ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS

author-image
Veena Gangani
Updated On
ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS
Advertisment
  • ಪತಿ ಜತೆ ಅಮೂಲ್ಯವಾದ ಸಮಯ ಕಳೆಯುತ್ತಿರೋ ವೈಷ್ಣವಿ ಗೌಡ
  • ಜೂನ್​ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕನ್ನಡ ಸ್ಟಾರ್ ನಟಿ
  • ನವ ದಂಪತಿ ವೈಷ್ಣವಿ, ಅನುಕೂಲ್‌ ಮಿಶ್ರಾ ಹೋಗಿದ್ದು ಎಲ್ಲಿಗೆ?

ಕನ್ನಡದ ಸ್ಟಾರ್ ನಟಿ ವೈಷ್ಣವಿ ಗೌಡ ಸಖತ್ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ನಟಿ ವೈಷ್ಣವಿ ಗೌಡ ಸದ್ಯ ಪತಿ ಜೊತೆಗೆ ಅಮೂಲ್ಯವಾದ ಸಮಯ ಕಳೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಸಿದ್ಧ ದೇಗುಲದ ಹುಂಡಿಗೆ 4 ಕೋಟಿ ಮೌಲ್ಯದ ಆಸ್ತಿ ಪತ್ರ ಹಾಕಿದ ನಿವೃತ್ತ ಸೇನಾಧಿಕಾರಿ.. ಕಾರಣ ಇಬ್ಬರು ಹೆಣ್ಮಕ್ಕಳು!

publive-image

ಅಗ್ನಿ ಸಾಕ್ಷಿ, ಸೀತಾ ರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಜೂನ್​ 4ರಂದು ಛತ್ತೀಸ್‌ಘಡ್ ಮೂಲದ ಅನುಕೂಲ್ ಮಿಶ್ರಾ ಜೊತೆಗೆ ಅದ್ಧೂರಿಯಾಗಿ ಮದುವೆಯಾಗಿದ್ದರು.

publive-image

ಸದ್ಯ ಅನುಕೂಲ್ ಮಿಶ್ರಾ ಹಾಗೂ ನಟಿ ವೈಷ್ಣವಿ ಗೌಡ ಹನಿಮೂನ್​ ವೆಕೇಷನ್​ನಲ್ಲಿ ಜಾಲಿ ಮಾಡುತ್ತಿದ್ದಾರೆ. ಹೌದು ನವ ದಂಪತಿ ವೈಷ್ಣವಿ ಹಾಗೂ ಅನುಕೂಲ್‌ ಮಿಶ್ರಾ ಸದ್ಯ ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ.

publive-image

ಮೊನ್ನೆಯಷ್ಟೇ ರಿಷಿಕೇಶ್‌ಗೆ ಭೇಟಿ ಕೊಟ್ಟು ಅತೀ ಎತ್ತರದ ಪ್ರದೇಶದಿಂದ ವೈಷ್ಣವಿ ಬಂಗೀ ಜಂಪ್‌ ಮಾಡಿದ್ದರು. ಇದೀಗ ವೈಷ್ಣವಿ ಅವರನ್ನ ಪತಿ ಅನುಕೂಲ್‌ ಮಿಶ್ರಾ ಮನಾಲಿಗೆ ಕರೆದುಕೊಂಡು ಹೋಗಿದ್ದಾರೆ.

ಮನಾಲಿಯಲ್ಲಿ ತಾವು ಕ್ಲಿಕ್ಕಿಸಿಕೊಂಡ ಸಖತ್​ ಬ್ಯೂಟಿಫುಲ್​ ಆಗಿರೋ ಫೋಟೋಗಳನ್ನ ನಟಿ ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಸ್​ನಲ್ಲಿ ನಟಿ ವೈಷ್ಣವಿ ಗೌಡ ಸಖತ್​ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment