/newsfirstlive-kannada/media/post_attachments/wp-content/uploads/2025/04/Vaibhav-Suryavanshi-2.jpg)
ಐಪಿಎಲ್‌ನಲ್ಲಿ ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಇವತ್ತು ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇವನ ಆಕ್ರಮಣಾಕಾರಿ ಬ್ಯಾಟಿಂಗ್, ಬೌಂಡರಿ, ಸಿಕ್ಸರ್ ಶೈಲಿಗೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೆಂಚುರಿ ಸಂಭ್ರಮದ ಬಳಿಕ ಯಂಗ್ ಗನ್ ವೈಭವ್ ಸೂರ್ಯವಂಶಿ ಅವರು ಮೊದಲು ತನ್ನ ತಂದೆಗೆ ಕರೆ ಮಾಡಿದ್ದಾರೆ. ನೀವು ಮೊದಲಿಗೆ ಯಾರಿಗೆ ಕರೆ ಮಾಡುತ್ತೀರಿ ಅಂತ ಕೇಳಿದಾಗ ವೈಭವ್, ನಾನು ನನ್ನ ಅಪ್ಪನಿಗೆ ಮೊದಲ ಕಾಲ್ ಮಾಡುತ್ತೇನೆ ಎಂದು ಡಯಲ್ ಮಾಡಿದ್ದಾರೆ.
ಇದನ್ನೂ ಓದಿ: ಅಪ್ಪನ ಕನಸು ನನಸು.. ಪುತ್ರ ವೈಭವ್ಗೆ ಕ್ರಿಕೆಟ್ ಕಲಿಸಲು ಜಮೀನನ್ನೇ ಮಾರಿದ್ದ ತಂದೆ..!
ವೈಭವ್ ಸೂರ್ಯವಂಶಿ ಕಾಲ್ ಅನ್ನ ಅವರ ತಂದೆ ರಿಸೀವ್ ಮಾಡಿದ ತಕ್ಷಣ ಪಪ್ಪಾ ಪ್ರಣಾಮ್ ಎಂದಿದ್ದಾರೆ. ಮಗನ ಈ ಖುಷಿಯ ಮಾತು ಕೇಳಿ ಅವರ ತಂದೆ ಕೂಡ ತುಂಬಾ ಖುಷಿಯಾಗಿದ್ದಾರೆ. ಬಹಳ ಹೆಮ್ಮೆಯಿಂದಲೇ ತಂದೆಗೆ ವೈಭವ್ ಪ್ರೀತಿಯಿಂದಲೇ ಪ್ರಣಾಮಗಳನ್ನು ತಿಳಿಸಿದ್ದಾರೆ.
ವೈಭವ್ ತಂದೆ ಏನಂದ್ರು?
ಮಗನ ಮಾತಿಗೆ ಪುಳಕಿತರಾದ ವೈಭವ್ ತಂದೆ ನನ್ನ ಮಗನ ಸಾಧನೆ ಈಗಲೂ ನನಗೆ ಕನಸು ಕಂಡಂತೆ ಆಗಿದೆ. ನಾನು ಇನ್ನೂ ಆ ಕನಸಿನಲ್ಲೇ ಇದ್ದೇನೆ. ನಾನು ಕಂಡ ಕನಸನ್ನು ನನಸು ಮಾಡಿದ್ದಾನೆ. ನನ್ನ ಫೋನ್‌ಗೆ ಒಂದೇ ಸಮನೆ ಕಾಲ್‌ಗಳು ಬರುತ್ತಾ ಇವೆ. ನಮ್ಮ ಮನೆಯ ಎಲ್ಲರ ಫೋನ್‌ಗಳು ಬ್ಯುಸಿಯಾಗಿವೆ ಎಂದಿದ್ದಾರೆ.
Sanskaar 🙏💗 pic.twitter.com/gybySEUQDO
— Rajasthan Royals (@rajasthanroyals)
Sanskaar 🙏💗 pic.twitter.com/gybySEUQDO
— Rajasthan Royals (@rajasthanroyals) April 29, 2025
">April 29, 2025
ಸುಳ್ಳಾಗಲಿಲ್ಲ ವೈಭವ್ ತಂದೆಯ ನಂಬಿಕೆ
ವೈಭವ್ ಸೂರ್ಯವಂಶಿಗೆ ಅಪ್ಪನೇ ಮೊದಲ ಗುರು. ಕ್ರಿಕೆಟ್‌ನ ಹುಚ್ಚು ಹತ್ತಿಸಿದ್ದೆ ಅಪ್ಪ ಸಂಜೀವ್ ಸೂರ್ಯವಂಶಿ. ಆರಂಭದಲ್ಲಿ ತಂದೆಯ ಜೊತೆ ವೈಭವ್ ಕ್ರಿಕೆಟ್ ಆಡುತ್ತಿದ್ರು. ಮಗನ ಉತ್ಸಾಹ ಕಂಡಿದ್ದ ಸಂಜೀವ್, ಆತನಿಗೆ 5ನೇ ವರ್ಷದಲ್ಲೇ ಮನೆ ಬಳಿ ನೆಟ್ಸ್ ತಯಾರಿಸಿ ಅಭ್ಯಾಸಕ್ಕೆ ನೆರವಾಗಿದ್ರು. ಕೃಷಿಕರಾಗಿದ್ರು ಮಗನ ಕನಸಿಗೆ ನೆರವಾದ ತಂದೆ 9ನೇ ವರ್ಷದಲ್ಲಿ ಸಮೀಪದ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು.
ಮಗನನ್ನ ಕ್ರಿಕೆಟರ್ ಮಾಡೋ ಪಣ ತೊಟ್ಟ ತಂದೆ ಹಣದ ಅಡಚಣೆಯಾದಾಗ ಇದ್ದ ಸ್ವಲ್ಪ ಕೃಷಿ ಜಮೀನನ್ನೆ ಮಾರಿದರು. ಬಿಹಾರದ ಮಾಜಿ ಕ್ರಿಕೆಟಿಗ ಮನೀಷ್ ಓಜಾ ಬಳಿ ಕೋಚಿಂಗ್ಗೆ ಸೇರಿಸಿದರು. ಅಕಾಡೆಮಿ ಸೇರಿದ ಮೊದಲ ದಿನವೇ ತಂದೆಯ ಋಣ ತೀರಿಸೋ ಪಣ ತೊಟ್ಟಿದ್ದ ವೈಭವ್, ಸಿಕ್ಕ ಪ್ರತಿ ಅವಕಾಶದಲ್ಲೂ ಸಾಮರ್ಥ್ಯ ಫ್ರೂವ್ ಮಾಡಿದ್ದರು. ಯಶಸ್ಸಿನ ಪಯಣದಲ್ಲಿ ಸಾಗಿದ್ದ ವೈಭವ್ ವಿರುದ್ಧ ಏಜ್ ಫ್ರಾಡ್ ಆರೋಪವೂ ಕೇಳಿ ಬಂತು. ಈ ವೇಳೆ ಬಿಸಿಸಿಐ ನಿಯಮದಂತೆ ವೈಭವ್, ಬೋನ್ ಟೆಸ್ಟ್ಗೆ ಒಳಗಾಗಿ, ತಾನು ತಪ್ಪು ಮಾಡಿಲ್ಲ ಅನ್ನೋದು ಪ್ರೂವ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ