/newsfirstlive-kannada/media/post_attachments/wp-content/uploads/2025/04/Vaibhav_Suryavanshi_100.jpg)
ಗುಜರಾತ್ ಟೈಟನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಭರ್ಜರಿಯಾದ ಸೆಂಚುರಿ ಸಿಡಿಸಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಸೆಂಚುರಿ ಬಾರಿಸಿದ್ದಾರೆ. ಅತಿ ಕಿರಿಯ ವಯಸ್ಸಿನ ಪ್ಲೇಯರ್ ಒಬ್ಬರು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು ಬಾರಿಗೆ ಶತಕ ಬಾರಿಸಿರುವುದು ದಾಖಲೆ ಆಗಿದೆ.
ಇದನ್ನೂ ಓದಿ:ಒಂದೇ ಓವರ್, 28 ರನ್ ಸಿಡಿಸಿದ ವೈಭವ್ ಸೂರ್ಯವಂಶಿ.. ಅತಿ ವೇಗದ ಅರ್ಧಶತಕ ಬಾರಿಸಿದ 14 ವರ್ಷದ ಬಾಲಕ
ಗುಜರಾತ್ ಬೌಲರ್ಗಳನ್ನು ಹೇಗೆಂದರೆ ಹಾಗೇ ಚಚ್ಚಿದ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ನೂರು ರನ್ಗಳನ್ನು ಗಳಿಸಿದರು. ಇದರಲ್ಲಿ 7 ಬೌಂಡರಿ ಹಾಗೂ ಮನಮೋಹಕವಾದ ಆಕಾಶದೆತ್ತರದ 11 ಸಿಕ್ಸರ್ಗಳು ಸೇರಿವೆ. ಇನ್ನೊಂದು ವಿಶೇಷ ಎಂದರೆ ಅನುಭವಿ ಬೌಲರ್ ಆಗಿದ್ದ ಇಶಾಂತ್ ಶರ್ಮಾ ಅವರ ಒಂದು ಓವರ್ನಲ್ಲಿ 28 ರನ್ ಚಚ್ಚಿದ್ರೆ, ಕರಿಮ್ ಜನತ್ ಅವರ ಓವರ್ನಲ್ಲಿ 30 ರನ್ಗಳನ್ನು ವೈಭವ್ ಸೂರ್ಯವಂಶಿ ಬಾರಿಸಿದ್ದು ಅಭಿಮಾನಿಗಳನ್ನು ರಂಜಿಸಿತು.
ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಜೋಶ್ ಬಟ್ಲರ್ ಹಾಗೂ ಅಭಿಷೇಕ್ ಶರ್ಮಾ ಅವರು 35 ಎಸೆತಗಳಲ್ಲೇ ಸೆಂಚುರಿ ಬಾರಿಸಿದ್ದರು. ಸದ್ಯ ಈ ಪಟ್ಟಿಗೆ ಇದೀಗ 14 ವರ್ಷದ ಬ್ಯಾಟರ್ ಸೇರಿಕೊಂಡಿದ್ದಾರೆ. ಭಾರತದ ಆಟಗಾರನೊಬ್ಬ ಅತಿ ವೇಗದ ಶತಕ ಬಾರಿಸಿದ ಖ್ಯಾತಿಯನ್ನು ಸೂರ್ಯವಂಶಿ ಈಗ ಪಡೆದುಕೊಂಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರು ಐಪಿಎಲ್ ಇತಿಹಾಸದಲ್ಲಿ ಕೇವಲ 30 ಬಾಲ್ಗಳಿಗೆ ಶತಕ ಬಾರಿಸಿರುವುದು ಇದುವರೆಗೂ ದಾಖಲೆಯಾಗಿಯೇ ಉಳಿದಿದೆ. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಬ್ಯಾಟ್ ಬೀಸಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧ ಅತಿ ವೇಗದ ಶತಕ ಗಳಿಸಿದ್ದರು. ಇದನ್ನೂ ಈವರೆಗೂ ಯಾರೂ ಕೂಡ ಬ್ರೇಕ್ ಮಾಡಿಲ್ಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ