newsfirstkannada.com

Valentines Day: ಪ್ರೀತಿ ಹುಟ್ಟಿದ್ದೇ ಹೀಗೆ.. ನಿಮ್ಮವಳಿಗೆ ‘I Love You’ ಎಂದು ಜೋರಾಗಿ ಹೇಳಿಬಿಡಿ

Share :

Published February 14, 2024 at 7:09am

Update February 14, 2024 at 8:55am

  ಪ್ರೇಮಿಗಳ ದಿನಾಚರಣೆ ಹುಟ್ಟಿಕೊಂಡಿದ್ದು ಹೇಗೆ?

  ವ್ಯಾಲೆಂಟೈನ್ಸ್​ ದಿನದ ಇತಿಹಾಸ ತಿಳಿದಿದೆಯಾ?

  ಫೆಬ್ರವರಿ 14ರಂದು ಯಾಕೆ ಆಚರಣೆ ಮಾಡುತ್ತಾರೆ?

ಇಂದು ಪ್ರೇಮಿಗಳ ದಿನಾಚರಣೆ. ತಮ್ಮಿಷ್ಟದ ಹುಡುಗಿಗೆ ಅಥವಾ ಹುಡುಗನಿಗೆ ಪ್ರೇಮ ನಿವೇದನೆ ಮಾಡುವ ದಿನ. ಹಾಗಾಗಿ ಇಂದು ಅನೇಕರು ತಮ್ಮ ಪ್ರೀತಿ ಪಾತ್ರರಿಗೆ ಪ್ರೀತಿಯನ್ನು ಹಂಚಿಕೊಳ್ಳಲು ಬಯಸುತ್ತಾರೆ. ಉಡುಗೊರೆಯನ್ನು ನೀಡುತ್ತಾರೆ.

ಅಂದಹಾಗೆಯೇ ಇಂದು ಪ್ರೇಮಿಗಳ ದಿನಾಚರಣೆಯನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ? ಅದರ ಇತಿಹಾಸ ತಿಳಿದಿದೆಯಾ? ಇಲ್ಲಿದೆ ಮಾಹಿತಿ.

ವ್ಯಾಲೆಂಟೈನ್ಸ್​ ಡೇ ಅಥವಾ ಪ್ರೇಮಿಗಳ ದಿನಾಚರಣೆ ಹುಟ್ಟಿಕೊಳ್ಳಲು ಹಲವು ಮೂಲಗಳಿವೆ. ಫೆಬ್ರವರಿ ಮಧ್ಯದಲ್ಲಿ ರೋಮನ್​ ಹಬ್ಬವಾದ ಲುಪರ್ಕಾಲಿಯಾದಿಂದ ವ್ಯಾಲೆಂಟೈನ್ಸ್​ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸೇಂಟ್​ ವ್ಯಾಲೆಂಟೈನ್ಸ್​ ನಿಂದಾಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಸೇಂಟ್​ ವ್ಯಾಲೆಂಟೈನ್ಸ್​​ ಅವರನ್ನು ರೋಮನ್​ ಚಕ್ರವರ್ತಿ ಕ್ಲಾಡಿಯಸ್​​​ 2 ನಿಷೇಧಿಸಿ ಗಂಡನನ್ನು ಯುದ್ಧಕ್ಕೆ ಹೋಗದಂತೆ ರಹಸ್ಯ ವಿವಾಹ ಮಾಡಿದ್ದಕ್ಕಾಗಿ ಗಲ್ಲಿಗೇರಿಸಲಾಯಿತು. ಹಾಗಾಗಿ ಪೋಪ್​ ಗೆಲಾಸಿಯನ್​ 1 ಸುಮಾರು 14ನೇ ಶತಮಾನದವರೆಗೆ ವ್ಯಾಲೆಂಟೈನ್ಸ್ ಆಚರಿಸಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.

ಮತ್ತೊಂದು ಸಂಗತಿ ಎಂದರೆ ರೋಮನ್​​ ಪುರಾಣಗಳ ಪ್ರಕಾರ, ಅವರ ದೇವರಾದ ಕ್ಯುಪಿಡ್​​ ಪ್ರೀತಿಯ ಸಂಕೇತ ಎಂದು ಹೇಳಲಾಗುತ್ತಿದ್ದು, ಹೀಗಾಗಿ ವ್ಯಾಲೆಂಟೈನ್ಸ್​ ಡೇ ಆಚರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Valentines Day: ಪ್ರೀತಿ ಹುಟ್ಟಿದ್ದೇ ಹೀಗೆ.. ನಿಮ್ಮವಳಿಗೆ ‘I Love You’ ಎಂದು ಜೋರಾಗಿ ಹೇಳಿಬಿಡಿ

https://newsfirstlive.com/wp-content/uploads/2024/02/Love.jpg

Load More