/newsfirstlive-kannada/media/post_attachments/wp-content/uploads/2025/04/Vaibhav-5.jpg)
ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ನ ಈ ಸೆನ್ಸೇಷನಲ್ ಸ್ಟಾರ್ ಬಗ್ಗೆ ಎಲ್ಲೆಡೆ ಚರ್ಚೆ ಆಗ್ತಿದೆ. ಅದಕ್ಕೆ ಕಾರಣ, ಗುಜರಾತ್ ಟೈಟನ್ಸ್ ವಿರುದ್ಧ ಆಡಿದ ಅಮೋಘ ಬ್ಯಾಟಿಂಗ್. 265.79 ಸ್ಟ್ರೈಕ್ ರೇಟ್ನಲ್ಲಿ ರನ್ಸ್ ಚಚ್ಚಿರುವ ವೈಭವ್, 11 ಸಿಕ್ಸರ್, 7 ಬೌಂಡರಿ ಬಾರಿಸಿದರು. ಕೇವಲ 35 ಎಸೆತದಲ್ಲಿ ಶತಕ ಬಾರಿಸುವ ಮೂಲಕ ಐಪಿಎಲ್ನಲ್ಲಿ ಇತಿಹಾಸ ಬರೆದಿದ್ದಾರೆ. ಅಸಾಧಾರಾಣ ಪ್ರತಿಭೆಯ ತೆರೆಯ ಹಿಂದೆ ದೈತ್ಯ ಶಕ್ತಿಯೊಂದು ಕೆಲಸ ಮಾಡಿದೆ. ಅದು ಬೇರೆ ಯಾರೂ ಅಲ್ಲ ನಮ್ಮ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್!
ಇದನ್ನೂ ಓದಿ: 11 ಸಿಕ್ಸರ್ಗಳು.. ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ
ಅಸಾಧಾರಣ ಪ್ರತಿಭೆ ಹಿಂದೆ ದ್ರಾವಿಡ್..!
ಐಪಿಎಲ್ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಸಖತ್ ಸುದ್ದಿ ಆಗಿದ್ದರು. ಹರಾಜು ಸಂದರ್ಭದಲ್ಲಿ ವೈಭವ್ಗೆ ಕೇವಲ 13 ವರ್ಷ ತುಂಬಿತ್ತು. ಈ 13 ವರ್ಷದ ಪೋರನಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪೈಪೋಟಿ ನಡೆಸಿದ್ದವು. 30 ಲಕ್ಷ ಬೇಸ್ ಪ್ರೈಸ್ ಹೊಂದಿದ್ದ ಪೋರನಿಗಾಗಿ ಎರಡು ಫ್ರಾಂಚೈಸಿಗಳು ಜಿದ್ದಿಗೆ ಬಿದ್ದಿದ್ದವು. ಎಷ್ಟೇ ಖರ್ಚು ಆದರೂ ಸರಿ, ಆ ಬಾಲಕ ನಮಗೇ ಬೇಕು ಅಂತಾ ರಾಜಸ್ಥಾನ್ ತಂಡದ ಮುಖ್ಯ ಕೋಚ್, ರಾಹುಲ್ ದ್ರಾವಿಡ್ ಪಟ್ಟು ಹಿಡಿದು ಕೂತಿದ್ದರು. ಹೀಗೆ ಬಿಡ್ ನಡೆಯುತ್ತಿದ್ದ ವೇಳೆ ದೆಹಲಿ ಫ್ರಾಂಚೈಸಿ ಕೊನೆಯದಾಗಿ 1 ಕೋಟಿ ರೂಪಾಯಿ ಬಿಡ್ ಮಾಡ್ತಿರೋದಾಗಿ ಹೇಳಿತು. ಅಷ್ಟಕ್ಕೂ ಸುಮ್ಮನಾಗದ ರಾಜಸ್ಥಾನ 1.10 ಕೋಟಿ ನೀಡಿ ಖರೀದಿ ಮಾಡಿಯೇ ಬಿಟ್ಟಿತು.
ಇದನ್ನೂ ಓದಿ: 14 ವರ್ಷ 32 ದಿನದ ಪೋರ.. ವೈಭವ್ ಸೂರ್ಯವಂಶಿ ಸ್ಟ್ರೈಕ್ರೇಟ್ ಎಷ್ಟಿತ್ತು..?
ಟೀಕೆಗೆ ಒಳಗಾಗಿದ್ದ ದ್ರಾವಿಡ್..!
13 ವರ್ಷದ ಹುಡುಗನಿಗೆ 1.10 ಕೋಟಿ ನೀಡಿ ಖರೀದಿ ಮಾಡ್ತಿದ್ದಂತೆಯೇ ದ್ರಾವಿಡ್ ಟೀಕೆಗೆ ಗುರಿಯಾದರು. ಆ ಹುಡುಗನಿಗೆ ಅಷ್ಟೊಂದು ಕೋಟಿ ನೀಡಿ ಖರೀದಿಸುವ ಅಗತ್ಯ ಏನಿತ್ತು ಅಂತಾ ವಿಶ್ಲೇಷಕರು ತರಾಟೆ ತೆಗೆದುಕೊಂಡಿದ್ದರು. ಆದರೆ, ದೇಸಿಯ ಟೂರ್ನಿ ಹಾಗೂ ಹುಡುಗನಲ್ಲಿ ಕ್ರಿಕೆಟಿಗನಾಗಬೇಕು ಎಂಬ ತುಡಿತವನ್ನು ತಿಳಿದಿದ್ದ ದ್ರಾವಿಡ್, ಆ ಪ್ರತಿಭೆ ಮೇಲೆ ನಂಬಿಕೆ ಒಟ್ಟರು. ದ್ರಾವಿಡ್ ಇಟ್ಟ ನಂಬಿಕೆಯನ್ನು ವೈಭವ್ ಸೂರ್ಯವಂಶಿ ನಿರೂಪಿಸಿ ತೋರಿಸಿದ್ದಾರೆ.
ದ್ರಾವಿಡ್ ನಂಬಿಕೆಗೆ ವೈಭವ್, ನ್ಯಾಯ ಒದಗಿಸಿದ್ದಾರೆ ನಿಜ! ವೈಭವ್ ಬಳಿಯಿದ್ದ ಪ್ರತಿಭೆಯನ್ನು ಹೆಕ್ಕಿ ಹೊರ ತೆಗೆಯೋದು ಅಷ್ಟು ಸುಲಭವಿರಲಿಲ್ಲ. ಅಭ್ಯಾಸದ ವೇಳೆ ನಿರಂತರವಾಗಿ ಸಲಹೆ, ಸೂಚನೆಗಳನ್ನು ನೀಡುತ್ತ ಬಂದಿದ್ದರು. ಒಂದೆಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತೆ. ಅಭ್ಯಾಸ ಮಾತ್ರ ನಿಲ್ಲಿಸದಿರು, ಮರಳಿ ಪ್ರಯತ್ನವ ಮಾಡು ಅಂತಾ ವಿಶೇಷ ಕಾಳಜಿ ನೀಡಿದರು.
ಇದನ್ನೂ ಓದಿ: ಕಿಂಗ್ ಕೊಹ್ಲಿಗೆ ಶಾಕ್ ಕೊಟ್ಟ ಸಾಯಿ ಸುದರ್ಶನ್, ತೀವ್ರಗೊಂಡ ಪೈಪೋಟಿ..!
ಮಾಹಿತಿಗಳ ಪ್ರಕಾರ, ತಂಡ ಸೇರಿದ ದಿನದಿಂದಲೂ ನೆಟ್ ಸೆಷನ್ ವೇಳೆ ಸ್ಪೆಷಲ್ ಟಾಸ್ಕ್ ನೀಡುತ್ತಿದ್ದರು. 4 ಓವರ್ಗೆ 40 ರನ್, 60 ರನ್ನಂತೆ ಟಾರ್ಗೆಟ್ ಸೆಟ್ ಮಾಡಿ ಟಾರ್ಗೆಟ್ ರೀಚ್ ಮಾಡುವಂತೆ ಹೇಳುತ್ತಿದ್ದರು. ಅಂತೆಯೇ ಡೆಬ್ಯೂ ಮ್ಯಾಚ್ನಲ್ಲಿ ಮೊದಲ ಬಾಲ್ನಲ್ಲೇ ಸಿಕ್ಸರ್ ಎತ್ತುವ ಮೂಲಕ ತಾನೊಬ್ಬ ಎಂತಹ ಆಟಗಾರ ಅನ್ನೋದನ್ನು ತೋರಿಸಿದರು. ಅಂತೆಯೇ ಮೂರನೇ ಇನ್ನಿಂಗ್ಸ್ನಲ್ಲಿ 35 ಬಾಲ್ನಲ್ಲಿ ಶತಕ ಬಾರಿಸಿ ದ್ರಾವಿಡ್ ನಂಬಿಕೆಯನ್ನು ಸತ್ಯವನ್ನಾಗಿಸಿದ್ದಾರೆ. ಪ್ರತಿಭೆ ಇದ್ದರೂ, ಅವಕಾಶ ಸಿಗದೇ ಮರೆಯಾಗಿ ಹೋಗುತ್ತಿದ್ದ ವೈಭವ್ ಕ್ರಿಕೆಟ್ ಬದುಕಿಗೆ ದಾರಿ ತೋರಿಸಿದ ಸಾಹುಕಾರ ರಾಹುಲ್ ದ್ರಾವಿಡ್!
ಇದನ್ನೂ ಓದಿ: ಅಪ್ಪನ ಕನಸು ನನಸು.. ಪುತ್ರ ವೈಭವ್ಗೆ ಕ್ರಿಕೆಟ್ ಕಲಿಸಲು ಜಮೀನನ್ನೇ ಮಾರಿದ್ದ ತಂದೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್