/newsfirstlive-kannada/media/post_attachments/wp-content/uploads/2025/04/Dravid.jpg)
ಐಪಿಎಲ್ನ 47ನೇ ಪಂದ್ಯದಲ್ಲಿ ವೈಭವ್ ಶತಕ ವೈಭವ ಜೋರಾಗಿತ್ತು. ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಭರ್ಜರಿಯಾಗಿ ಸಿಕ್ಕಿತ್ತು. ರಾಜಸ್ಥಾನ್ ರಾಯಲ್ಸ್ ಪರ 14 ವರ್ಷದ ಪೋರ ವೈಭವ್ ಸೂರ್ಯವಂಶಿ 35 ಬಾಲ್ನಲ್ಲಿ ಶತಕ ಬಾರಿಸಿ ಮಿಂಚಿದರು.
ವೈಭವ್ ಆರ್ಭಟ ಯಾವ ಮಟ್ಟಿಗಿತ್ತು ಅಂದ್ರೆ 37 ವರ್ಷದ ಅನುಭವಿ ಇಶಾಂತ್ ಶರ್ಮಾ ಕೆರಳಿ ನಿಂತ ಈ ಬಾಲಕನ ಮುಂದೆ ಸರೆಂಡರ್ ಆಗಿ ಬಿಟ್ರು. ಇಶಾಂತ್ ಎಸೆದ 4ನೇ ಓವರ್ನಲ್ಲಿ ವೈಭವ್ 28 ರನ್ ಚಚ್ಚಿದ್ರು. ಕೇವಲ 17 ಎಸೆತಗಳಲ್ಲೇ ಹಾಫ್ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ: 35 ಬಾಲ್ಗೆ ಸೆಂಚುರಿ ಹೊಡೆದ ವೈಭವ್ ಯಾರು? 14 ವರ್ಷದ ಈ ಪೋರನಿಗಾಗಿ ದ್ರಾವಿಡ್ ಪಟ್ಟು ಹಿಡಿದಿದ್ದರು..
ಇಷ್ಟಕ್ಕೆ ವೈಭವ್ ಅಬ್ಬರ ನಿಲ್ಲಲಿಲ್ಲ.. ಕರಿಮ್ ಜನ್ನತ್ ಎಸೆದ 10ನೇ ಓವರ್ನಲ್ಲಿ 3 ಸಿಕ್ಸರ್, 3 ಬೌಂಡರಿ ಚಚ್ಚಿ 30 ರನ್ ಕೊಳ್ಳೆ ಹೊಡೆದ್ರು. ರಶೀದ್ ಖಾನ್ ಎಸೆದ 11ನೇ ಓವರ್ನ 2 ಎಸೆತವನ್ನ ಸಿಕ್ಸರ್ ಸಿಡಿಸಿ ಇತಿಹಾಸ ನಿರ್ಮಿಸಿದ್ರು. ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಐಪಿಎಲ್ನಲ್ಲಿ ವೇಗದ ಶತಕ ಸಿಡಿಸಿದ ಭಾರತದ ಬ್ಯಾಟರ್ ಹೆಗ್ಗಳಿಕೆಗೆ ಪಾತ್ರರಾದ್ರು. 11 ಸಿಕ್ಸರ್, 7 ಬೌಂಡರಿ ಸಿಡಿಸಿದ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ಗಳಿಸಿ ಔಟಾದ್ರು.
ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ವಿಜೃಂಭಿಸಿದ ವೈಭವ್ ಹೋಮ್ಕ್ರೌಡ್ಗೆ ಸಖತ್ ಟ್ರೀಟ್ ನೀಡಿದ್ರು. ವೈಭವ್ ಆಟಕ್ಕೆ ಜಂಟಲ್ಮನ್ ಗೇಮ್ನ ರಿಯಲ್ ಜಂಟಲ್ಮನ್ ದ್ರಾವಿಡ್ ಕೂಡ ಸಲಾಂ ಎಂದ್ರು. ಗಾಯಗೊಂಡು ವೀಲ್ ಚೇರ್ನಲ್ಲಿ ಕುಳಿತಿದ್ದ ದ್ರಾವಿಡ್ ಎದ್ದು ನಿಂತು ಅಭಿನಂದಿಸಿದ್ರು.
ಇದನ್ನೂ ಓದಿ: ಶತಕದ ಹಿಂದಿನ ಗುಟ್ಟು ಬಿಚ್ಚಿಟ್ಟ ವೈಭವ್ ಸೂರ್ಯವಂಶಿ; ಕನಸು ನನಸಾದ ಕ್ಷಣದ ಬಗ್ಗೆ ಹೇಳಿದ್ದೇನು..?
What an incredible ton by Vaibhav Sooryavanshi
Icing on the cake standing ovation by none other than Rahul Dravid
India has so many talented players at home...should limit foreign players further and it definitely doesn't need them to hype IPL
pic.twitter.com/6jJLFw7UBK— GK_fan (@resh_ln) April 28, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್