/newsfirstlive-kannada/media/post_attachments/wp-content/uploads/2025/02/radika.jpg)
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದ ಯಶ್ ಕೆಜಿಎಫ್ ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡವರು. ತಮ್ಮ ಅದ್ಭುತ ನಟನೆ ಮತ್ತು ಸಮಾಜಮುಖಿ ಕೆಲಸಗಳಿಂದ ನಟ ಯಶ್ ಇಂದು ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಜೊತೆಗೆ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿ ಮುದ್ದಾದ ಮಕ್ಕಳ ಜೊತೆಗೆ ಸುಖದಿಂದ ಸಂಸಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಿಮಗೇನಾದ್ರೂ ನಟಿಸೋ ಆಸೆ ಇದ್ಯಾ? ಪುಟ್ಟಕ್ಕನ ಮಕ್ಕಳು ನಿರ್ದೇಶಕರಿಂದ ವಿಶೇಷ ಆಹ್ವಾನ!
ಇಂದು ಪ್ರೇಮಿಗಳ ದಿನಾಚರಣೆ. ಅದೆಷ್ಟೋ ಪ್ರೇಮಿಗಳಿಗೆ ಈ ಸ್ಟಾರ್ ಜೋಡಿಯೇ ಪ್ರೇರಣೆ ಆಗಿದ್ದಾರೆ. ಸಾಕಷ್ಟು ಪ್ರೇಮಿಗಳು ಜೀವನದಲ್ಲಿ ಹೀಗೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ರೀತಿ ಬಾಳಿ ಬದುಕಬೇಕು ಅಂತ ಅಂದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ತಮ್ಮ ಪ್ರೀತಿಯನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ ಈ ಸ್ಟಾರ್ ಸ್ಯಾಂಡಲ್ವುಡ್ ಜೋಡಿ. ಇನ್ನೂ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಮಧ್ಯೆ ಪ್ರೀತಿ ಶುರುವಾಗಿದ್ದು ಹೇಗೆ ಎಂಬುವುದು ಸಾಕಷ್ಟು ಮಂದಿಗೆ ತಿಳಿದಿಲ್ಲ. ಅಷ್ಟಕ್ಕೂ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಭೇಟಿಯಾಗಿದ್ದು ಎಲ್ಲಿ, ಇದಾದ ಬಳಿ ಈ ಇಬ್ಬರು ಹೇಗೆ ಪ್ರೀತಿಯಲ್ಲಿ ಬಿದ್ದರು ಎಂಬುವುದರ ಬಗ್ಗೆ ಈ ಸ್ಟೋರಿಯಲ್ಲಿ ತಿಳಿಸಲಾಗಿದೆ.
ರಾಧಿಕಾ ಪಂಡಿತ್ ಮನಸ್ಸು ಗೆಲ್ಲೋದ್ದಕ್ಕೆ ರಾಕಿ ಭಾಯ್ ತುಂಬಾನೇ ಕಷ್ಟ ಪಟ್ಟಿದ್ದರಂತೆ. 2004ರಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹಾಗೂ ಯಶ್ ನಂದಗೋಕುಲ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಇದೇ ಸೀರಿಯಲ್‌ನಲ್ಲಿ ನಟಿ ರಾಧಿಕಾ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ನಂದಗೋಕುಲ ಶೂಟಿಂಗ್ ಸಮಯದಲ್ಲಿ ಮೊದಲ ಬಾರಿಗೆ ಯಶ್ ಮತ್ತು ರಾಧಿಕಾ ಭೇಟಿಯಾಗಿದ್ದರು. ಹೀಗೆ ಸೀರಿಯಲ್‌ನಲ್ಲಿ ಅಭಿನಯಿಸುತ್ತಾ ಈ ಇಬ್ಬರ ಮಧ್ಯೆ ಫ್ರೆಂಡ್ ಶಿಪ್ ಆಯಿತು. ಅಚ್ಚರಿ ಏನೆಂದರೆ, ಇಬ್ಬರು ಸಹ ಒಂದೇ ಕ್ಯಾಬ್ ನಲ್ಲಿ ಓಡಾಡುತ್ತಿದ್ದಾಗ ಒಬ್ಬರಿಗೊಬ್ಬರು ಮಾತೇ ಆಡುತ್ತಿರಲಿಲ್ಲವಂತೆ. ಇದೇ ರೀತಿ ಮೊಗ್ಗಿನ ಮನಸ್ಸು ಸಿನಿಮಾದಲ್ಲೂ ನಡೆಯಿತು. ಇಷ್ಟೇ ಅಲ್ಲದೇ ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾ ಸಿನಿಮಾದಲ್ಲೂ ಕೂಡ ಬೇರೊಬ್ಬ ನಾಯಕಿಯ ಬದಲಿಗೆ ರಾಧಿಕಾರವರಿಗೆ ಚಾನ್ಸ್ ಸಿಕ್ಕಿತ್ತು. ಹೀಗಾಗಿ ಇಬ್ಬರೂ ಪದೇ ಪದೆ ಭೇಟಿಯಾಗುತ್ತಿದ್ರು. ಈ ವೇಳೆ ಆ ಸ್ನೇಹ ಮತ್ತಷ್ಟು ಗಟ್ಟಿಯಾಗುತ್ತಾ ಹೋಯಿತು. ಹೀಗಾಗಿ ಇಬ್ಬರೂ ಸಹ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರಂತೆ.
ಪ್ರೇಮಿಗಳ ದಿನಾಚರಣೆಯಂದು ಯಶ್ ಅವರು ರಾಧಿಕಾ ಅವರಿಗೆ ಇಷ್ಟವಾದ ವಸ್ತುಗಳನ್ನು ಒಂದು ಬಾಸ್ಕೆಟ್ನಲ್ಲಿ ಹಾಕಿ ಪ್ಯಾಕ್ ಮಾಡಿ ಅದನ್ನು ಅವರ ಕಾರಿನ ಒಳಗಡೆ ಇಟ್ಟಿದ್ದರಂತೆ. ಈ ರೀತಿ ತಮ್ಮ ಲವ್ ಪ್ರಪೋಸಲ್ ತಿಳಿಯುವಂತೆ ಮಾಡಿದ್ದರಂತೆ. ಇದಕ್ಕೂ ಮೊದಲು ಯಶ್ ಅವರು ಫೋನ್ ಮೂಲಕ ಬಹಳಷ್ಟು ಬಾರಿ ಪ್ರೀತಿಯ ವಿಚಾರವನ್ನು ಹೇಳಿಕೊಂಡರು ರಾಧಿಕಾ ಅವರು ಒಪ್ಪಿಗೆ ನೀಡಿರಲಿಲ್ಲವಂತೆ.
ಸುಮಾರು 6 ತಿಂಗಳುಗಳ ಕಾಲ ಸಮಯವಕಾಶ ತೆಗೆದುಕೊಂಡರಂತೆ. ಒಮ್ಮೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಯಶ್, ರಾಧಿಕಾರನ್ನು ತಮ್ಮ ಕುಟುಂಬಸ್ಥರಿಗೆ ಪರಿಚಯ ಮಾಡಿಕೊಡಲು ಮನೆಗೆ ಕರೆದುಕೊಂಡು ಹೋಗಿದ್ದಾಗ ಇಷ್ಟಪಡುತ್ತಿರುವುದಾಗಿ ತಿಳಿಸಿದ್ದರಂತೆ.
ಡಿಸೆಂಬರ್ 9, 2016ರಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗೋವಾದಲ್ಲಿ ಮದುವೆಯಾದ ಈ ಜೋಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗಾಗಿ ಅದ್ಧೂರಿ ಔತಣಕೂಟ ಏರ್ಪಡಿಸಿದ್ದರು. ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ 2018 ಡಿಸೆಂಬರ್ 2ರಂದು ಹೆಣ್ಣು ಮಗು ಜನಿಸಿತು. ಬಳಿಕ 2019 ಅಕ್ಟೋಬರ್ 30 ರಂದು ಗಂಡು ಮಗ ಜನನವಾಯಿತು. ಮಗಳಿಗೆ ಐರಾ ಹಾಗೂ ಮಗನ ಹೆಸರು ಯಥರ್ವ್ ಎಂದು ಇಟ್ಟಿದ್ದಾರೆ.
ಇದನ್ನೂ ಓದಿ:ರಾಮ ಜನ್ಮಭೂಮಿಗೆ ಪ್ರಯಾಣ ಬೆಳೆಸಿದ ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ; ಫೋಟೋಸ್ ಇಲ್ಲಿವೆ!
ಇನ್ನೂ ಈ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ. ಮುದ್ದಾದ ಮಕ್ಕಳು ಫೋಟೋಗಳು, ಸಿನಿಮಾದ ಅಪ್ಡೇಟ್ಸ್ ಹೀಗೆ ಸಾಕಷ್ಟು ವಿಚಾರದ ಬಗ್ಗೆ ರಾಧಿಕಾ ಪಂಡಿತ್ ಹಾಗೂ ಯಶ್ ಅಭಿಮಾನಿಗಳ ಒಟ್ಟಿಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಸ್ಟಾರ್ ಜೋಡಿಯ ಲವ್ ವಿಚಾರ, ಒಬ್ಬರಿಗೊಬ್ಬರು ಕೊಡುವ ಗೌರವ ನೋಡಿಯೇ ಸಾಕಷ್ಟು ಪ್ರೇಮಿಗಳಿಗೆ ಪ್ರೇರಣೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ