Advertisment

ಮತ್ತೆ ಒಟ್ಟಿಗೆ ತೆರೆ ಮೇಲೆ ಮಿಂಚಲು ಸಜ್ಜಾದ ಮಿಥುನ ರಾಶಿ ಅಕ್ಕ-ತಂಗಿ; ಯಾವ ಸೀರಿಯಲ್​​ ಗೊತ್ತಾ..?

author-image
Veena Gangani
Updated On
ಮತ್ತೆ ಒಟ್ಟಿಗೆ ತೆರೆ ಮೇಲೆ ಮಿಂಚಲು ಸಜ್ಜಾದ ಮಿಥುನ ರಾಶಿ ಅಕ್ಕ-ತಂಗಿ; ಯಾವ ಸೀರಿಯಲ್​​ ಗೊತ್ತಾ..?
Advertisment
  • ರಾಶಿ ಹಾಗೂ ಸುರಕ್ಷಾ ಅಭಿನಯಕ್ಕೆ ಮನಸೋತ ಫ್ಯಾನ್ಸ್
  • ಪ್ರೇಕ್ಷಕರಿಗೆ ಹೊಸ ಸುದ್ದಿ ನೀಡಿದ ಮಿಥುನ ರಾಶಿ ಅಕ್ಕ-ತಂಗಿ
  • ಪರಭಾಷೆಯಲ್ಲೂ ಮೋಡಿ ಮಾಡಲು ಸಜ್ಜಾದ ಮತ್ತಿಬ್ಬರು!

ಕನ್ನಡ ಕಿರುತೆರೆಯಲ್ಲಿ ಒಂದಷ್ಟು ಮುಕ್ತಾಯಗೊಂಡ ಧಾರಾವಾಹಿಗಳು ಇನ್ನೂ ವೀಕ್ಷಕರ ಮನಸಲ್ಲಿ ಹಾಗೇ ಉಳಿದಿವೆ. ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲಿ ಕನ್ನಡ ಕಿರುತೆರೆಯ ಮಿಥುನ ರಾಶಿ ಸೀರಿಯಲ್ ಕೂಡ ಒಂದು. ಮಿಥುನ ರಾಶಿ ಧಾರಾವಾಹಿಯಲ್ಲಿ ಅಕ್ಕ-ತಂಗಿ ಬಾಡಿಂಗ್ ಕೂಡ ಇತ್ತು. ರಾಶಿ ಹಾಗೂ ಸುರಕ್ಷಾ ಜೋಡಿ ಈ ಧಾರಾವಾಹಿಯಲ್ಲಿ ಫುಲ್ ಮೋಡಿ ಮಾಡಿತ್ತು. ಈಗ ಇದೇ ಜೋಡಿ ಕನ್ನಡ ಪ್ರೇಕ್ಷಕರಿಗೆ ಹೊಸ ಸುದ್ದಿಯೊಂದನ್ನು ನೀಡಿದೆ.

Advertisment

publive-image

ನಟಿ ವೈಷ್ಣವಿ ಹಾಗೂ ನಟಿ ಪೂಜಾ ಇಬ್ಬರು ಮತ್ತೆ ಅಕ್ಕ ತಂಗಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಕನ್ನಡ ಪ್ರೇಕ್ಷಕರ ಮುಂದೆ ಅಲ್ಲ. ಬದಲಾಗಿ ತೆಲುಗು ಪ್ರೇಕ್ಷಕರ ಮುಂದೆ. ಹೌದು ಹೊಸ ಧಾರಾವಾಹಿಯಾದ ಸೀತಾ ರಾಮುಡಿ ಕಟ್ನಂ ಎಂಬಾ ಹೊಸ ಕಥೆಯಲ್ಲಿ ಇದೇ ಇಬ್ಬರು ಕನ್ನಡ ನಟಿಯರು ಮತ್ತೆ ಅಕ್ಕ ತಂಗಿಯಾಗಿನೇ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಜೋಡಿಗೆ ಅಕ್ಕ ತಂಗಿ ಪಾತ್ರಗಳು ಎಳಿ ಮಾಡಿಸಿದ ಹಾಗೆ ಇದೆ.

publive-image

ಮಿಥುನ ರಾಶಿ ಧಾರಾವಾಹಿಯಲ್ಲಿ ಅಕ್ಕನಿಗೆ ಸಿಗೋ ಪ್ರೀತಿ ತಂಗಿಗೆ ಸಿಗೋದಿಲ್ಲ. ನಟಿ ವೈಷ್ಣವಿ ಸೀತಾ ಅನ್ನೋ ಮುಗ್ಧ ಹುಡುಗಿ ಪಾತ್ರವನ್ನ ನಿರ್ವಹಿಸ್ತಾ ಇದ್ದಾರೆ. ಇಲ್ಲಿ ಅಪ್ಪ ಕೂಡ ಅಸಹಾಯಕ ಆಗಿದ್ದಾರೆ. ಬಳಿಕ ಸೀತಾ ಮದುವೆಯಾಗಿ ಬಿಡ್ತಾಳೆ. ಅದ್ಯಾವ ಕಾರಣಕ್ಕೆ ಆ ಮನೆಯವರು ಸೀತಾಳನ್ನು ಸೊಸೆ ಅಂತಾ ಒಪ್ಪಿಕೊಳ್ಳುತ್ತಾರಾ ಅನ್ನೋದೇ ಈ ಧಾರಾವಾಹಿಯ ಕಥಾ ಹಂದರ. ಇಲ್ಲಿ ಅಕ್ಕಾನೆ ತಂಗಿಗೆ ಶತ್ರು.

publive-image

ಇವರಿಬ್ಬರ ಕಥೆ ಏನಾಗಲಿದೆ ಅನ್ನೋದೆಲ್ಲವನ್ನು ಧಾರಾವಾಹಿಯಲ್ಲಿ ನಾವು ಕಾದು ನೋಡಬೇಕು. ಒಟ್ಟಿನಲ್ಲಿ ನಟಿ ವೈಷ್ಣವಿ ಹಾಗೂ ಪೂಜಾ ಜೋಡಿ ಈಗ ಪರಭಾಷೆಯಗಳಲ್ಲಿ ಸಕ್ರಿಯರಾಗಿದ್ದಾರೆ. ಅದು ಅಲ್ಲದೆ ಮತ್ತೆ ಒಂದೇ ಪರದೆ ಮೇಲೆ ಅಕ್ಕ, ತಂಗಿ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment