/newsfirstlive-kannada/media/post_attachments/wp-content/uploads/2025/02/LOVE-2.jpg)
ಇಂದು ಪ್ರೇಮಿಗಳ ದಿನ. ಪ್ರೀತಿಯ ಹಕ್ಕಿಗಳು ಪ್ರೇಮ ನಿವೇದನೆಯಲ್ಲಿ ಬ್ಯುಸಿ ಆಗಿವೆ. ಇದರ ಮಧ್ಯೆ ಬಿಹಾರ ಜಮುಯಿ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.
ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಗಂಡನನ್ನು ಮಹಿಳೆಯೊಬ್ಬಳು ತೊರೆದಿದ್ದಾಳೆ. ಅಸಲಿ ವಿಷಯ ಏನೆಂದರೆ ಗಂಡ ಮಾಡಿದ್ದ ಸಾಲ ವಸೂಲಿಗೆ ಬರುತ್ತಿದ್ದ ‘ಲೋನ್ ಏಜೆಂಟ್’ ಜೊತೆ ಆಕೆ ಪರಾರಿಯಾಗಿದ್ದಾಳೆ. ಪ್ರಕರಣದಲ್ಲಿ ಏಜೆಂಟ್ ಕುಟುಂಬ ಮದುವೆಗೆ ಸಮ್ಮತಿ ಸೂಚಿಸಿದೆ. ಆದರೆ ಮಹಿಳೆಯ ಕುಟುಂಬ ವಿರೋಧ ವ್ಯಕ್ತಪಡಿಸಿ ದೂರು ದಾಖಲಿಸಿದೆ.
ಇದನ್ನೂ ಓದಿ: ಹಸು, ಎಮ್ಮೆ ಹಾಲಿಗಿಂತ ಜಿರಳೆ ಹಾಲು ಬೆಸ್ಟ್.. ಆರೋಗ್ಯಕ್ಕೆ ಹೇಗೆಲ್ಲಾ ಉಪಯೋಗ ಆಗುತ್ತೆ ಇದು?
ಏನಿದು ಪ್ರಕರಣ..?
ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ ನಕುಲ್ ಶರ್ಮಾ ಎಂಬಾತ ಇಂದಿರಾ ಕುಮಾರಿಯನ್ನು 2022ರಲ್ಲಿ ಮದುವೆ ಆಗಿದ್ದ. ಮದುವೆ ಆರಂಭದಲ್ಲಿ ಚೆನ್ನಾಗಿದ್ದ ನಕುಲ್, ನಂತರದ ದಿನಗಳಲ್ಲಿ ಕುಡಿದು ಬಂದು ಗಲಾಟೆ ಮಾಡಲು ಶುರು ಮಾಡಿದ್ದ. ಕುಡಿತದ ದಾಸನಾಗಿದ್ದ ನಕುಲ್ ಒಂದಷ್ಟು ಸಾಲ ಮಾಡಿ, ಹೆಂಡತಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Valentine’s Day; ಪ್ರೇಮಿಗಳಿಗಾಗಿ ಇವತ್ತು ಮೂರು ಸಿನಿಮಾಗಳು ರಿಲೀಸ್..!
ಇತ್ತ ಹಣಕಾಸು ಸಂಸ್ಥೆಯ ಲೋನ್ ಏಜೆಂಟರ್ಗಳು ವಸೂಲಿಗಾಗಿ ಮನೆಗೆ ಬರಲು ಆರಂಭಿಸಿದ್ದರು. ಇದರಿಂದ ಇಂದಿರಾಗೆ ಬಚಾವ್ ಆಗೋದು ತುಂಬಾ ಕಷ್ಟ ಎನಿಸಿಬಿಟ್ಟಿತ್ತು. ಹೀಗೆ ಹಣ ವಸೂಲಿಗೆ ಬರುತ್ತಿದ್ದ ಪವನ್ ಕುಮಾರ್ ಎಂಬಾತ, ಇಂದಿರಾಗೆ ಭರವಸೆಯಾಗಿ ಕಂಡ. ಇಬ್ಬರ ನಡುವೆ ಸ್ನೇಹವಾಗಿ, ಪ್ರೇಮಾಂಕುರವಾಗಿದೆ. ಕೊನೆಗೆ ಇಂದಿರಾ ಪತಿಯನ್ನು ಬಿಟ್ಟು ಮದುವೆ ಆಗಲು ನಿರ್ಧರಿಸಿದ್ದಾಳೆ.
ಅಂತೆಯೇ ಫೆಬ್ರವರಿ 4 ರಂದು ಮನೆಯಿಂದ ಓಡಿ ಬಂದಿದ್ದಾಳೆ. ವಿಮಾನದ ಮೂಲಕ ಪಶ್ಚಿಮ ಬಂಗಾಳದ ಆಸಾನ್ಸೋಲ್ಗೆ ಪರಾರಿಯಾಗಿದ್ದಳು. ಫೆಬ್ರವರಿ 11 ರಂದು ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಮದುವೆ ನಂತರ ಇಬ್ಬರು ಜಮುಯಿಗೆ ಮರಳಿದ್ದಾರೆ.
ಇದನ್ನೂ ಓದಿ: ಕರುಳ ಕುಡಿ ಅನುಬಂಧ; ಮತ್ತೆ ತಾಯಿ ಮಡಿಲು ಸೇರಿದ ಮರಿಗಳು.. ಅರಣ್ಯ ಇಲಾಖೆ ಕಾರ್ಯಾಚರಣೆ ಹೇಗಿತ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ