ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್; ಸಚಿವ ನಾಗೇಂದ್ರ ಪಿಎ ಅರೆಸ್ಟ್​

author-image
Veena Gangani
Updated On
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ.. ಲೆಕ್ಕಕ್ಕೆ ಸಿಗದ 39 ಕೋಟಿ ಹಿಂದೆ ಬಿದ್ದ ಎಸ್​ಐಟಿ!
Advertisment
  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಆರೋಪ
  • ಜೂನ್​ 1ರಂದು ವಾಲ್ಮೀಕಿ ನಿಗಮದಲ್ಲಿ ಹಿರಿಯ ಅಧಿಕಾರಿಗಳು ಅರೆಸ್ಟ್‌
  • ಆರೋಪಿ ನಾಗರಾಜ್​ ಜೊತೆಗೆ ನಾಗೇಶ್ ಎಂಬಾತನನ್ನು ಬಂಧಿಸಿರೋ SIT

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಕೋಟ್ಯಾಂತರ ರೂಪಾಯಿ ಹಗರಣದ ತನಿಖೆ ತೀವ್ರಗೊಂಡಿದೆ. ಮೊನ್ನೆಯಷ್ಟೇ ಎಸ್‌ಐಟಿ ಅಧಿಕಾರಿಗಳು ವಾಲ್ಮೀಕಿ ನಿಗಮದ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದರು. ಇದೀಗ ಎಸ್ಐಟಿ ಅಧಿಕಾರಿಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್​ನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: NDA ಸಭೆಗೂ ಮುನ್ನವೇ ದೊಡ್ಡ ಬೇಡಿಕೆ ಇಟ್ಟ ನಿತೀಶ್ ಕುಮಾರ್.. ಮೋದಿಗೆ ಟೆನ್ಷನ್ ಹೆಚ್ಚಿಸಿದ ಜೆಡಿಯು

ವಾಲ್ಮೀಕಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಂದ್ರಶೇಖರ್ ಅವರು ಬರೆದಿದ್ದ ಡೆತ್‌ನೋಟ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕೃತ ಬ್ಯಾಂಕ್​ ಖಾತೆಯಿಂದ ಆರ್‌ಬಿಎಲ್‌ ಬ್ಯಾಂಕ್‌ನಲ್ಲಿರೋ ಹತ್ತು ಖಾಸಗಿ ಕಂಪನಿಗಳು ಮತ್ತು ಎಂಟು ವ್ಯಕ್ತಿಗಳ ಖಾತೆಗಳಿಗೆ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

publive-image

ಇದನ್ನೂ ಓದಿ:BREAKING: ವಾಲ್ಮೀಕಿ ನಿಗಮದ ಹಗರಣಕ್ಕೆ ಹೊಸ ಟ್ವಿಸ್ಟ್.. ಇಬ್ಬರು ಹಿರಿಯ ಅಧಿಕಾರಿಗಳು ಅರೆಸ್ಟ್!

ಈ ಹಗರಣ ಬೆಳಕಿಗೆ ಬಂದ ಬಳಿಕ ವಾಲ್ಮೀಕಿ ನಿಗಮದ ಅಧಿಕಾರಿಗಳು ನಾಪತ್ತೆಯಾಗಿದ್ದರು. ಜೂನ್​ 1ರಂದು ಇಬ್ಬರನ್ನೂ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಪದ್ಮನಾಭ್ ಮತ್ತು ಪರುಶುರಾಮ್ ಬಂಧಿತ ಆರೋಪಿತ ಅಧಿಕಾರಿಗಳಾಗಿದ್ದರು. ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್​ನಲ್ಲಿ ಪ್ರಮುಖ ಪಾತ್ರವಹಿಸಿದ ಸಚಿವ ನಾಗೇಂದ್ರ ಪಿಎ ನೆಕ್ಕುಂಟಿ ನಾಗರಾಜ್​ನನ್ನು ಎಸ್​ಐಟಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಇವರ ಜೊತೆಗೆ ನಾಗರಾಜ್ ಸ್ನೇಹಿತ ನಾಗೇಶ್ ಎಂಬಾತನನ್ನ ಎಸ್ಐಟಿ ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment