/newsfirstlive-kannada/media/post_attachments/wp-content/uploads/2025/04/VAIBHAV-2.jpg)
ವಯಸ್ಸು ಕೇವಲ 14 ವರ್ಷ, 32 ದಿನ ಮಾತ್ರ. ಮಾಡಿರೋ ಸಾಧನೆ ಜಗತ್ತೆ ತಿರುಗಿನೋಡುವಂತದ್ದು. ಜಗತ್ತಿನ ಯಾವೊಬ್ಬ ಕೂಡ ಇಂತಹ ಒಂದು ಇನ್ನಿಂಗ್ಸ್​ ಅನ್ನ ಕನಿಷ್ಟ ಕನಸಿನಲ್ಲೂ ಉಹಿಸಿರೋಕೆ ಸಾದ್ಯವಿಲ್ಲ. ಪಿಂಕ್​ ಸಿಟಿ ಜೈಪುರದಲ್ಲಿ ದಿಗ್ಗಜ ಬೌಲರ್​​ಗಳನ್ನ ಬೆಂಡೆತ್ತಿ ಸಿಕ್ಸರ್​​ ಸುರಿಮಳೆ ಸುರಿಸಿದ ಈ ಬಾಲಕ ಐಪಿಎಲ್​ನಲ್ಲಿ ಎಲ್ಲವೂ ಸಾಧ್ಯ ಅನ್ನೋದನ್ನ ತೋರಿಸಿಕೊಟ್ಟಿದ್ದಾನೆ. ಆತ ಬೇರೆ ಯಾರೂ ಅಲ್ಲ, ಅವನೇ ವೈಭವ್ ಸೂರ್ಯವಂಶಿ.
/newsfirstlive-kannada/media/post_attachments/wp-content/uploads/2025/04/Vaibhav_Suryavanshi_Yashasvi-1.jpg)
ಕೇವಲ 35 ಬಾಲ್​ನಲ್ಲಿ ಶತಕ ಬಾರಿಸಿದ ವೈಭವ್, ಗುಜರಾತ್ ಟೈಟನ್ಸ್ ವಿರುದ್ಧ ಭರ್ಜರಿ ಗೆಲುವು ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸೂರ್ಯವಂಶಿ, ನಂಗೆ ತುಂಬಾನೇ ಖುಷಿ ಆಗ್ತಿದೆ. ಐಪಿಎಲ್​ನಲ್ಲಿ ನನ್ನ ಮೊದಲ ಶತಕ ಮತ್ತು ಮೂರನೇ ಇನ್ನಿಂಗ್ಸ್. ಟೂರ್ನಮೆಂಟ್‌ಗೆ ಮುನ್ನ ಮಾಡಿದ ಪ್ರ್ಯಾಕ್ಟೀಸ್​​ನ ಫಲಿತಾಂಶ ಇಲ್ಲಿ ತೋರಿಸಲಾಗಿದೆ. ನಾನು ಚೆಂಡನ್ನು ನೋಡುತ್ತೇನೆ ಮತ್ತು ಆಡುತ್ತೇನೆ. ಜೈಸ್ವಾಲ್ ಜೊತೆ ಬ್ಯಾಟಿಂಗ್​ ಮಾಡುವಾಗ ಒಳ್ಳೆಯ ಅನುಭವ ಸಿಗುತ್ತೆ. ಅವರು ನನಗೆ ಏನು ಮಾಡಬೇಕೆಂದು ಹೇಳುತ್ತಾರೆ. ಅವರು ಸಕಾರಾತ್ಮಕ ವಿಷಯಗಳನ್ನು ಮಾತ್ರ ತುಂಬುತ್ತಾರೆ. ಐಪಿಎಲ್‌ನಲ್ಲಿ 100 ರನ್ ಗಳಿಸುವುದು ನನ್ನ ಕನಸಾಗಿತ್ತು. ಇಂದು ನನಸಾಗಿದೆ. ನನಗೆ ಯಾವುದೇ ಭಯವಿಲ್ಲ. ನಾನು ಹೆಚ್ಚು ಯೋಚಿಸಲ್ಲ, ಆಟದತ್ತ ಗಮನ ಹರಿಸುತ್ತೇನೆ ಅನ್ನೋ ಮೂಲಕ ಶತಕದ ಹಿಂದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/04/Vaibhav_Suryavanshi_Yashasvi_Jaiswal.jpg)
ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್, 4 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿತ್ತು. ಈ ಗುರಿ ಬೆನ್ನು ಹತ್ತಿದ್ದ ರಾಜಸ್ಥಾನ್ ರಾಯಲ್ಸ್, 2 ವಿಕೆಟ್ ಕಳೆದುಕೊಂಡು 212 ರನ್​ಗಳಿಸಿತ್ತು. ಗುಜರಾತ್ ಟೈಟನ್ಸ್​ ಪರ ಗಿಲ್ 84, ಬಟ್ಲರ್ 50, ಸಾಯಿ ಸುದರ್ಶನ್ 39 ರನ್​ಗಳಿಸಿದರು. ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್, 40 ಬಾಲ್​ನಲ್ಲಿ 70 ರನ್​ಗಳಿಸಿದ್ರೆ, ರಿಯಾನ್ ಪರಾಗ್, 15 ಬಾಲ್​ನಲ್ಲಿ 32 ರನ್​ಗಳಿಸಿದರು.
ಇದನ್ನೂ ಓದಿ: 14 ವರ್ಷ 32 ದಿನದ ಪೋರ.. ವೈಭವ್ ಸೂರ್ಯವಂಶಿ ಸ್ಟ್ರೈಕ್​ರೇಟ್​ ಎಷ್ಟಿತ್ತು..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us