/newsfirstlive-kannada/media/post_attachments/wp-content/uploads/2025/06/VAISHNAVI-GOWDA-1.jpg)
ಕನ್ನಡದ ಜನಪ್ರಿಯ ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಇಂದು ಸಪ್ತಪದಿ ತುಳಿದಿದ್ದಾರೆ. ಅನುಕೂಲ್ ಮಿಶ್ರಾ ಜೊತೆ ಅವರ ಮದುವೆ ನೆರವೇರಿದೆ. ಅವರ ವಿವಾಹ ಸಮಾರಂಭಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಅನೇಕರು ಸಾಕ್ಷಿ ಆಗಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ವೀಕ್ಷಕರಿಗೆ ಶಾಕ್.. ಏಕಾಏಕಿ ಸೀರಿಯಲ್ನಿಂದ ಆಚೆ ಬಂದ ತನು ಪಾತ್ರಧಾರಿ
ಮದುವೆ ಬೆನ್ನಲ್ಲೇ ವೈಷ್ಣವಿ ಗೌಡ ಅವರು ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮದುವೆಯ ಫೋಟೋಗಳು ವೈರಲ್ ಆಗಿವೆ. ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟೇ ಬಿಟ್ರು ಬಿಗ್ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ; ಏನದು?
ಅಂದ್ಹಾಗೆ ವೈಷ್ಣವಿ ಗೌಡ ಅವರು ಜೂನ್ 4 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬನ್ನೇರುಘಟ್ಟ ರಸ್ತೆ ಬಳಿಯಿರುವ ಕಲ್ಯಾಣ ಮಂಟಪವೊಂದರಲ್ಲಿ ವೈಷ್ಣವಿ ಗೌಡ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಇದೀಗ ವಿವಾಹ ಕಾರ್ಯಕ್ರಮದ ಒಂದೊಂದೇ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಹುಡುಗ ಯಾರು..?
ವೈಷ್ಣವಿ ಗೌಡ ಅವರು ಮದುವೆ ಆಗಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ. ಇವರು ಏರ್ಫೋರ್ಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಮಿಶ್ರಾ ಮತ್ತು ವೈಷ್ಣವಿ ಗೌಡ ಅವರದ್ದು ಲವ್ ಮ್ಯಾರೇಜ್ ಅಲ್ಲ, ಅಪ್ಪಟ ಅರೇಂಜ್ ಮ್ಯಾರೇಜ್. ಮನೆಯವರು ನೋಡಿದ ಹುಡುಗನನ್ನೇ ವೈಷ್ಣವಿ ಗೌಡ ಮದುವೆ ಆಗಿದ್ದಾರೆ.
ಇದನ್ನೂ ಓದಿ: ಕೆಂಡಸಂಪಿಗೆ ಸೀರಿಯಲ್ ನಟಿ ನಿಸರ್ಗ ಮಂಜುನಾಥ್ ಮನೆಯಲ್ಲಿ ಸಂಭ್ರಮ.. ಏನದು?
ಅಮೂಲ್ಯ, ವಿಜಯ್ ಸೂರ್ಯ, ನಿವೇದಿತಾ ಗೌಡ, ಅಲೋಕ್, ಕಾರುಣ್ಯ ರಾಮ್ ಸೇರಿದಂತೆ ಅನೇಕರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅನೇಕ ವರ್ಷಗಳಿಂದ ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸೀರಿಯಲ್ನಲ್ಲಿ ನಟಿಸುವ ಮೂಲಕ ಅಪಾರ ಖ್ಯಾತಿ ಗಳಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ ರಿಯಾಲಿಟಿ ಶೋನಲ್ಲೂ ವೈಷ್ಣವಿ ಗೌಡ ಭಾಗವಹಿಸಿದ್ದರು.
ಇದನ್ನೂ ಓದಿ: ‘ಸರಿಗಮಪ ಸೀಸನ್ 21’.. ಬೀದರ್ನ ಶಿವಾನಿಗೆ ಒಲಿದ ವಿನ್ನರ್ ಪಟ್ಟ; ರನ್ನರ್ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ