Advertisment

Valentine's Day: ಒಂದೇ ಒಂದು ಅಪ್ಪುಗೆ, ದೇಹಕ್ಕೆ ಅದ್ಭುತ ಲಾಭ.. ಪ್ರೇಮಿಗಳೇ ನಿಮಗೆ ಈ 5 ಶಕ್ತಿ ಗೊತ್ತಿರಲಿ..!

author-image
Ganesh
Updated On
Valentine's Day: ಒಂದೇ ಒಂದು ಅಪ್ಪುಗೆ, ದೇಹಕ್ಕೆ ಅದ್ಭುತ ಲಾಭ.. ಪ್ರೇಮಿಗಳೇ ನಿಮಗೆ ಈ 5 ಶಕ್ತಿ ಗೊತ್ತಿರಲಿ..!
Advertisment
  • ಸಂಗಾತಿಯನ್ನು ತಬ್ಬಿಕೊಂಡರೆ ಏನೆಲ್ಲ ಲಾಭ ಆಗುತ್ತೆ..?
  • ಹೊಸ ಅಧ್ಯಯನ ಬಿಚ್ಚಿಟ್ಟಿದೆ ಅದ್ಭುತ ವಿಚಾರ
  • ಪ್ರೇಮಿಗಳ ದಿನ ಆಚರಿಸೋ Love ಬರ್ಡ್​​ ಇಲ್ ಕೇಳಿ

ಇವತ್ತು ಪ್ರೇಮಿಗಳ ದಿನ. ಪ್ರೀತಿಯಲ್ಲಿ ಬಿದ್ದ ಜೋಡಿಗಳು ಪ್ರೇಮೋಲ್ಲಾಸದಲ್ಲಿ ಮುಳುಗಿವೆ. ಪ್ರೀತಿ ಅಂದರೆ ಕೇವಲ ಎರಡಕ್ಷರದ ಪದವಲ್ಲ. ಅದರಲ್ಲಿ ಕೋಪ, ತಾಪಗಳು ಎಲ್ಲವೂ ಇವೆ. ಅದೇ ರೀತಿ ಮನಸ್ಸಿಗೆ ನೆಮ್ಮದಿ, ಸುಖ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣ ಕೂಡ ಇದೆ. ವಿಷಯ ಏನೆಂದರೆ ನಾವು ಪ್ರೀತಿಸುವವರನ್ನು ಅಪ್ಪಿಕೊಳ್ಳುವುದರಿಂದ ಎಷ್ಟೊಂದು ಲಾಭ ಇದೆ ಗೊತ್ತಾ?

Advertisment

ಪ್ರೀತಿಸಿವವರನ್ನು ಅಪ್ಪಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಒಳ್ಳೆಯದು ಅಂತಾ ವಿಜ್ಞಾನಿಗಳು ಹೇಳುತ್ತಾರೆ. ಹಾಗಂತ ನೀವು ಗಂಟೆಗಟ್ಟಲೇ ಪ್ರೇಮಿಯನ್ನು ತಬ್ಬಿ ನಿಲ್ಲಬೇಕಾಗಿಲ್ಲ. ಜಸ್ಟ್ 20 ಸೆಕೆಂಡ್ಸ್​ ಅಪ್ಪಿಕೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಅಂತಾ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯ (North carolina state university) ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:  ವಾಲೆಂಟೈನ್ ಡೇ ಸ್ಪೆಷಲ್​​; ನಟ ದರ್ಶನ್‌ಗೆ ವಿಜಯಲಕ್ಷ್ಮೀ ಸಿಕ್ಕಿದ್ದು ಎಲ್ಲಿ? ಪ್ರೀತಿ ಶುರುವಾಗಿದ್ಹೇಗೆ?

publive-image

ಒತ್ತಡ ಮತ್ತು ಆತಂಕ ದೂರ

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆತಂಕ ಮತ್ತು ಮನಸ್ಸಿನಲ್ಲಿ ಅಶಾಂತಿ ಸಾಮಾನ್ಯವಾಗಿದೆ. ಆದರೆ ಕೇವಲ 20 ಸೆಕೆಂಡುಗಳ ಕಾಲ ಅಪ್ಪಿಕೊಳ್ಳುವುದರಿಂದ ಒತ್ತಡ ಕಡಿಮೆಯಾಗುತ್ತದೆಯಂತೆ. ದೇಹದಲ್ಲಿ ಆಕ್ಸಿಟೋಸಿನ್ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಅಧ್ಯಯನ ಹೇಳಿದೆ.

Advertisment

ಮಾನಸಿಕ ಆರೋಗ್ಯ

ಸಂಗಾತಿ ಅಥವಾ ಪ್ರೀತಿಸುವ ಯಾರನ್ನಾದರೂ ತಬ್ಬಿಕೊಳ್ಳೋದ್ರಿಂದ ಮನಸ್ಥಿತಿ ಸುಧಾರಿಸಬಹುದು. ಇದು ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೇ ಹೃದಯಕ್ಕೂ ತುಂಬಾ ಒಳ್ಳೆಯದು. ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಅಪ್ಪುಗೆಯು ಮನಸ್ಸನ್ನು ಶಾಂತಗೊಳಿಸುತ್ತದೆ.

ದೈಹಿಕ ನೋವಿನಿಂದ ಪರಿಹಾರ

ಅಪ್ಪುಗೆ ಭಾವನೆಗಳಿಗೆ ಮಾತ್ರವಲ್ಲ, ದೇಹಕ್ಕೂ ಒಳ್ಳೆಯದು. ಅಪ್ಪುಗೆಯು ದೇಹದಲ್ಲಿ ನೋವು ನಿವಾರಕ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಕೆಲವು ಚಿಕಿತ್ಸೆಗಳಿಗಿಂತಲೂ ಇದು ಹೆಚ್ಚು ಸಹಾಯಕವಾಗಿದೆ.

ಇದನ್ನೂ ಓದಿ: Valentine’s Day: ಗಂಡನ ಸಾಲದಿಂದ ಚಿಗುರಿದ ಪ್ರೀತಿ.. ವಸೂಲಿಗೆ ಬರ್ತಿದ್ದ ಏಜೆಂಟ್ ಜೊತೆ ಲೇಡಿ ಪರಾರಿ..!

Advertisment

publive-image

ಹೃದಯದ ಆರೋಗ್ಯ

ಉತ್ತರ ಕೆರೊಲಿನಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ.. ಅಪ್ಪಿಕೊಳ್ಳುವ ಜನರಿಗೆ ಆರೋಗ್ಯಕರ ಹೃದಯ ಬಡಿತವಿದೆ ಎಂದು ಹೇಳಿದೆ. ಅಪ್ಪುಗೆಯು ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಇದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.

ಒತ್ತಡ ಹೆಚ್ಚಾದ್ರೆ ಡೇಂಜರ್​..!

ಅಧ್ಯಯನದಲ್ಲಿ ಅಪ್ಪಿಕೊಳ್ಳದ ದಂಪತಿ ಹೃದಯ ಬಡಿತ ನಿಮಿಷಕ್ಕೆ 10 ಬಡಿತಗಳಷ್ಟು ಹೆಚ್ಚಾಗಿರೋದು ಕಂಡುಬಂದಿದೆ. ಇದರರ್ಥ ಅಪ್ಪಿಕೊಳ್ಳದವರು ಹೆಚ್ಚಿನ ಒತ್ತಡ ಅನುಭವಿಸುತ್ತಾರೆ. ಆದ್ದರಿಂದ ನಾವು ಪ್ರೀತಿಸುವವರನ್ನು ತಬ್ಬಿಕೊಳ್ಳುವುದರಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಪ್ರಯೋಜನಕಾರಿ.

ಇದನ್ನೂ ಓದಿ: ನಿಜವಾಗಿಯೂ ಸೂರ್ಯ ಮುಳುಗದ ನಾಡು ಬ್ರಿಟನ್ ಅಲ್ಲ! ಮತ್ಯಾವ ದೇಶಗಳು ಅಂತ ಗೊತ್ತಾ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment