/newsfirstlive-kannada/media/post_attachments/wp-content/uploads/2025/04/Vaibhav_Suryavanshi_100.jpg)
ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕದಿಂದ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಅಂತಿಮ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 6 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಗೆಲುವಿನೊಂದಿಗೆ ರಾಜಸ್ಥಾನ ತಂಡ, ಸೀಸನ್ 18ಕ್ಕೆ ವಿದಾಯ ಹೇಳಿದೆ. ಇನ್ನು ಪಂದ್ಯ ಮುಗಿದ ಮೇಲೆ ವೈಭವ್ ಸೂರ್ಯವಂಶಿ ಎಲ್ಲರ ಹೃದಯ ಗೆದ್ದಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸಿಎಸ್‌ಕೆ ಹಾಗೂ ಆರ್‌ಆರ್ ನಡುವಿನ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘನ ಮಾಡಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ವೈಭವ್ ಸೂರ್ಯವಂಶಿ, ಸಿಎಸ್‌ಕೆ ನಾಯಕ ಎಂಎಸ್ ಧೋನಿಯ ಬಳಿಗೆ ಹೋದ ತಕ್ಷಣ, ಅವರಿಗೆ ಹಸ್ತಲಾಘನ ನೀಡಲಿಲ್ಲ. ಬದಲಿಗೆ ಮೊದಲು ಧೋನಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ವೈಭವ್ ಅವರ ಈ ನಡೆಯನ್ನು ನೋಡಿದ ಧೋನಿ, ಯುವ ಆಟಗಾರನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಇದನ್ನೂ ಓದಿ:ಮಂತ್ರಾಲಯ ಹುಂಡಿ ಎಣಿಕೆ; ಕೇವಲ 20 ದಿನದಲ್ಲಿ ಹರಿದು ಬಂದ ಕೋಟಿ ಕೋಟಿ ಹಣ, ಚಿನ್ನ, ಬೆಳ್ಳಿ
ಸದ್ಯ ಸೂರ್ಯವಂಶಿ ಅವರ ಸರಳತೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿವೆ. ಇನ್ನು ಕೊನೆ ಪಂದ್ಯದಲ್ಲಿ ರಾಜಸ್ಥಾನ್ ಟಾಸ್ ಗೆಲ್ಲುವುದರ ಜೊತೆ ಪಂದ್ಯವನ್ನು ವಶಕ್ಕೆ ಪಡೆಯಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ್ದ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 188 ರನ್ಗಳ ಗುರಿ ನೀಡಿತ್ತು.
ಚೆನ್ನೈ ತಂಡದಲ್ಲಿ ಯುವ ಬ್ಯಾಟರ್ ಆಯುಷ್ ಅವರ 43 ರನ್ ಬಿಟ್ಟರೇ ಉಳಿದ ಯಾವ ಬ್ಯಾಟ್ಸ್ಮನ್ ಕೂಡ ಈ ಗಡಿಯನ್ನು ದಾಟಲಿಲ್ಲ. ಇದರಿಂದ ಚೆನ್ನೈನ ಬ್ಯಾಟಿಂಗ್ ವೈಫಲ್ಯ ಗೊತ್ತಾಗುತ್ತದೆ. ಇನ್ನು ಈ ಗುರಿ ಬೆನ್ನಟ್ಟಿದ ರಾಜಸ್ಥಾನ ಒಳ್ಳೆಯ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ನಿಂದ 17.4 ಓವರ್ಗಳಲ್ಲಿ 188 ರನ್ಗಳಿಸಿ ವಿಜಯ ಪತಾಕೆ ಹಾರಿಸಿತು. ರಾಜಸ್ಥಾನ ರಾಯಲ್ಸ್ ಈ ಸೀಸನ್ನಲ್ಲಿ ಯುವ ಆಟಗಾರ ಸೂರ್ಯವಂಶಿಯನ್ನು ಪರಿಚಯಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ