/newsfirstlive-kannada/media/post_attachments/wp-content/uploads/2025/04/Vaisshnavi9.jpg)
ಅಗ್ನಿಸಾಕ್ಷಿ ಸನ್ನಿಧಿಗೆ ಕೊನೆಗೂ ಕಂಕಣಭಾಗ್ಯ ಕೂಡಿ ಬಂದಿದೆ. ಕೊನೆಗೂ ಮನ ಮೆಚ್ಚಿದ ಹುಡುಗ ವೈಷ್ಣವಿಯ ಕೈ ಹಿಡೀತಿದ್ದಾನೆ. ಸದ್ದಿಲ್ಲದೇ ಸನ್ನಿಧಿಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೇರವೇರಿದೆ. ಅದರಲ್ಲಿ ಇನ್ನೊಂದು ಇಂಟರೆಸ್ಟಿಂಗ್ ಕಥೆ ಗೊತ್ತಾ? ವೈಷ್ಣವಿ ಈ ಮದುವೆಗೆ ಒಪ್ಪುವ ಮುಂಚೆ ಆಕೆಗೆ ಬಂದ ಪ್ರಪೋಸಲ್ಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ 300 ಮದುವೆ ಆಫರ್ ವೈಷ್ಣವಿಗೆ ಬಂದಿತ್ತಂತೆ. ಹಾಗಾದ್ರೆ, ಆ 300 ಆಫರ್ಗಳನ್ನೂ ಒಪ್ಪದ ಗುಳಿಕೆನ್ನೆ ಚೆಲುವೆಯ ಹೃದಯವನ್ನ ಈ ಹುಡುಗ ಕದ್ದಿದ್ದು ಹೇಗೆ? ಸೀರಿಯಲ್ ಸುಂದರಿಯ ಮನೆಗೆ ಬಂದ ಹೊಸ ಅತಿಥಿಯಿಂದಲೇ ಕಂಕಣ ಭಾಗ್ಯ ಕೂಡ ಬಂತಾ? ಇವರ ಸ್ಟೋರಿ ಇಲ್ಲಿದೆ ಓದಿ.
ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್ ಮಾಡಿ ನೋಡೋಣ
ಅಗ್ನಿಸಾಕ್ಷಿಯ ಸನ್ನಿಧಿ. ಕಿರುತೆರೆ ಲೋಕದ ಕಿನ್ನರಿ. ಸ್ಮಾಲ್ಸ್ಕ್ರೀನ್ ದುನಿಯಾದಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡಿರೋ ನಟಿ ವೈಷ್ಣವಿ ಗೌಡ. ಸೀರಿಯಲ್ ಮೂಲಕವೇ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಗಟ್ಟಿಸ್ಥಾನ ಗಿಟ್ಟಿಸಿಕೊಂಡ ಹುಡುಗಿ. ಒಂದು ಕಾಲದಲ್ಲಿ ಇವರ ಧಾರವಾಹಿ ನೋಡೋಕೆ ಜನ ಚಾತಕ ಪಕ್ಷಿಗಳಂತೆ ಕಾದು ಕುಳಿತುಕೊಳ್ಳುತ್ತಿದ್ದರು. ಸೀರಿಯಲ್ ಮಾತ್ರವಲ್ಲದೇ ಬಿಗ್ಬಾಸ್ನಲ್ಲೂ ರನ್ನರ್ ಅಪ್ ಆಗಿದ್ದ ವೈಷ್ಣವಿ ಗೌಡಗೆ ಸಿಕ್ಕವರೆಲ್ಲಾ ಕೇಳ್ತಿದ್ದದ್ದು ಒಂದೇ ಪ್ರಶ್ನೆ. ಮದುವೆ ಯಾವಾಗ ಮೇಡಂ ಅಂತಾ. ಆ ಪ್ರಶ್ನೆಗಳಿಗೆಲ್ಲಾ ಉತ್ತರದಂತೆ ವೈಷ್ಣವಿ ಕೊನೆಗೂ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ಸಜ್ಜಾಗಿದ್ದು, ಉದ್ಯಮಿಯೊಬ್ಬರ ಕೈ ಹಿಡೀತಿದ್ದಾರೆ.
ಇದೇ ವಿಡಿಯೋ ನೋಡಿ ವೈಷ್ಣವಿ ಗೌಡ ನಿಶ್ಚಿತಾರ್ಥದ ಕಥೆ ಹೇಳಿದ್ದು. ಏಪ್ರಿಲ್ 14ನೇ ತಾರೀಖು ಸೋಮವಾರ ಉದ್ಯಮಿ ಅನುಕೂಲ್ ಮಿಶ್ರಾ ಎನ್ನುವವರ ಜೊತೆಗೆ ವೈಷ್ಣವಿ ಎಂಗೇಜ್ಮೆಂಟ್ ಆಗಿದೆ. ವೈಷ್ಣವಿ ಗೌಡ ಹಾಗೂ ಅನುಕೂಲ್ ರಿಂಗ್ ಎಕ್ಸ್ಚೆಂಜ್ ಮಾಡ್ಕೊಂಡಿದ್ದಾರೆ. ವೈಷ್ಣವಿ ಗೌಡ ಮದುವೆ ಬಗ್ಗೆ ಕೋಟಿ ಕೋಟಿ ಕನ್ನಡಿಗರಲ್ಲಿ ಮಾತ್ರವಲ್ಲ ವೈಷ್ಣವಿ ಗೌಡ ತಂದೆ ತಾಯಿ ಕೂಡ ಮಗಳ ಕಲ್ಯಾಣವನ್ನ ಆದಷ್ಟು ಬೇಗ ಕಣ್ತುಂಬಿಕೊಳ್ಳುವ ಕನಸು ಕಟ್ಕೊಂಡಿದ್ರು. ಈಗ ಆ ಕನಸು ಈಡೇರ್ತಿದ್ದು, ಮಗಳ ನಿಶ್ಚಿತಾರ್ಥ ಕಂಡು ದಿಲ್ಖುಷ್ ಆಗಿದ್ದಾರೆ. ಆದ್ರೆ, ಇನ್ನೂ ಮದುವೆ ಡೇಟ್ ಫಿಕ್ಸ್ ಆಗಿಲ್ಲ. ವೈಷ್ಣವಿ ಗೌಡ ತಂದೆ ತಾಯಿ ಕೂಡ ಮಗಳ ನಿಶ್ಚಿತಾರ್ಥ ಸಂಭ್ರಮ ಕಂಡು ಸಂತಸ ಹಂಚಿಕೊಂಡಿದ್ದಾರೆ. ತುಂಬಾ ದಿನದಿಂದ ಈ ಕ್ಷಣಕ್ಕೆ ನಾವು ಕಾಯ್ತಿದ್ವಿ. ಈಗ ಆ ಕ್ಷಣಕ್ಕೆ ಕಾಲ ಕೂಡಿ ಬಂದಿದೆ ಅಂತ ಪ್ರೀತಿಯಿಂದ ಮಗಳ ನವ ಜೀವನಕ್ಕೆ ಶುಭ ಕೋರಿದ್ದಾರೆ.
ವೈಷ್ಣವಿ ಗೌಡ ಒಪ್ಪಿದ ವರ ಯಾರು? ಕನಸಿನಂತೆಯೇ ಸಿಕ್ಕನಾ?
ವೈಷ್ಣವಿಗೌಡ ಮದುವೆ ಬಗ್ಗೆ ನೂರಾರು ಕನಸು ಕಟ್ಕೊಂಡಿದ್ರು. ಮದ್ವೆಯಾದ್ರೆ ಹಿಂಗೆ ಆಗ್ಬೇಕು ಅನ್ನೋ ಆಸೆ ಇಟ್ಕೊಂಡಿದ್ರು. ಈ ಆಸೆಯಂತೆಯೇ ವೈಷ್ಣವಿ ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ಅಷ್ಟಕ್ಕೂ ವೈಷ್ಣವಿ ಕೈ ಹಿಡಿಯೋದಕ್ಕೆ ರೆಡಿಯಾಗಿರೋ ವರ ಅನುಕೂಲ್ ಮಿಶ್ರಾ ಏರ್ಪೋರ್ಸ್ನಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ತಮ್ಮ ಭಾವಿ ಪತಿಯನ್ನ ವೈಷ್ಣವಿ ಗೌಡರೇ ಪರಿಚಯ ಮಾಡಿಸಿದ್ದಾರೆ. ಎಲ್ಲರೂ ಯಾವಾಗ ನನ್ನ ಮದ್ವೆ? ಹುಡುಗ ಯಾರು ಅಂತ ಕೇಳ್ತಿದ್ರಿ ಅದಕ್ಕೆ ಉತ್ತರ ನಾನೇ ಕೊಡ್ತೀನಿ ಅಂತ ಫಿಯಾನ್ಸಿಯ ಗುಟ್ಟು ರಟ್ಟು ಮಾಡಿದ್ದಾರೆ.
‘ಸೀತಾ’ಗಾಗಿ 3 ಗಂಟೆವರೆಗೂ ಕೂತು ಕನ್ನಡ ಕಲಿತ್ರು ಭಾವಿ ಪತಿ!
ಜೋಡಿ ಕ್ಯೂಟ್ ಆಗಿದೆ ಅಲ್ವಾ? ವೈಷ್ಣವಿಗೌಡ ಮೊದಲೇ ಚೆಂದದ ಚೆಂದುಳ್ಳಿಯಂತಿರೋ ಹುಡುಗಿ. ಆಕೆ ಪತಿ ಕೂಡ ಅವರಷ್ಟೆ ಕ್ಯೂಟ್ ಆಗಿದ್ದು, ಈ ಕ್ಯೂಟ್ನೆಸ್ನಲ್ಲೇ ಅನುಕೂಲ್ ಮಿಶ್ರಾ ವೈಷ್ಣವಿಗೆ ಕನ್ನಡದಲ್ಲೇ ಪ್ರಪೋಸ್ ಮಾಡಿದ್ದಾರೆ. ಅಚ್ಚರಿ ಏನ್ ಏನೆಂದರೆ ವೈಷ್ಣವಿಗಾಗಿಯೇ ರಾತ್ರಿ ಮೂರು ಗಂಟೆವರೆಗೂ ಗೂಗಲ್ ಟ್ರಾನ್ಸ್ಲೆಟ್ ಮಾಡಿ ಕನ್ನಡ ಕಲಿತು ಕನ್ನಡದಲೇ ಭಾವಿ ಪತ್ನಿ ವೈಷ್ಣವಿಗೆ ಪ್ರೀತಿಯ ನಿವೇದನೆ ತಿಳಿಸಿದ್ದಾರೆ. ವೈಷ್ಣವಿ ಗೌಡ ಕಳೆದ ಫೆಬ್ರವರಿಯಲ್ಲೇ ಮದ್ವೆ ಸುಳಿವು ಕೊಟ್ಟಿದ್ರು, ಕಳೆದ ಫೆಬ್ರವರಿಯಲ್ಲಿ ನಡೆದ ಏರ್‌ಶೋನಲ್ಲಿ ವೈಷ್ಣವಿ ಗೌಡ ಭಾಗವಹಿಸಿದ್ದರು. ಈ ಕುರಿತ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರ ಮೂಲಕ ಪರೋಕ್ಷವಾಗಿ ಭಾವಿ ಪತಿಗೆ ಧನ್ಯವಾದ ತಿಳಿಸಿದ್ದರು. ಈಗ ಪ್ರೀತಿಸಿದ ಹುಡುಗನನ್ನೇ ವೈಷ್ಣವಿ ಗೌಡ ಮದುವೆ ಆಗ್ತಿರೋದು ಮತ್ತೊಂದು ವಿಶೇಷ.
ಇದನ್ನೂ ಓದಿ:ಉದ್ಯಮಿ ಜೊತೆಗೆ ವೈಷ್ಣವಿ ಗೌಡ ನಿಶ್ಚಿತಾರ್ಥ; ಇಲ್ಲಿವೆ 10 ಗ್ರ್ಯಾಂಡ್ ಫೋಟೋಸ್!
ಕುಟುಂಬಸ್ಥರು, ಆಪ್ತರು ಮತ್ತು ತಾರೆಯರ ಸಮ್ಮುಖದಲ್ಲಿ ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಶಾಸ್ತ್ರೋಕ್ತವಾಗಿ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ತಾರೆಯರು ಕೂಡ ಮೆರಗು ಹೆಚ್ಚಿಸಿದ್ರು. ವೈಷ್ಣವಿಗೌಡ ಬೆಸ್ಟ್ ಫ್ರೆಂಡ್ ನಟಿ ಅಮೂಲ್ಯ ಸೇರಿದಂತೆ ಅನೇಕ ತಾರೆಯರೂ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ರು. ವೈಷ್ಣವಿ ಗೌಡ ಕಲ್ಯಾಣಕ್ಕೆ ಹೂಂ ಅಂದು ನಿಶ್ಚಿತಾರ್ಥ ಮಾಡ್ಕೊಂಡಿದ್ದಾರೆ. ಆದ್ರೆ ಈ ಹುಡುಗನನ್ನ ಒಪ್ಪೋದಕ್ಕೂ ಮುನ್ನ ನಟಿಗೆ ಬಂದ ಮದುವೆ ಆಫರ್ಗಳ ಬಗ್ಗೆ ಕೇಳಿದ್ರೆ ನೀವು ಶಾಕ್ ಆಗ್ಬಿಡ್ತಿರಾ? ಅಷ್ಟಕ್ಕೂ ಅಗ್ನಿಸಾಕ್ಷಿ ಧಾರವಾಹಿ ಮಾಡಿದ್ರೂ, ಕಲ್ಯಾಣವಾಗದ ನಟಿಗೆ ಅದೊಂದು ಮಗುವಿನಿಂದ ಕಂಕಣ ಭಾಗ್ಯ ಕೂಡಿ ಬಂತಾ? ಅನ್ನೋ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿ ಹುಟ್ಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ