 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಇನ್ನು ನಾಯಕ ರಿಯಾನ್ ಪರಾಗ್ ಔಟ್ ಆಗದೇ 15 ಎಸೆತದಲ್ಲಿ 2 ಫೋರ್, 2 ಸಿಕ್ಸರ್ನಿಂದ 32 ರನ್ ಗಳಿಸಿದರು. ಇದರಿಂದ ರಾಜಸ್ಥಾನ್ ಕೇವಲ 15.5 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸುವ ಮೂಲಕ ವಿಜಯಶಾಲಿ ಆಯಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ